![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Oct 10, 2023, 12:55 PM IST
ಚೆನ್ನೈ: ದಳಪತಿ ವಿಜಯ್ ಅವರ ʼಲಿಯೋʼ ಸಿನಿಮಾದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾದಲ್ಲಿ ಸಿನಿಮಾದ ಟ್ರೇಲರ್ ಸದ್ದು ಮಾಡಿದೆ. ಆ ಮೂಲಕ ಕುತೂಹಲ ಹೆಚ್ಚಿಸಿದೆ.
ಲೋಕೇಶ್ ಕನಕರಾಜ್ – ವಿಜಯ್ ʼಮಾಸ್ಟರ್ʼ ಬಳಿಕ ಮತ್ತೆ ಜೊತೆಯಾಗುತ್ತಿರುವುದರಿಂದ ಸಿನಿಮಾದ ಮೇಲೆ ಬಹು ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಅದರಂತೆ ಟ್ರೇಲರ್ ಕೂಡ ಹೈಪ್ ಹೆಚ್ಚಿಸಿದ್ದು, ಬಿಗ್ ಸ್ಕ್ರೀನ್ ಮೇಲೆ ʼಲಿಯೋʼ ಅಬ್ಬರ ನೋಡಲು ಫ್ಯಾನ್ಸ್ ಗಳು ಕಾಯುತ್ತಿದ್ದಾರೆ.
ಇತ್ತೀಚೆಗೆ ʼಲಿಯೋʼ ಚಿತ್ರಕ್ಕೆ ʼಯು/ಎʼ ಸರ್ಟಿಫಿಕೇಟ್ ನ್ನು ಸೆನ್ಸಾರ್ ಬೋರ್ಡ್ ನೀಡಿತ್ತು. ಇದೀಗ ಆ ಸರ್ಟಿಫಿಕೇಟ್ ಇಂಟರ್ ನೆಟ್ ನಲ್ಲಿ ವೈರಲ್ ಆಗಿದೆ. ಇದರ ಜೊತೆಗೆ ಸಿನಿಮಾದಲ್ಲಿ ಏನೆಲ್ಲಾ ಬದಲಾವಣೆ ಮಾಡಲು ಸೂಚನೆ ಸಿಕ್ಕಿದೆ ಎನ್ನುವುದರ ಬಗ್ಗೆ ತಿಳಿದುಬಂದಿದೆ.
ಇದನ್ನೂ ಓದಿ: Animal: ರಣ್ಬೀರ್ ಜೊತೆ ಲಿಪ್ ಲಾಕ್ ಕಿಸ್ ಮಾಡಿದ ರಶ್ಮಿಕಾ; ಪೋಸ್ಟರ್ ವೈರಲ್
13 ಕಡ್ಡಾಯ ಬದಲಾವಣೆಯನ್ನು ಸಿನಿಮಾದಲ್ಲಿ ಮಾಡಬೇಕೆಂದು ಸೆನ್ಸಾರ್ ಬೋರ್ಡ್ ಸೂಚನೆ ನೀಡಿದೆ. ಸಿನಿಮಾದಲ್ಲಿನ ಕೆಲ ನಿಂದನೆಯ ಡೈಲಾಗ್ಸ್ ಗಳನ್ನು ಮ್ಯೂಟ್ (ಬೀಪ್) ಮಾಡಲು ಹಾಗೂ ಕೆಲ ಹಿಂಸಾತ್ಮಕ ದೃಶ್ಯಗಳನ್ನು ತೆಗೆದು ಹಾಕುವಂತೆ ಸೆನ್ಸಾರ್ ಬೋರ್ಡ್ ಹೇಳಿದೆ. ಈ ಎಲ್ಲಾ ಕಟ್ ಗಳನ್ನು ಮಾಡಿದ ಬಳಿಕ ಸಿನಿಮಾದ ರನ್ ಟೈಮ್ 2:44 ಗಂಟೆಗಳಾಗಿದೆ.
ಲಿಯೋʼ ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್ ಅವರು ಮ್ಯೂಸಿಕ್ ನೀಡಿದ್ದು, ತ್ರಿಷಾ ಕೃಷ್ಣನ್, ಸಂಜಯ್ ದತ್ ,ಅರ್ಜುನ್, ಮಿಸ್ಕಿನ್, ಮನ್ಸೂರ್ ಅಲಿ ಖಾನ್, ಗೌತಮ್ ಮೆನನ್, ಪ್ರಿಯಾ ಆನಂದ್, ಮ್ಯಾಥ್ಯೂ ಥಾಮಸ್, ಸ್ಯಾಂಡಿ ಮಾಸ್ಟರ್ ಮುಂತಾದ ನಟರು ಸಿನಿಮಾದಲ್ಲಿ ನಟಿಸಿದ್ದಾರೆ.
ಇದೇ ಅಕ್ಟೋಬರ್ 19 ರಂದು ಸಿನಿಮಾ ತೆರೆಗೆ ಬರಲಿದೆ.
#Leo Censor Certificate is Here.
Just Few Minor Cuts👏 pic.twitter.com/ByWd5pIgrz
— Christopher Kanagaraj (@Chrissuccess) October 9, 2023
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.