‘ಮಹಾಭಾರತ’ ಧಾರವಾಹಿಯ ನಟ ಸತೀಶ್ ಕೌಲ್ ಕೋವಿಡ್ ಸೋಂಕಿಗೆ ಬಲಿ
ಬಿ.ಆರ್.ಚೋಪ್ರಾ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ ‘ಮಹಾಭಾರತ’ ಧಾರವಾಹಿಯಲ್ಲಿ ಸತೀಶ್ ಅವರು ಇಂದ್ರನ ಪಾತ್ರಕ್ಕೆ ಜೀವ ತುಂಬಿದ್ದರು.
Team Udayavani, Apr 10, 2021, 5:14 PM IST
ಲುಧಿಯಾನ: ಕಿರುತೆರೆಯ ಹಾಗೂ ಬೆಳ್ಳಿ ತೆರೆಯಲ್ಲಿ ಮಿಂಚಿದ್ದ ಹಿರಿಯ ನಟ ಸತೀಶ್ ಕೌಲ್ ಇಂದು (ಏಪ್ರಿಲ್ 10) ನಿಧನರಾಗಿದ್ದಾರೆ. ಮಹಾಮಾರಿ ಕೋವಿಡ್-19 ಸೋಂಕಿಗೆ ಕೌಲ್ ಬಲಿಯಾಗಿದ್ದಾರೆ.
74 ವರ್ಷ ವಯಸ್ಸಿನ ಸತೀಶ್ ಅವರಿಗೆ ಕಳೆದ ಆರು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ಪಾಸಿಟಿವ್ ಸೋಂಕು ತಗುಲಿರುವುದು ದೃಢ ಪಟ್ಟಿತ್ತು. ಇಂದು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ಸತೀಶ್ ಕೌಲ್ ಅವರ ಸಹೋದರಿ ಸತ್ಯದೇವಿ ಮಾಧ್ಯಮಗಳಿಗೆ ಹೇಳಿದ್ದಾರೆ.
ಸತೀಶ್ ಅವರು ಅದ್ಬುತ ಕಲಾವಿದ. ಅವರ ಕಲಾತ್ಮಕ ಅಭಿನಯಕ್ಕೆ ಸಾಕ್ಷಿಯಾಗಿದ್ದು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ‘ಮಹಾಭಾರತ’ ಧಾರವಾಹಿ. ಬಿ.ಆರ್.ಚೋಪ್ರಾ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ ಈ ಧಾರವಾಹಿಯಲ್ಲಿ ಸತೀಶ್ ಅವರು ಇಂದ್ರನ ಪಾತ್ರಕ್ಕೆ ಜೀವ ತುಂಬಿದ್ದರು.
‘ಸರಸ್ವತಿ ಇದ್ದ ಕಡೆ ಲಕ್ಷ್ಮೀ ನೆಲೆಸುವುದಿಲ್ಲ’ ಎನ್ನುವ ಮಾತು ಕಲೆಯನ್ನೇ ನಂಬಿಕೊಂಡಿದ್ದ ಸತೀಶ್ ಅವರ ಜೀವನದಲ್ಲಿ ಸತ್ಯವಾಗಿತ್ತು. ಸುಮಾರು 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಈ ನಟ ಕೊನೆಯ ದಿನಗಳಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲುವಂತಾಯಿತು. ಕಳೆದ ವರ್ಷ ಔಷಧ ಖರಿದೀಸಲೂ ಇವರು ಪರಿತಪಿಸುವಂತಾಯಿತು. ಅಂದು ಇವರು ಚಿತ್ರರಂಗದ ನೆರವು ನಿರೀಕ್ಷಸಿದ್ದರು.
ಸತೀಶ್, 2011 ರಲ್ಲಿ ಪಂಜಾಬ್‍ನಿಂದ ಮುಂಬೈಗೆ ಬಂದು ಅಭಿನಯ ತರಬೇತಿ ಶಾಲೆ ತೆರೆದರು. ಆದರೆ, ಅದು ಕೈ ಹಿಡಿಯಲಿಲ್ಲ. ತಮ್ಮ ಹುಟ್ಟೂರಿನಲ್ಲಿ ಸ್ವಂತ ಮನೆ ಹೊಂದುವ ಕನಸು ಕಂಡಿದ್ದ ಸತೀಶ್, ಅದಕ್ಕಾಗಿ ಬಣ್ಣದ ಬದುಕು ನಂಬಿಕೊಂಡಿದ್ದರು. ಇಳಿವಯಸ್ಸಿನಲ್ಲಿಯೂ ಸಿನಿಮಾಗಳ ಅವಕಾಶಕ್ಕೆ ಎದುರು ನೋಡುತ್ತಿದ್ದರು. ನನ್ನಲ್ಲಿ ಅಭಿನಯದ ಕಿಚ್ಚು ಇನ್ನೂ ಇದೆ. ಯಾರಾದರೂ ಅವಕಾಶ ನೀಡಿದರೆ, ಅದು ಎಂತಹದೇ ಪಾತ್ರವಾಗಿದ್ದರೂ ಅಚ್ಚುಕಟ್ಟಾಗಿ ನಿಭಾಯಿಸುವೆ ಎಂದು ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.