![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 20, 2022, 3:33 PM IST
ಮುಂಬಯಿ: ಶಾರುಖ್ ಖಾನ್ ನಟನೆಯ ʼಪಠಾಣ್ʼ ಚಿತ್ರದ ʼಬೇಷರಂ ರಂಗ್ʼ ಹಾಡಿನ ಬಳಿಕ ಮತ್ತೊಂದು ಹಾಡು ರಿಲೀಸ್ ಮಾಡಲು ಚಿತ್ರ ತಂಡ ರೆಡಿಯಾಗಿದೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫಸ್ಟ್ ಲುಕ್ ರಿಲೀಸ್ ಮಾಡಿ, ಹಾಡಿನ ರಿಲೀಸ್ ಡೇಟನ್ನು ರಿವೀಲ್ ಮಾಡಿದೆ. ಕಿಂಗ್ ಖಾನ್ ಉದ್ದ ಕೂದಲು ಬಿಟ್ಟುಕೊಂಡು, ಸನ್ ಗ್ಲಾಸ್ ಹಾಕಿಕೊಂಡು ರಫ್ & ಟಫ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಹಾಟ್ ಲುಕ್ ನಲ್ಲಿ ಶಾರುಖ್ ಪಕ್ಕ ನಿಂತುಕೊಂಡಿರುವ ಪೋಸ್ಟರನ್ನು ಚಿತ್ರ ತಂಡ ರಿಲೀಸ್ ಮಾಡಿದೆ.
ಇದನ್ನೂ ಓದಿ: ʼಕಾಂತಾರʼಕ್ಕೆ 400 ಕೋಟಿ ಲಾಭ: ರಿಷಬ್ ಶೆಟ್ಟಿ ಸೇರಿ ನಟರು ಪಡೆದ ಸಂಭಾವನೆ ಎಷ್ಟು…?
ʼಜೂಮ್ ಜೋ ಪಠಾಣ್ʼ ಹಾಡಿನೊಂದಿಗೆ ಡ್ಯಾನ್ಸ್ ಮಾಡಲು ಸಿದ್ದರಾಗಿ. ʼಪಠಾಣ್ʼ ಸಿನಿಮಾದ ಎರಡನೇ ಹಾಡು ಡಿ.22 ರಂದು ರಿಲೀಸ್ ಆಗಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚಿತ್ರ ತಂಡ ಮಾಹಿತಿ ಹಂಚಿಕೊಂಡಿದೆ.
ಈ ಹಾಡು ನಾಯಕನ ಸುತ್ತ ಸಾಗುತ್ತದೆ ಎಂದು ನಿರ್ದೇಶಕ ಸಿದ್ಧಾರ್ಥ್ ಆನಂದ್ ಹೇಳಿದ್ದಾರೆ. ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ 2023 ರ ಜನವರಿ 25 ರಂದು ಸಿನಿಮಾ ತೆರೆಗೆ ಬರಲಿದೆ. ಶಾರುಖ್ , ದೀಪಿಕಾ, ಜಾನ್ ಅಬ್ರಹಾಂ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ʼಪಠಾಣ್ʼ ಸಿನಿಮಾದ ʼಬೇಷರಂ ರಂಗ್ʼ ಹಾಡಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಕೇಸರಿ ಬಣ್ಣವನು ಹಾಡಿನಲ್ಲಿ ಅವಮಾನಿಸಲಾಗಿದೆ ಎಂದು ಆರೋಪ ಕೇಳಿ ಬಂದಿತ್ತು.
EXCLUSIVE: #JhoomeJoPathaan featuring #ShahRukhKhan & #DeepikaPadukone out on December 22. #SiddharthAnand says, “The song embodies the personality traits of this super spy #Pathaan who has irresistible swagger that is infectious.”https://t.co/tUjvGnpVq5
— Himesh (@HimeshMankad) December 20, 2022
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.