ಗೆಳೆಯ ನವೀನ್ ಜತೆ ಹಸೆಮಣೆ ಏರಿದ ನಟಿ ಭಾವನಾ: ಫೋಟೋ ಆಲ್ಬಂ
Team Udayavani, Jan 22, 2018, 3:38 PM IST
ನವದೆಹಲಿ: ಬಹುಕಾಲದ ಗೆಳೆಯ, ಚಿತ್ರ ನಿರ್ಮಾಪಕ ನವೀನ್ ಜತೆ ಮಳೆಯಾಳಂ ನಟಿ ಭಾವನಾ ಸೋಮವಾರ ಕೇರಳದಲ್ಲಿ ಸಪ್ತಪದಿ ತುಳಿದಿದ್ದಾರೆ.
ತುಂಬಾ ಖಾಸಗಿಯಾಗಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ನವೀನ್ ಮತ್ತು ಭಾವನಾ ಆಪ್ತ ಗೆಳೆಯರು, ಕುಟುಂಬ ವರ್ಗದವರು ಮಾತ್ರ ಪಾಲ್ಗೊಂಡಿದ್ದರು. ಇಂದು ಸಂಜೆ ತ್ರಿಶ್ಶೂರಿನಲ್ಲಿ ಆರತಕ್ಷತೆ ನಡೆಯಲಿದೆ.
ಕಳೆದ ವರ್ಷ ಮಾರ್ಚ್ ನಲ್ಲಿ ಭಾವನಾ ಮತ್ತು ನವೀನ್ ನಿಶ್ಚಿತಾರ್ಥ ನಡೆದಿತ್ತು. ಭಾವನಾ ವಿವಾಹ ಸಮಾರಂಭದಲ್ಲಿ ತೊಟ್ಟಿದ್ದ ಉಡುಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾವನಾ ಚಿನ್ನದ ಬಣ್ಣದ ಕಾಂಜೀವರಂ ಸೀರೆಯಲ್ಲಿ ಕಂಗೊಳಿಸುತ್ತಿದ್ದರೆ, ನವೀನ್ ಸಾಂಪ್ರದಾಯಿ ಉಡುಗೆ ಮೂಲಕ ಗಮನ ಸೆಳೆದಿದ್ದಾರೆ.
ನವೀನ್ ಅವರು ಗಣೇಶ್–ಭಾವನಾ ಅಭಿನಯದ ರೋಮಿಯೊ ಚಿತ್ರವನ್ನು ನಿರ್ಮಿಸಿದ್ದರು. ವಿಷ್ಣುವರ್ಧನ, ಟೋಪಿವಾಲಾ, ಜಾಕಿ ಸೇರಿ ಇತರೆ ಕನ್ನಡ ಚಿತ್ರಗಳಲ್ಲಿ ಭಾವನಾ ಅಭಿಯಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.