Review bombing: ವಿಮರ್ಶಕರಿಂದ ಸಿನಿಮಾಗಳು ಸಾಯಲು ಸಾಧ್ಯವಿಲ್ಲ; ನಟ ಮಮ್ಮುಟ್ಟಿ
Team Udayavani, Nov 20, 2023, 6:20 PM IST
ಕೊಚ್ಚಿ: ಮಾಲಿವುಡ್ ನಲ್ಲಿ ಕಳೆದ ಕೆಲ ಸಮಯದಿಂದ ಸಿನಿಮಾಗಳಿಗೆ ನೆಗೆಟಿವ್ ರಿವ್ಯೂ ನೀಡುವ ವಿಚಾರದಲ್ಲಿ ದೂರುಗಳು ದಾಖಲಾಗಿವೆ.
ಇತ್ತೀಚೆಗೆ ನಟ ದಿಲೀಪ್ ಹಾಗೂ ತಮನ್ನಾ ಅಭಿನಯದ ʼಬಾಂದ್ರಾʼ ಚಿತ್ರತಂಡ ಸಿನಿಮಾದ ಕುರಿತು ನೆಗೆಟಿವ್ ರಿವ್ಯೂ ನೀಡಿದ ಕಾರಣಕ್ಕಾಗಿ ಯೂಟ್ಯೂಬರ್ಸ್ ಹಾಗೂ ವ್ಲಾಗರ್ ಗಳ ವಿರುದ್ಧ ಚಿತ್ರತಂಡವೊಂದು ದೂರು ದಾಖಲಿಸಿತ್ತು. ಇದಕ್ಕೂ ಮೊದಲು ಅಕ್ಟೋಬರ್ 13 ರಂದು ರಿಲೀಸ್ ಆದ ʼರಾಹೆಲ್ ಮಕಲ್ʼ ಸಿನಿಮಾದ ನಿರ್ದೇಶಕ ಉಬೈನಿ ಇ ಕೂಡ ನೆಗೆಟಿವ್ ರಿವ್ಯೂ ನೀಡಿದ ಫೇಸ್ ಬುಕ್, ಯೂಟ್ಯೂಬರ್ಸ್ ಹಾಗೂ ವ್ಲಾಗರ್ಸ್ ಗಳ ವಿರುದ್ಧ ದೂರು ದಾಖಲಿಸಿದ್ದರು.
ಇದರ ಬೆನ್ನಲ್ಲೇ ಈ ಕುರಿತು ಮಾಲಿವುಡ್ ಸಿನಿಮಾರಂಗದ ಹಿರಿಯ ನಟ ಮಮ್ಮುಟ್ಟಿ ಅವರು ಮಾತನಾಡಿದ್ದಾರೆ.
ಮಮ್ಮುಟ್ಟಿ ಹಾಗೂ ಜ್ಯೋತಿಕಾ ಪ್ರಧಾನ ಪಾತ್ರದಲ್ಲಿರುವ ʼ ಕಾತಲ್-ದಿ ಕೋರ್ʼ ಸಿನಿಮಾ ಇದೇ ನ.23 ರಂದು ತೆರೆ ಕಾಣಲಿದೆ. ಪ್ರಚಾರದ ಅಂಗವಾಗಿ ಸಿನಿಮಾ ತಂಡ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿತು. ಇದೇ ವೇಳೆ ಮಮ್ಮುಟ್ಟಿ ಸಿನಿಮಾಗಳ ವಿಮರ್ಶೆ ಬಗ್ಗೆ ಮಾತನಾಡಿದ್ದಾರೆ.
ಕೋಟ್ಯಂತರ ರೂಪಾಯಿಯಲ್ಲಿ ತಯಾರಾದ ಮತ್ತು ಅನೇಕ ಜನರ ಪರಿಶ್ರಮದಿಂದ ಮಾಡಿದ ಸಿನಿಮಾವೊಂದು ವಿಮರ್ಶೆಯಿಂದ ಥಿಯೇಟರ್ ನಲ್ಲಿ ಸೋಲುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು “ಒಂದು ವಿಮರ್ಶೆಯಿಂದಾಗಿ ಸಿನಿಮಾದ ಸೋಲು ಆಗುವುದಿಲ್ಲ. ವಿಮರ್ಶೆಯು ವಿಮರ್ಶಕರ ದೃಷ್ಟಿಕೋನವನ್ನು ಆಧರಿಸಿದೆ. ವಿಮರ್ಶೆಗಳನ್ನು ನಿಲ್ಲಿಸುವುದರಿಂದ ಸಿನಿಮಾಕ್ಕೇನು ಹೊಡೆತ ಬೀಳುವುದಿಲ್ಲ ಅಥವಾ ಲಾಭವಾಗುದಿಲ್ಲ. ಯಾವ ಸಿನಿಮಾವನ್ನು ನೋಡಬೇಕೆನ್ನುವ ನಿರ್ಧಾರವನ್ನು ಪ್ರೇಕ್ಷಕರು ಮಾಡುತ್ತಾರೆ. ಇದಲ್ಲದೆ ನಮಗೆ ಅಭಿಪ್ರಾಯವನ್ನು ಹೇಳುವ ಸ್ವಾತಂತ್ಯವಿದೆ” ಎಂದು ಮಮ್ಮುಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: Kollywood: ಅನಾರೋಗ್ಯ: ಹಿರಿಯ ನಟ ವಿಜಯಕಾಂತ್ ಆಸ್ಪತ್ರೆಗೆ ದಾಖಲು; ಐಸಿಯುನಲ್ಲಿ ಚಿಕಿತ್ಸೆ
“ಸಿನಿಮಾ ನೋಡಿದ ಬಳಿಕ ಅಭಿಪ್ರಾಯಗಳು ನಮ್ಮದೇ ಆಗಿರಬೇಕು ಹೊರತು ಇತರರದ್ದಲ್ಲ. ನಾವು ಇತರರ ಅಭಿಪ್ರಾಯವನ್ನು ಕೇಳಿ ಮುಂದುವರೆದರೆ ಆಗ ನಮ್ಮ ಸ್ವಂತ ಅಭಿಪ್ರಾಯಗಳನ್ನು ಕಳೆದುಕೊಳ್ಳುತ್ತೇವೆ. ಹಾಗಾಗಿ ಪ್ರತಿಯೊಬ್ಬರು ತಮ್ಮ ತಮ್ಮ ಅಭಿಪ್ರಾಯಕ್ಕೆ ತಕ್ಕಂತೆ ಸಿನಿಮಾ ನೋಡಬೇಕು” ಎಂದರು.
ಜಿಯೋ ಬೇಬಿ ನಿರ್ದೇಶನದ ʼಕಾತಲ್-ದಿ ಕೋರ್ʼ ಸಿನಿಮಾದ ಕಥೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆಯುತ್ತದೆ. ಸಿನಿಮಾದಲ್ಲಿ ಮಮ್ಮುಟ್ಟಿ ಮ್ಯಾಥ್ಯೂ ಎನ್ನುವ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಮಮ್ಮುಟ್ಟಿ ಸಲಿಂಗಕಾಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
#Mammootty always has a valid point on anything social or political, here’s about the much controversial “Review Bombing”pic.twitter.com/gvVuOW6nBZ
— ALIM SHAN (@AlimShan_) November 20, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.