ನಟಿ ಸನ್ನಿ ಪತಿ ಕಾರಿನ ಡುಬ್ಲಿಕೇಟ್ ನಂಬರ್ ಬಳಸಿ ಸಿಕ್ಕಿಬಿದ್ದ ಉದ್ಯಮಿ..!
ಈ ನಂಬರ್ ಆತನಿಗೆ ಲಕ್ಕಿಯಾಗಿತ್ತಂತೆ. ಈ ಉದ್ದೇಶದಿಂದ ನಂಬರ್ ಡುಬ್ಲಿಕೇಟ್ ಮಾಡಿದ್ದನಂತೆ
Team Udayavani, Feb 25, 2021, 7:52 PM IST
ಮುಂಬೈ : ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಪತಿ ಡೇನಿಯಲ್ ಕಾರಿನ ಡುಬ್ಲಿಕೇಟ್ ನಂಬರ್ ಬಳಸುತ್ತಿದ್ದ ಉದ್ಯಮಿಯೋರ್ವನನ್ನು ಮುಂಬೈನ ವರ್ಸೋವಾ ಪೊಲೀಸರು ಬಂಧಿಸಿದ್ದಾರೆ.
38 ವರ್ಷದ ಪಿಯೂಶ್ ಸೇನ್ ಬಂಧಿತ ಆರೋಪಿ. ಈತ ತನ್ನ ಮರ್ಸಿಡಿಸ್ ಗೆ ಸನ್ನಿ ಲಿಯೋನ್ ಕುಟುಂಬದ ಕಾರಿನ ನಂಬರ್ ಬಳಸುತ್ತಿದ್ದ. ಸಂಖ್ಯಾಶಾಸ್ತ್ರೀಯ ಪ್ರಕಾರ ಈ ನಂಬರ್ ಆತನಿಗೆ ಲಕ್ಕಿಯಾಗಿತ್ತಂತೆ. ಈ ಉದ್ದೇಶದಿಂದ ನಂಬರ್ ಡುಬ್ಲಿಕೇಟ್ ಮಾಡಿದ್ದೆ ಎಂದು ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ.
ಬೆಳಕಿಗೆ ಬಂದಿದ್ದು ಹೇಗೆ ?
ಟ್ರಾಫಿಕ್ ನಿಮಯ ಉಲ್ಲಂಘಿಸಿದ್ದಕ್ಕಾಗಿ ಹಲವು ದಂಡದ ಚಲನ್ ಗಳು ಸನ್ನಿ ಲಿಯೋನ್ ಮನೆಗೆ ಬಂದಿದ್ದವು. ಈ ಕುರಿತು ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಪಿಯೋಶ್ ಸೇನ್ ಬಂಧಿಸಿ, ಐಪಿಸಿ ಸೆಕ್ಷನ್ 420,465 ಹಾಗೂ 468ರಡಿ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಕೆಲ ತಿಂಗಳ ಹಿಂದೆಯಷ್ಟೇ ಉದ್ಯಮಿ ರತನ್ ಟಾಟಾ ಅವರ ಕಾರಿನ ಡುಬ್ಲಿಕೇಟ್ ನಂಬರ್ ಬಳಸುತ್ತಿದ್ದ ಆರೋಪದಲ್ಲಿ ಮಹಿಳೆಯೋರ್ವಳನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಈಕೆಯೂ ಕೂಡ ಸಂಖ್ಯಾಶಾಸ್ತ್ರೀಯ ಪ್ರಕಾರ ಲಕ್ಕಿ ಎನ್ನುವ ಕಾರಣಕ್ಕೆ ರತನ್ ಟಾಟಾ ಅವರ ನಂಬರ್ ಬಳಿಸಿರುವುದಾಗಿ ಹೇಳಿದ್ದಳು. ಜತೆಗೆ ಆ ನಂಬರ್ ಟಾಟಾ ಅವರ ಕಾರಿನದು ಎಂದು ನನಗೆ ತಿಳಿದಿರಲಿಲ್ಲ ಎಂದಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Mika Singh: ಮಿಕಾ ಹಾಡಿಗೆ ಫಿದಾ..ಪಾಕ್ ಅಭಿಮಾನಿಯಿಂದ 3 ಕೋಟಿ ರೂ. ವಾಚ್, ಚಿನ್ನ ಗಿಫ್ಟ್
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
Mumbai: ಬಾಲಿವುಡ್ ನಟ ಶಾರುಖ್ ಖಾನ್ ಗೆ ಜೀವ ಬೆದರಿಕೆ ಹಾಕಿದ ವಕೀಲ ಛತ್ತೀಸ್ ಗಢದಲ್ಲಿ ಬಂಧನ
MUST WATCH
ಹೊಸ ಸೇರ್ಪಡೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.