ತ್ರಿಶಾ ಬಗ್ಗೆ ‘Bedroom scene’ ಹೇಳಿಕೆ: ಕೊನೆಗೂ ಕ್ಷಮೆಯಾಚಿಸಿದ ನಟ ಮನ್ಸೂರ್
Team Udayavani, Nov 24, 2023, 3:18 PM IST
ಚೆನ್ನೈ: ನಟಿ ತ್ರಿಶಾ ಕುರಿತು ʼಬೆಡ್ ರೂಮ್ʼ ಸೀನ್ ಹೇಳಿಕೆ ನೀಡಿದ್ದ ಹಿರಿಯ ನಟ ಮನ್ಸೂರ್ ಅಲಿಖಾನ್ ವಿವಾದದ ಬಳಿಕ ಕೊನೆಗೂ ಕ್ಷಮೆಯಾಚಿಸಿದ್ದಾರೆ.
ಮನ್ಸೂರ್ ಹೇಳಿದ್ದೇನು?:
“ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಕೇಳಿದಾಗ, ಸಿನಿಮಾದಲ್ಲಿ ಅವರೊಂದಿಗೆ ಬೆಡ್ ರೂಮ್ ಸೀನ್ ಇರುತ್ತದೆ ಅನ್ಕೊಂಡಿದ್ದೆ. ಅವಳನ್ನು ಎತ್ತಿಕೊಂಡು ಬೆಡ್ ರೂಮ್ ಗೆ ಹೋಗುವ ದೃಶ್ಯವಿದೆ ಅಂದುಕೊಂಡಿದ್ದೆ. ಈ ರೀತಿ ನಾನು ಈ ಹಿಂದಿನ ಸಿನಿಮಾದಲ್ಲಿ ಅನೇಕ ನಟಿಯರೊಂದಿಗೆ ಮಾಡಿದ್ದೇನೆ. ನಾನು ತುಂಬಾ ರೇಪ್ ಸೀನ್ ಗಳನ್ನು ಮಾಡಿದ್ದೇನೆ. ಇದೇನು ನನಗೆ ಹೊಸತಲ್ಲ. ಆದರೆ ಇವರು(ಚಿತ್ರತಂಡ) ನನಗೆ ಕಾಶ್ಮೀರದಲ್ಲಿ ಚಿತ್ರೀಕರಣವಾಗುವ ವೇಳೆ ಸೆಟ್ ನಲ್ಲಿ ತ್ರಿಶಾಳನ್ನು ತೋರಿಸಲೇ ಇಲ್ಲ” ಎಂದಿದ್ದರು.
ಈ ಹೇಳಿಕೆಗೆ ಸ್ವತಃ ತ್ರಿಶಾ ಗರಂ ಆಗಿದ್ದರು, ಕಲಾವಿದರು, ನಿರ್ದೇಶಕರು ಟೀಕಿಸಿದ್ದರು. ಮಹಿಳಾ ಆಯೋಗ ಕೇಸ್ ದಾಖಲಿಸುವುದಾಗಿ ಹೇಳಿತ್ತು. ಚೆನ್ನೈ ಪೊಲೀಸರು ದೂರು ದಾಖಲಿಸಿ ಸಮನ್ಸ್ ನೀಡಿದ್ದರು. ಇಷ್ಟೆಲ್ಲಾ ಆದರೂ ಮನ್ಸೂರ್ ಅವರು ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದಿದ್ದರು.
ಇದೀಗ ಕೊನೆಗೂ ಅವರು ತ್ರಿಶಾ ಅವರಲ್ಲಿ ಕ್ಷಮೆಯಾಚಿಸಿದ್ದಾರೆ. ಶುಕ್ರವಾರ (ನವೆಂಬರ್ 24 ರಂದು) ಮನ್ಸೂರ್ ಅಲಿ ಖಾನ್ ತಮಿಳಿನಲ್ಲಿ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.
“ನನ್ನ ಸಹನಟಿ ತ್ರಿಶಾ, ದಯವಿಟ್ಟು ನನ್ನನ್ನು ಕ್ಷಮಿಸಿ. ನೀವು ವೈವಾಹಿಕ ಜೀವನಕ್ಕೆ ಕಾಲಿಡುವ ವೇಳೆ, ನಿಮ್ಮನ್ನು ಆಶೀರ್ವದಿಸುವ ಅವಕಾಶ ನನಗೆ ಸಿಗುತ್ತದೆ ಎಂದು ಭಾವಿಸುತ್ತೇನೆ” ಎಂದು ಅವರು ಬರೆದಿದ್ದಾರೆ.
ಕಳೆದ ಒಂದು ವಾರದಿಂದ ಯುದ್ಧವನ್ನು ಎದುರಿಸುತ್ತಿದ್ದೇನೆ ಎಂದಿದ್ದಾರೆ. ತಮ್ಮ ಪರವಾಗಿ ಹೋರಾಡಿದ ನಾಯಕರು, ನಟರು ಮತ್ತು ಮಾಧ್ಯಮದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ತನ್ನನ್ನು ಖಂಡಿಸಿದವರಿಗೂ ಧನ್ಯವಾದವನ್ನು ಅರ್ಪಿಸಿದ್ದಾರೆ.
ಅವರ ಹೇಳಿಕೆಯಿಂದ ಅವರನ್ನು ತಾತ್ಕಾಲಿಕವಾಗಿ ಅಂದರೆ ಕ್ಷಮೆಯಾಚಿಸುವರೆಗೆ ನಾಡಿಗರ್ ಸಂಗಮ್(ಕಲಾವಿದರ ಒಕ್ಕೂಟ) ಅವರ ಮೇಲೆ ನಿಷೇಧ ಹೇರಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?
CELEBRITIES: ಶಾರುಖ್ ಟು ಸಲ್ಮಾನ್; ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು
Bollywood: ವರುಣ್ ಧವನ್ ʼಬೇಬಿ ಜಾನ್ʼ ಟೀಸರ್ ನೋಡಿ ʼಜವಾನ್ʼ ಕಾಪಿ ಎಂದ ನೆಟ್ಟಿಗರು
Ranveer-Deepika ಮಗಳ ಹೆಸರು ‘ದುವಾ ಪಡುಕೋಣೆ ಸಿಂಗ್’
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.