Thalapathy 68: ದಳಪತಿ – ವೆಂಕಟ್ ಪ್ರಭು ಚಿತ್ರಕ್ಕೆ ಟಾಲಿವುಡ್ ಬೆಡಗಿ ನಾಯಕಿ?
Team Udayavani, Oct 2, 2023, 12:27 PM IST
ಚೆನ್ನೈ: ದಳಪತಿ ವಿಜಯ್ ಅವರ ʼಲಿಯೋʼ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಇದೇ ತಿಂಗಳಿನಲ್ಲಿ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಈ ನಡುವೆ ಅವರ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ಶುರುವಾಗಿದೆ.
ವಿಜಯ್ – ವೆಂಕಟ್ ಪ್ರಭು ಅವರ ಸಿನಿಮಾ ಅನೌನ್ಸ್ ಆಗಿರುವುದು ಗೊತ್ತೇ ಇದೆ. ಈ ಸಿನಿಮಾ ಈಗಾಗಲೇ ಹೈಪ್ ಕ್ರಿಯೇಟ್ ಮಾಡಿದ್ದು, ಸಿನಿಮಾದ ಕುರಿತಾದ ಪ್ರತಿಯೊಂದು ಅಪ್ಡೇಟ್ ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.
ʼದಳಪತಿ69ʼ ಸಿನಿಮಾದ ನಾಯಕಿ ಆಯ್ಕೆ ಕುರಿತು ಕಳೆದ ಕೆಲ ದಿನಗಳಿಂದ ಚರ್ಚೆ ನಡೆಯುತ್ತಿದೆ. ವಿಜಯ್ ಅವರ ಸಿನಿಮಾದಲ್ಲಿ ಟಾಲಿವುಡ್ ಬೆಡಗಿಯೊಬ್ಬರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಮಹೇಶ್ ಬಾಬು ಅವರ ಬಹು ನಿರೀಕ್ಷಿತ ʼಗುಂಟೂರು ಕಾರಮ್’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಆಗಿರುವ ಮಾಡೆಲ್ ಕಂ ನಟಿ ಮೀನಾಕ್ಷಿ ಚೌಧರಿ ದಳಪತಿ ಸಿನಿಮಾದಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಮೀನಾಕ್ಕಿ ಚೌಧರಿ ಈಗಾಗಲೇ ಕಾಲಿವುಡ್ ನಲ್ಲಿ ವಿಜಯ್ ಆಂಟೋನಿ ಅವರ ‘ಕೊಲೈ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಮೀನಾಕ್ಕಿ ನಟಿಸಿರುವ ಮತ್ತೊಂದು ಕಾಲಿವುಡ್ ಸಿನಿಮಾ ‘ಸಿಂಗಪುರ ಸಲೂನ್’ ಬಿಡುಗಡೆಗೆ ಸಿದ್ಧವಾಗಿದೆ. ವಿಶ್ವರ್ಕ್ ಸೇನ್ ಅವರೊಂದಿಗಿನ ಹೆಸರಿಡದ ಚಿತ್ರದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ.
ದಳಪತಿ ಅವರ ಸಿನಿಮಾದಲ್ಲಿ ಮೀನಾಕ್ಕಿ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕಾಲಿವುಡ್ ರಂಗದಲ್ಲಿ ವೈರಲ್ ಆಗಿದೆ. ಸದ್ಯ ಅಧಿಕೃತವಾಗಿ ಚಿತ್ರತಂಡ ಈ ಬಗ್ಗೆ ಇನ್ನಷ್ಟೇ ಅನೌನ್ಸ್ ಮಾಡಬೇಕಿದೆ.
ಮಹೇಶ್ ಬಾಬು ಅವರ ʼಗುಂಟೂರು ಕಾರಮ್’ ಜನವರಿ 12 , 2024 ರ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?
Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್ ಬಾಸ್ʼ ಖ್ಯಾತಿಯ ಅಬ್ದು ವಿವಾಹ
National Cinema Day: ಈ ದಿನ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್
Dhoom 4: ಬಾಲಿವುಡ್ ʼಧೂಮ್-4ʼ ನಲ್ಲಿ ಸೌತ್ ಸ್ಟಾರ್ ಸೂರ್ಯ ವಿಲನ್?
Tumbbad 2: ಪ್ರಳಯ್ ಆಯೇಗಾ.. ಹಾರಾರ್ ಥ್ರಿಲ್ಲರ್ ‘ತುಂಬಾಡ್ʼ ಸೀಕ್ವೆಲ್ ಅನೌನ್ಸ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.