ಸ್ವಲ್ಪ ನಿಧಾನ ಆದರೂ ಪಯಣ ಸುಗಮ..ಥ್ರಿಲ್ಲರ್ ಕಥೆಯಲ್ಲಿ ಸೇತುಪತಿ- ಕತ್ರಿನಾ ಅಭಿನಯವೇ ಪ್ರಧಾನ
Team Udayavani, Jan 12, 2024, 4:28 PM IST
ಮುಂಬಯಿ: ಟಾಲಿವುಡ್ -ಕಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾ ಈ ಸಂಕ್ರಾಂತಿ ಹಬ್ಬಕ್ಕೆ ತೆರೆ ಕಂಡಿದೆ. ಈ ನಡುವೆ ಬಾಲಿವುಡ್ ಹಾಗೂ ಕಾಲಿವುಡ್ ಭಾಷೆಯಲ್ಲಿ ವಿಜಯ್ ಸೇತುಪತಿ ಹಾಗೂ ಕತ್ರಿನಾ ಕೈಫ್ ಮುಖ್ಯಭೂಮಿಕೆಯ ʼ ಮೇರಿ ಕ್ರಿಸ್ಮಸ್ʼ ಸಿನಿಮಾ ಕೂಡ ರಿಲೀಸ್ ಆಗಿದ್ದು, ಭರ್ಜರಿ ಆರಂಭವನ್ನು ಪಡೆದುಕೊಂಡಿದೆ.
ಶ್ರೀರಾಮ್ ರಾಘವನ್ ನಿರ್ದೇಶನ ʼಮೇರಿ ಕ್ರಿಸ್ಮಸ್ʼ ಸಿನಿಮಾ ಪ್ರಧಾನ ಪಾತ್ರದ ಆಯ್ಕೆಯಿಂದಲೇ ಕುತೂಹಲ ಹೆಚ್ಚಿಸಿತ್ತು. ಸೌತ್ ಸೂಪರ್ ಸ್ಟಾರ್ ವಿಜಯ್ ಸೇತುಪತಿ, ಬಿಟೌನ್ ಬ್ಯೂಟಿ ಕತ್ರಿನಾ ಕೈಫ್ ಮೊದಲ ಬಾರಿ ತೆರೆ ಹಂಚಿಕೊಂಡಿದ್ದಾರೆ.
ಸಿನಿಮಾದಲ್ಲಿ ಕತ್ರಿನಾ ಮಾರಿಯಾ ಆಗಿ ಕಾಣಿಸಿಕೊಂಡಿದ್ದು, ಸೇತುಪತಿ ಆಲ್ಬರ್ಟ್ ಆಗಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಿನಿಮಾವನ್ನು ನೋಡಿದ ಪ್ರೇಕ್ಷಕರು ʼಎಕ್ಸ್ʼ(ಟ್ವಿಟರ್) ನಲ್ಲಿ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ʼಮೇರಿ ಕ್ರಿಸ್ಮಸ್ʼ ಒಂದು ಥ್ರಿಲ್ಲರ್ ಸಿನಿಮಾವಾಗಿದ್ದು, ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುವ ಸಸ್ಪೆನ್ಸ್ ಸಿನಿಮಾದಲ್ಲಿದೆ. ಸೇತುಪತಿ – ಕತ್ರಿನಾ ಅವರ ಅಭಿನಯ ಅತ್ಯುತ್ತಮವಾಗಿದೆ ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಧನುಷ್ ʼCaptain Millerʼ ಗೆ ಫುಲ್ ಮಾರ್ಕ್ಸ್: ಕಾಲಿವುಡ್‌ನಲ್ಲಿ ಮತ್ತೆ ಮಿಂಚಿದ ಶಿವಣ್ಣ
“ಈ ಸಿನಿಮಾಕ್ಕೆ ನಾನು 4/5 ರೇಟಿಂಗ್ ನೀಡುತ್ತೇನೆ. ಇದೊಂದು ಮಾಸ್ಟರ್ ಪೀಸ್ ಸಿನಿಮಾ. ಸರ್ಪ್ರೈಸ್, ಟ್ವಿಸ್ಟ್ ಹಾಗೂ ಸೇತುಪತಿ – ಕತ್ರಿನಾ ಅಭಿನಯ ಅದ್ಭುತವಾಗಿದೆ” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
“ಇದೊಂದು ಬ್ರಿಲಿಯಂಟ್ ಸಿನಿಮಾ ಅದರಲ್ಲೂ ವಿಶೇಷವಾಗಿ ಕಥೆ ಹೇಳುವ ರೀತಿ ಹಾಗೂ ಕತ್ರಿನಾ ಮತ್ತು ವಿಜಯ್ ನಟನೆ ಅದ್ಭುತವಾಗಿದೆ” ಎಂದು ಒಬ್ಬರು ಬರೆದುಕೊಂಡಿದ್ದಾರೆ.
“ಇದೊಂದು ಸ್ಲೋ ಬರ್ನ್ ಥ್ರಿಲ್ಲರ್ ಸಿನಿಮಾ. ದ್ವಿತೀಯ ಹಾಫ್ ನಲ್ಲಿನ ಕ್ಲೈಮ್ಯಾಕ್ಸ್ ಕೊಟ್ಟ ಹಣಕ್ಕೆ ತೃಪ್ಪಿ ನೀಡುತ್ತದೆ” ಎಂದು ಮತ್ತೊಬ್ಬರು ಹೇಳಿದ್ದಾರೆ.
“ಸಿನಿಮಾ ಮೊದಲ 35 ನಿಮಿಷ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಆದರೆ ಮುಂದೆ ವಿಜಯ್ – ಸೇತುಪತಿ ನಟನೆ ನಿಮ್ಮನ್ನು ಸೆಳೆಯುತ್ತದೆ” ಎಂದು ಒಬ್ಬರು ಬರೆದುಕೊಂಡಿದ್ದಾರೆ.
ಸಿನಿಮಾದಲ್ಲಿ ಸಂಜಯ್ ಕಪೂರ್, ವಿನಯ್ ಪಾಠಕ್, ಪ್ರತಿಮಾ ಕಣ್ಣನ್, ಮತ್ತು ಟಿನ್ನು ಆನಂದ್ ಜೊತೆಗೆ ರಾಧಿಕಾ ಆಪ್ಟೆ ಮತ್ತು ಅಶ್ವಿನಿ ಕಲ್ಸೇಕರ್ ಮುಂತಾದವರು ಅಭಿನಯಿಸಿದ್ದಾರೆ.
#MerryChristmas is a thrilling movie full of suspense with intense moments that keep you on the edge of your seat. #KatrinaKaif and #VijaySethupathi both deliver excellent performances. Vijay is outstanding, and Katrina’s captivating acting will pleasantly surprise viewers.
— Aman yadav (@Amanyad01) January 12, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Kollywood: ಕಾರ್ತಿಕ್ ಸುಬ್ಬರಾಜ್ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್ ಆಗಿದೆ ಮಾಸ್
Tollywood: ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣ; ಅಲ್ಲು ಅರ್ಜುನ್ ಬೌನ್ಸರ್ ಬಂಧನ
Sukumar: ಸಿನಿಮಾರಂಗಕ್ಕೆ ಸುಕುಮಾರ್ ಗುಡ್ ಬೈ?; ಸುಳಿವು ಕೊಟ್ಟ ʼಪುಷ್ಪʼ ಡೈರೆಕ್ಟರ್
Allu Arjun: ಕಾಲ್ತುಳಿತ ಪ್ರಕರಣ- ಹೈದರಾಬಾದ್ ಪೊಲೀಸರಿಂದ ನಟ ಅಲ್ಲು ಅರ್ಜುನ್ ವಿಚಾರಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.