Hot News: ಬಿಗ್ ಬಾಸ್ ಓಟಿಟಿ-2 ನಲ್ಲಿ ಸ್ಪರ್ಧಿಯಾಗಿ ಮಾಜಿ ನೀಲಿ ಚಿತ್ರತಾರೆ ಮಿಯಾ ಖಲೀಫಾ?
ಈ ಹಿಂದೆ ಸನ್ನಿ ಲಿಯೋನ್ ಅವರು ಕೂಡ ಬಿಗ್ ಬಾಸ್ ನಲ್ಲಿ ಭಾಗಿಯಾಗಿದ್ದರು.
Team Udayavani, Jun 17, 2023, 8:58 AM IST
ಮುಂಬಯಿ: ಕಿರುತೆರೆ ಜನಪ್ರಿಯ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಕಾರ್ಯಕ್ರಮದ ಓಟಿಟಿ ಸೀಸನ್ ಸ್ಟ್ರೀಮ್ ಆಗಲು ಕ್ಷಣಗಣನೆ ಬಾಕಿ ಉಳಿದಿದೆ. ಹಿಂದಿಯಲ್ಲಿ ಇದು ಎರಡನೇ ಓಟಿಟಿ ಸೀಸನ್ ಆಗಿದ್ದು, ವಿಶೇಷವೆಂದರೆ ಈ ಬಾರಿ ಉಚಿತವಾಗಿ ಜಿಯೋ ಸಿನಿಮಾದಲ್ಲಿ ಶೋ ಸ್ಟ್ರೀಮ್ ಆಗಲಿದೆ.
ಬಿಗ್ ಬಾಸ್ ಓಟಿಟಿ ಮೊದಲ ಸೀಸನ್ ಸದ್ದು ಮಾಡಿತ್ತು. ಅದನ್ನು ಕರಣ್ ಜೋಹರ್ ನಡೆಸಿಕೊಟ್ಟಿದ್ದರು. ಈ ಬಾರಿ ಬಹುತೇಕ ಟಿವಿಯಲ್ಲಿ ಬರುವ ಬಿಗ್ ಬಾಸ್ ನ ಎಲ್ಲಾ ಸೀಸನ್ ಗಳನ್ನು ನಿರೂಪಣೆ ಮಾಡಿದ ಸಲ್ಮಾನ್ ಖಾನ್ ಮೊದಲ ಬಾರಿ ಓಟಿಟಿ ವರ್ಷನ್ ನ ಬಿಗ್ ಬಾಸ್ ನ್ನು ನಡೆಸಿಕೊಡಲಿದ್ದಾರೆ.
ಈಗಾಗಲೇ ಬಿಗ್ ಬಾಸ್ ಓಟಿಟಿಯಲ್ಲಿ ಭಾಗಿಯಾಗುವ ಸ್ಪರ್ಧಿಗಳ ಪಟ್ಟಿ ಹೊರಬಿದ್ದಿದೆ. ಇದರಲ್ಲಿ ವಿವಾದದಿಂದ ಸುದ್ದಿಯಾದ ವ್ಯಕ್ತಿಗಳೂ ಸೇರಿದಂತೆ ಇತರರು ಇದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಬಿಗ್ ಬಾಸ್ ಓಟಿಟಿ -2 ನಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಒಂದು ಸ್ಪರ್ಧಿಯ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಒಂದು ಕಾಲದಲ್ಲಿ ಅಡಲ್ಟ್ ( ವಯಸ್ಕ) ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದ್ದ ಮಿಯಾ ಖಲೀಫಾ ಈ ಬಾರಿ ಬಿಗ್ ಬಾಸ್ ಓಟಿಟಿ-2 ನಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ವರದಿಯೊಂದು ವೈರಲ್ ಆಗಿದೆ. ʼಹಿಂದೂಸ್ತಾನ್ ಟೈಮ್ಸ್ʼ ವರದಿ ಪ್ರಕಾರ ನೀಲಿ ಚಿತ್ರ ನಿರ್ಮಾಣದ ಪ್ರಕರಣದಲ್ಲಿ ಬಂಧನವಾಗಿದ್ದ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಹಾಗೂ ಮಾಜಿ ನೀಲಿ ಚಿತ್ರತಾರೆ ಮಿಯಾ ಖಲೀಫಾ ಅವರನ್ನು ಬಿಗ್ ಬಾಸ್ ತಂಡ ಸಂಪರ್ಕ ಮಾಡಿದೆ ಎಂದು ವರದಿ ತಿಳಿಸಿದೆ.
ಆದರೆ ಇದುವರೆಗೆ ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಮಾಹಿತಿ ಹೊರಬಿದ್ದಿಲ್ಲ. ಈ ಹಿಂದೆ ಮಾಜಿ ನೀಲಿ ಚಿತ್ರತಾರೆ ಸನ್ನಿ ಲಿಯೋನ್ ಅವರು ಬಿಗ್ ಬಾಸ್ ಸೀಸನ್ 5 ನಲ್ಲಿ ಭಾಗಿಯಾಗಿದ್ದರು.
ಕೆಲವೊಂದು ವರದಿಗಳ ಪ್ರಕಾರ ಮಿಯಾ ಖಲೀಫಾ ಬಿಗ್ ಬಾಸ್ ಓಟಿಟಿ-2 ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬರಲಿದ್ದಾರೆ ಎನ್ನಲಾಗಿದೆ.
ಆಲಿಯಾ ಸಿದ್ದಿಕಿ, ಫಾಲಕ್ ನಾಜ್, ಆಕಾಂಕ್ಷಾ ಪುರಿ, ಅಂಜಲಿ ಅರೋರಾ, ಅವಿನಾಶ್ ಸಚ್‌ದೇವ್, ಪಾಲಕ್ ಪುರಸ್ವಾನಿ, ಜಿಯಾ ಶಂಕರ್, ಪುನೀತ್ ಸೂಪರ್‌ಸ್ಟಾರ್ ಮತ್ತು ಬೇಬಿಕಾ ಧುರ್ವೆ ಇವರುಗಳು ಸ್ಪರ್ಧಿಗಳಾಗಿ ಅಧಿಕೃತಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.