Mollywood: ʼಡಂಕಿʼ ಜೊತೆ ʼಸಲಾರ್ʼಗೆ ಮೋಹನ್ ಲಾಲ್ ಸಿನಿಮಾ ಟಕ್ಕರ್? ಯಾವ ಸಿನಿಮಾ?
Team Udayavani, Nov 2, 2023, 2:51 PM IST
ಕೊಚ್ಚಿ: ʼದೃಶ್ಯಂʼ ಸರಣಿ ಮೂಲಕ ಸೂಪರ್ ಹಿಟ್ ಕಾಂಬಿನೇಷನ್ ಆಗಿರುವ ಮೋಹನ್ ಲಾಲ್ ಮತ್ತು ಜೀತು ಜೋಸೆಫ್ ಅವರು ನಾಲ್ಕನೇ ಬಾರಿ ಜೊತೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಈ ಹಿಂದೆ ಸದ್ದು ಮಾಡಿತ್ತು. ಇದೀಗ ಈ ಸಿನಿಮಾದ ಬಗ್ಗೆ ಅಪ್ಡೇಟ್ ವೊಂದು ಹೊರಬಿದ್ದಿದೆ.
ಈ ಸಿನಿಮಾಕ್ಕೆ ʼನೆರೂʼ ಎಂದು ಟೈಟಲ್ ಇಡಲಾಗಿದೆ. ಇದೇ ವರ್ಷದ ಆಗಸ್ಟ್ ನಲ್ಲಿ ಈ ಸಿನಿಮಾ ಸಟ್ಟೇರಿತ್ತು. ಇದೀಗ ಶೂಟಿಂಗ್ ಮುಗಿದು ಸಿನಿಮಾ ರಿಲೀಸ್ ಆಗುವ ಹಂತಕ್ಕೆ ಬಂದಿದೆ ಎನ್ನಲಾಗಿದೆ. ಫಿಲ್ಮ್ ಇಂಡಸ್ಟ್ರಿ ಟ್ರ್ಯಾಕರ್ ಎಬಿ ಜಾರ್ಜ್ ಅವರು ಸಿನಿಮಾದ ರಿಲೀಸ್ ಡೇಟ್ ಬಗ್ಗೆ ಮಾಹಿತಿ ರಿವೀಲ್ ಮಾಡಿದ್ದಾರೆ.
“ಮೋಹನ್ ಲಾಲ್ – ಜೀತು ಜೋಸೆಫ್ ಅವರ ʼ ನೆರೂʼ ಸಿನಿಮಾ ಡಿಸೆಂಬರ್ 21 ರಂದು ವರ್ಲ್ಡ್ ವೈಡ್ ತೆರೆ ಕಾಣಲಿದೆ. ಈ ಕುರಿತು ಶೀಘ್ರದಲ್ಲಿ ಘೋಷಣೆ ಆಗಲಿದೆ” ಎಂದು ಎಬಿ ಜಾರ್ಜ್ ಟ್ವೀಟ್ ಮಾಡಿದ್ದಾರೆ.
ಮಾಲಿವುಡ್ ಸಿನಿರಂಗದಿಂದ ʼನೆರೂʼ ಸಿನಿಮಾ ಡಿಸೆಂಬರ್ 21 ರಂದು ತೆರೆಕಂಡರೆ, ಡಿ.22 ರಂದು ಪ್ಯಾನ್ ಇಂಡಿಯಾ ʼಸಲಾರ್ʼ ಸಿನಿಮಾ ತೆರೆ ಕಾಣಲಿದೆ. ಆ ಮೂಲಕ ಬಾಕ್ಸ್ ಆಫೀಸ್ ನಲ್ಲಿ ದಂಗಲ್ ಉಂಟಾಗುವ ಸಾಧ್ಯತೆಯಿದೆ. ಇತ್ತ ಬಾಲಿವುಡ್ ನಲ್ಲಿ ಶಾರುಖ್ ಖಾನ್ ಅವರ ʼಡಂಕಿʼ ಸಿನಿಮಾ ಕೂಡ ಡಿ.22 ರಂದೇ ರಿಲೀಸ್ ಆಗಲಿದೆ.
ʼನೆರೂʼ ರಿಲೀಸ್ ಡೇಟ್ ಇನ್ನಷ್ಟೇ ಅಧಿಕೃತವಾಗಬೇಕಿತ್ತು. ಇದೊಂದು ಲೀಗಲ್ ಡ್ರಾಮಾ ಸಿನಿಮಾವಾಗಲಿದ್ದು, ಇದರಲ್ಲಿ ಪ್ರಿಯಾಮಣಿ, ಸಿದ್ದಿಕ್, ಅನಸ್ವರ ರಾಜನ್, ಜಗದೀಶ್, ಗಣೇಶ್ ಕುಮಾರ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
#Neru — Release date announcement soon.
DECEMBER 21, 2023 WORLDWIDE THEATRICAL RELEASE.
MOHANLAL – JEETHU JOSEPH.
— AB George (@AbGeorge_) November 1, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ರಸ್ತೆ ಅಪಘಾತ.. ಆಡಿಷನ್ ಗೆ ತೆರಳುತ್ತಿದ್ದ ಕಿರುತೆರೆ ನಟ ಮೃತ್ಯು…
Saif Ali Khan ಇರಿತ: 2 ದಿನ ಕಳೆದರೂ ಸಿಗದ ಆರೋಪಿ!
Emergency; ಪಂಜಾಬ್ ನಲ್ಲಿ ಬ್ಯಾನ್ ಗೆ ಒತ್ತಾಯ: ಸಂಪೂರ್ಣ ದೌರ್ಜನ್ಯ ಎಂದ ಕಂಗನಾ
Bollywood: ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಕಂಗನಾ ʼಎಮರ್ಜೆನ್ಸಿʼ ಫುಲ್ ಮೂವಿ ಲೀಕ್
Saif Ali Khan: ಬಂಧಿತ ವ್ಯಕ್ತಿಗೂ ಸೈಫ್ ಅಲಿಖಾನ್ ಪ್ರಕರಣಕ್ಕೂ ಸಂಬಂಧವಿಲ್ಲ – ಪೊಲೀಸರು
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.