ಸಲಿಂಗಕಾಮಿ ಕಥಾಹಂದರ… ಗಲ್ಫ್ ದೇಶದಲ್ಲಿ ಮೋಹನ್ ಲಾಲ್ ʼಮಾನ್ ಸ್ಟರ್ʼ ಸಿನಿಮಾ ಬ್ಯಾನ್
ಚಿತ್ರತಂಡ ಅಲ್ಲಿನ ಸೆನ್ಸಾರ್ ಬೋರ್ಡ್ ಗೆ ಇದನ್ನು ಮರು ಪರಿಶೀಲಿಸಬೇಕೆಂದು ಮನವಿ ಮಾಡಿಕೊಂಡಿದೆ.
Team Udayavani, Oct 18, 2022, 12:29 PM IST
ನವದೆಹಲಿ: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ʼಮಾನ್ ಸ್ಟರ್ʼ ಸಿನಿಮಾ ಇದೇ ಅ.21 ರಂದು ತೆರೆಗೆ ಬರಲಿದೆ. ಪ್ರಚಾರದಲ್ಲಿ ನಿರತರಾಗಿರುವ ಚಿತ್ರ ತಂಡಕ್ಕೆ ಇದೀಗ ಬ್ಯಾನ್ ಬಿಸಿ ತಟ್ಟಿದೆ.
ವಿಶ್ವದೆಲ್ಲೆಡೆ 1,000 ಕ್ಕೂ ಹೆಚ್ಚಿನ ಥಿಯೇಟರ್ ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಮೋಹನ್ ಲಾಲ್ ಅವರ ಅಭಿಮಾನಿ ಬಳಗ ದೊಡ್ಡದಿದೆ. ಅವರ ಸಿನಿಮಾಗಳನ್ನು ನೋಡಲು ಕಾತುರತೆಯಿಂದ ಪ್ರೇಕ್ಷಕರು ಕಾಯುತ್ತಿರುತ್ತಾರೆ. ದೃಶ್ಯಂ ಸರಣಿಯ ಚಿತ್ರದ ಬಳಿಕ ಅವರ ಅಭಿನಯದ ಯಾವುದೇ ಸಿನಿಮಾ ಬಂದರೂ ಅದನ್ನು ಫಸ್ಟ್ ಡೇ ಫಸ್ಟ್ ಶೋ ನೋಡಲು ಪ್ರೇಕ್ಷಕರು ಕಾಯುತ್ತಿರುವುದನ್ನು ಕಾಣುತ್ತೇವೆ.
ಗಲ್ಫ್ ದೇಶದಲ್ಲಿ “ಮಾನ್ ಸ್ಟರ್ʼ ಚಿತ್ರವನ್ನು ಬ್ಯಾನ್ ಮಾಡಲಾಗಿದೆ ಎನ್ನುವ ವರದಿವೊಂದು ಬಂದಿದೆ. ಅದಕ್ಕೆ ಕಾರಣ ಸಿನಿಮಾದಲ್ಲಿ ಎಲ್ ಜಿಬಿಟಿ ( ಸಲಿಂಗ ಕಾಮಿ) ವಿಷಯವನ್ನು ತೋರಿಸಲಾಗಿದೆ. ಆ ಕಾರಣದಿಂದ ಗಲ್ಫ್ ದೇಶದಲ್ಲಿ ಇಂಥ ವಿಷಯಗಳನ್ನು ತೋರಿಸಬಾರದೆನ್ನುವ ನಿಯಮಗಳಿದ್ದು, ಅದಕ್ಕಾಗಿ ಚಿತ್ರವನ್ನು ಬ್ಯಾನ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಆದರೆ ಚಿತ್ರತಂಡ ಅಲ್ಲಿನ ಸೆನ್ಸಾರ್ ಬೋರ್ಡ್ ಗೆ ಇದನ್ನು ಮರು ಪರಿಶೀಲಿಸಬೇಕೆಂದು ಮನವಿ ಮಾಡಿಕೊಂಡಿದೆ. ಒಂದು ವೇಳೆ ಮರು ಪರಿಶೀಲಿಸಿ ಚಿತ್ರವನ್ನು ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟರೆ ಮುಂದಿನ ವಾರ ರಿಲೀಸ್ ಆಗಲಿದೆ ಎಂದು ವರದಿ ತಿಳಿಸಿದೆ.
ಮೋಹನ್ ಲಾಲ್ ಚಿತ್ರದಲ್ಲಿ ಲಕ್ಕಿ ಸಿಂಗ್ ಎನ್ನುವ ಪಾತ್ರವನ್ನು ಮಾಡಲಿದ್ದಾರೆ. ಇದೊಂದು ಥಿಲ್ಲರ್ ಇನ್ವೆಸ್ಟಿಗೇಷನ್ ಕಥಾ ಹಂದರವುಳ್ಳ ಸಿನಿಮಾ. ಚಿತ್ರವನ್ನು ವೈಶಾಖ್ ನಿರ್ದೇಶನ ಮಾಡಿದ್ದು, ಲಕ್ಷ್ಮಿ ಮಂಜು, ಸಿದ್ದಿಕ್, ಲೀನಾ, ಹನಿ ರೋಸ್, ಸುದೇವ್ ನಾಯರ್, ಕೆಬಿ ಗಣೇಶ್ ಕುಮಾರ್ ಮತ್ತು ಜಾನಿ ಆ್ಯಂಟನಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Mumbai: ಬ್ರೇಕಪ್ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Bollywood: ಹೃತಿಕ್ ರೋಷನ್ ʼಕ್ರಿಶ್ -4ʼ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri; ಜಾತ್ರೋತ್ಸವದ ವೇಳೆ ಗುಂಪು ಸಂಘರ್ಷ: ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ
Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ
Kasaragod; ಬಸ್-ಕಾರು ಢಿಕ್ಕಿ: ಇಬ್ಬರ ಸಾವು
South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…
Israel ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.