ಆಸ್ಕರ್ : ಪ್ರಕಟನೆಯಲ್ಲಿ ಎಡವಟ್ಟು, ಮೂನ್‌ಲೈಟ್ ಶ್ರೇಷ್ಠ ಚಿತ್ರ
Team Udayavani, Feb 27, 2017, 11:11 AM IST
ಹೊಸದಿಲ್ಲಿ : 89ರ ಆಸ್ಕರ್ ಪ್ರಶಸ್ತಿ ಪ್ರಕಟನೆಯಲ್ಲಿ ಎಡವಟ್ಟಾಗಿದೆ. ಹಾಗಾಗಿ ಲಾ ಲಾ ಲ್ಯಾಂಡ್ ಚಿತ್ರಕ್ಕೆ ಈ ಮೊದಲು ಘೋಷಿಸಲಾಗಿದ್ದ ಶ್ರೇಷ್ಠ ಚಿತ್ರ ಪ್ರಶಸ್ತಿಯು ಇದೀಗ ಮೂನ್‌ಲೈಟ್ ಚಿತ್ರದ ಪಾಲಾಗಿದೆ.
ಈ ಮೊದಲು ಬಹು ನಿರೀಕ್ಷೆಯ ಲಾ ಲಾ ಲ್ಯಾಂಡ್ ಅತ್ಯುತ್ತಮ ಚಿತ್ರವೆಂದು ಪ್ರಕಟಿಸಲಾಗಿತ್ತು. ಅದೀಗ ಬದಲಾಗಿ ಮೂನ್‌ಲೈಟ್ ಚಿತ್ರಕ್ಕೆ ಶ್ರೇಷ್ಠ ಪ್ರಶಸ್ತಿ ಸಂದಿರುವುದಾಗಿ ತಿಳಿದು ಬಂದಿದೆ.
ಅಮೆರಕದ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿರುವ ಲಾ ಲಾ ಲ್ಯಾಂಡ್ ಚಿತ್ರವನ್ನು ಡೇಮಿಯಲ್ ಚ್ಯಾಝೆಲ್ ನಿರ್ದೇಶಿಸಿದ್ದು ರಾನ್ ಗ್ಲಾಸಿಂಗ್ ಮತ್ತು ಎಮಾ ಸ್ಟೋನ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ವಿಶೇಷವೆಂದರೆ ಲಾ ಲಾ ಲ್ಯಾಂಡ್ ಚಿತ್ರ 2017ರ ಸಾಲಿನ ಗೋಲ್ಡನ್ ಗ್ಲೋಬ್ ನಲ್ಲಿ ಏಳು ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. ಮಾತ್ರವಲ್ಲದೆ 14ನೇ ಅಕಾಡೆಮಿ ಅವಾರ್ಡ್ಸ್‌ಗೆ ನಾಮಾಂಕನ ಪಡೆದಿದ್ದ ಈ ಚಿತ್ರ ಅಪಾರ ಜನಮೆಚ್ಚುಗೆಯನ್ನು ಗಳಿಸಿತ್ತು.
ಇದೇ ಸಂದರ್ಭದಲ್ಲಿ ಮೂನ್‌ಲೈಟ್ ಚಿತ್ರದ ಅತ್ಯುತ್ತಮ ನಟನೆಗಾಗಿ ನಿರ್ದೇಶಸಿದ ಅಲಿ ಉತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ. ವಿಯೋಲಾ ಡೇವಿಸ್ ಅವರಿಗೆ ಫೆನ್ಸಸ್ ಚಿತ್ರದಲ್ಲಿನ ನಟನೆಗಾಗಿ ಉತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ. ಅಂದ ಹಾಗೆ ಆಸ್ಕರ್ ಪ್ರಶಸ್ತಿ ಗಳಿಸಿರುವ ಪ್ರಪ್ರಥಮ ಕಪ್ಪುವರ್ಣೀಯ ನಟಿ ಈಕೆ ಎನಿಸಿಕೊಂಡಿದ್ದಾರೆ.
ಮ್ಯಾಂಚೆಸ್ಟರ್ ಬೈ ದಿ ಸೀ ಚಿತ್ರದಲ್ಲಿನ ನಟನೆಗಾಗಿ ಆ್ಯಫ್ಲೆಕ್ ಅವರಿಗೆ ಶ್ರೇಷ್ಠ ನಟ ಪ್ರಶಸ್ತಿ ಲಭಿಸಿದೆ.
ಜಂಗಲ್ ಬುಕ್ ಆಕರ್ಷಣೆ : ಬೆಸ್ಟ್ ವಿಶುವಲ್ ಅವಾರ್ಡ್ ಪ್ರಶಸ್ತಿಯನ್ನು ಜಂಗಲ್ ಬುಕ್ ಪಡೆಯಿತು.
ದೇವ್ ಪಟೇಲ್‌ಗೆ ನಿರಾಶೆ : ಆಸ್ಕರ್ ಪ್ರಶಸ್ತಿಯ ರೇಸ್‌ನಲ್ಲಿದ್ದ ಭಾರತದ ದೇವ್ ಪಟೇಲ್‌ಗೆ ಸ್ವಲ್ಪದರಲ್ಲೇ ಪ್ರಶಸ್ತಿ ತಪ್ಪಿರುವುದು ನಿರಾಶೆಗೆ ಕಾರಣವಾಗಿದೆ. ಪಟೇಲ್ ಅವರು ಶ್ರೇಷ್ಠ ಪೋಷಕ ನಟ ಪ್ರಶಸ್ತಿ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಈ ಪ್ರಶಸ್ತಿ ಮೂನ್ ಲೈಟ ಚಿತ್ರಕ್ಕಾಗಿ ಮಹೆರ್‌ಶಿ ಅಲ್ ಅಲಿ ಅವರ ಪಾಲಿಗೆ ಹೋಯಿತು.
ಆಸ್ಕರ್ ಪ್ರಶಸ್ತಿಯ ಪೂರ್ಣ ಪಟ್ಟಿ ಹೀಗಿದೆ :
ಶ್ರೇಷ್ಠ ಚಿತ್ರ : ಮೂನ್ ಲೈಟ್
ಶ್ರೇಷ್ಠ ನಟಿ : ಎಮಾ ಸ್ಟೋನ್ – ಲಾ ಲಾ ಲ್ಯಾಂಡ್
ಶ್ರೇಷ್ಠ ನಟ : ಕ್ಯಾಸೇ ಆಫ್ ಲೆಕ್ – ಮ್ಯಾಂಚೆಸ್ಟರ್ ಬೈ ದಿ ಸೀ
ಶ್ರೇಷ್ಠ ನಿರ್ದೇಶಕ : ಡೇಮಿಯನ್ ಶಾಝೆಲ್ – ಲಾ ಲಾ ಲ್ಯಾಂಡ್
ಶ್ರೇಷ್ಠ ಪೋಷಕ ನಟಿ : ವಯೋಲಾ ಡೇವಿಸ್ – ಫೆನ್ಸಸ್
ಶ್ರೇಷ್ಠ ಪೋಷಕ ನಟ : ಮಹೆರ್‌ಶಲಾಅಲಿ – ಮೂನ್ ಲೈಟ್
ಒರಿಜಿನಲ್ ಸ್ಕ್ರೀನ್ ಪ್ಲೇ : ಮ್ಯಾಂಚೆಸ್ಟರ್ ಬೈ ದಿ ಸೀ
ಬೆಸ್ಟ್ ಅಡಾಪ್‌ಟೆಡ್ ಸ್ಕ್ರೀನ್ ಪ್ಲೇ : ಮೂನ್ ಲೈಟ್
ಬೆಸ್ಟ್ ಆ್ಯನಿಮೇಟೆಡ್ ಫೀಚರ್ : ಝೂಟೋಪಿಯಾ
ಬೆಸ್ಟ್ ಆ್ಯನಿಮೇಟೆಡ್ ಶಾರ್ಟ್ ಫಿಲಂ : ಪೈಪರ್
ಬೆಸ್ಟ್ ಲೈವ್ ಆ್ಯಕ್ಷನ್ ಶಾರ್ಟ್ ಫಿಲಂ : ಸಿಂಗ್
ಶ್ರೇಷ್ಠ ವಿದೇಶೀ ಭಾಷಾ ಚಿತ್ರ : ದ ಸೇಲ್ಸ್‌ಮನ್
ಶ್ರೇಷ್ಠ ಸಾಕ್ಷ್ಯ ಚಿತ್ರ : ಎರ್ಜಾ ಎಡಲ್‌ವುನ್ ಮತ್ತು ಕ್ಯಾರೋಲಿನ್ ವಾಟರ್‌ಲೋ, ಓ ಜೆ ಮೇಡ್ ಇನ್ ಅಮೆರಿಕ
ಬೆಸ್ಟ್ ಸಿನೆಮಟೋಗ್ರಫಿ : ಲೈನಸ್ ಸ್ಯಾಂಡ್‌ಗೆÅನ್, ಲಾ ಲಾ ಲ್ಯಾಂಡ್
ಬೆಸ್ಟ್ ಒರಿಜಿನಲ್ ಸಾಂಗ್ : ಸಿಟಿ ಆಫ್ ಸ್ಟಾರ್ – ಲಾ ಲಾ ಲ್ಯಾಂಡ್
ಬೆಸ್ಟ್ ಒರಿಜಿನಲ್ ಸ್ಕೋರ : ಲಾ ಲಾ ಲ್ಯಾಂಡ್
ಬೆಸ್ಟ್ ವಿಶುವಲ್ ಅಫೆಕ್ಟ್ : ದಿ ಜಂಗಲ್ ಬುಕ್
ಬೆಸ್ಟ್ ಪ್ರೊಡಕ್ಷನ್ ಡಿಸೈನ್ : ಲಾ ಲಾ ಲ್ಯಾಂಡ್
ಬೆಸ್ಟ್ ಸೌಂಡ್ ಎಡಿಟಿಂಗ್ : ಅರೈವಲ್
ಬೆಸ್ಟ್ ಸೌಂಡ್ ಮಿಕ್ಸಿಂಗ್ : ಹ್ಯಾಕ್‌ಸಾ ರಿಜ್
ಬೆಸ್ಟ್ ಮೇಕಪ್ ಆ್ಯಂಡ್ ಹೇರ್‌ಸ್ಟೈಲಿಂಗ್ : ಸುಯಿಸೈಡ್ ಸ್ಕ್ವಾಡ್
ಬೆಸ್ಟ್ costume ಡಿಸೈನ್ : ಫೆನಾಟಿಕ್ ಬೀಸ್ಟ್ಸ್ ಆ್ಯಂಡ್ ವೇರ್ ಟು ಫೈಂಡ್ ದೆಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Mika Singh: ಮಿಕಾ ಹಾಡಿಗೆ ಫಿದಾ..ಪಾಕ್ ಅಭಿಮಾನಿಯಿಂದ 3 ಕೋಟಿ ರೂ. ವಾಚ್, ಚಿನ್ನ ಗಿಫ್ಟ್
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.