ಮೂನ್‌ಲೈಟ್‌ ಮುಡಿಗೆ ಆಸ್ಕರ್‌


Team Udayavani, Feb 28, 2017, 3:50 AM IST

27-PTI-6.jpg

ಲಾಸ್‌ ಏಂಜಲೀಸ್‌: ಆಸ್ಕರ್‌ ಅವಾರ್ಡ್‌ ಗೋಸ್‌ ಟು…. “ಲಾಲಾ ಲ್ಯಾಂಡ್‌’! ಹೀಗೆ ಹೇಳಿ ಅರೆಕ್ಷಣ ತಮ್ಮ ಮೇಲೆ ಅನುಮಾನ ಪಟ್ಟುಕೊಂಡರು ನಿರೂಪಕ ವಾರೆನ್‌ ಬೀಟಿ. ಆಸ್ಕರ್‌ ಕಮಿಟಿ ನೀಡಿದ್ದ ಲಕೋಟೆ­ಯಲ್ಲಿದ್ದ ಚಿತ್ರದ ಹೆಸರು “ಮೂನ್‌ಲೈಟ್‌’! ಕೊನೆಗೆ ಕ್ಷಮೆ ಯಾಚಿಸಿ, “ಈ ಸಲದ ಆಸ್ಕರ್‌ ಗೌರವಕ್ಕೆ ಮೂನ್‌ಲೈಟ್‌ ಭಾಜನ­ವಾಗಿದೆ’ ಎನ್ನುತ್ತಾ ನಿರೂಪಕರು ಅರೆಕ್ಷಣದ ಪ್ರಮಾದಕ್ಕೆ ತೆರೆ ಎಳೆದರು! ಅಂದಹಾಗೆ, ಇವೆರಡೂ ಅಮೆರಿಕದ್ದೇ ಚಿತ್ರಗಳು!

89ನೇ ಅಕಾಡೆಮಿ ಅವಾರ್ಡ್‌ ಬ್ಯಾರಿ ಜೆಂಕಿನ್ಸ್‌ ನಿರ್ದೇಶನದ “ಮೂನ್‌ಲೈಟ್‌’ ಚಿತ್ರದ ಪಾಲಾಗಿದೆ. ಮಿಯಾಮಿ ಸಮುದಾಯದ ಕುರಿತು ಬೆಳಕು ಚೆಲ್ಲುವ ಈ ಚಿತ್ರದ ಕತೆ ಈಗಾಗಲೇ ಜಾಗತಿಕವಾಗಿ ಹುಬ್ಬೇರಿಸಿದೆ. “ಅತ್ಯುತ್ತಮ ಚಿತ್ರ’ದೊಂದಿಗೆ ಇನ್ನೆರಡು ಗೌರವಗಳನ್ನೂ “ಮೂನ್‌ಲೈಟ್‌’  ಬಾಚಿದೆ. ಇದೇ ಚಿತ್ರದ ಮಹೇರ್ಷಲಾ ಅಲಿಗೆ “ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿ ಸಿಕ್ಕಿದ್ದು, ಮುಸ್ಲಿಮ್‌ ಕಲಾವಿದನೊಬ್ಬನಿಗೆ ಆಸ್ಕರ್‌ ಪ್ರಾಪ್ತವಾಗಿದ್ದು ಇದೇ ಮೊದಲು. “ಅತ್ಯುತ್ತಮ ಚಿತ್ರಕಥೆ’ ವಿಭಾಗದಲ್ಲಿ ಬ್ಯಾರಿ ಜೆಂಕಿನ್ಸ್‌ ಮತ್ತು ಟ್ಯಾರೆಲ್‌ ಆಲ್ವಿನ್‌ ಮೆಕ್ರಾನೇಗೆ ಪ್ರಶಸ್ತಿ ಸಿಕ್ಕಿದೆ. ಸ್ಕ್ರೀನ್‌ಪ್ಲೇ ವಿಭಾಗದಲ್ಲೂ ಆಸ್ಕರ್‌ ಪಡೆದಿದೆ.

ಲಾಲಾ ಲ್ಯಾಂಡ್‌ ಪೈಪೋಟಿ: 1950ರ ಆಲ್‌ ಅಬೌಟ್‌ ಈವ್‌, 1997ರ ಟೈಟಾ­ನಿಕ್‌ ಚಿತ್ರಗಳ ದಾಖಲೆ ಮುರಿದು “ಲಾಲಾ ಲ್ಯಾಂಡ್‌’ 14 ವಿಭಾಗಗಳಲ್ಲಿ ನಾಮನಿರ್ದೇ­ಶನ­ಗೊಂಡಿತ್ತು. ಅಂತಿಮ­ವಾಗಿ ಈ ಚಿತ್ರ 6 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. “ಅತ್ಯು­ತ್ತಮ ನಾಯಕಿ’ ಗೌರವಕ್ಕೆ ಚಿತ್ರದ ಎಮ್ಮಾ ಸ್ಟೋನ್‌ ಪಾತ್ರರಾಗಿದ್ದಾರೆ. “ಅತ್ಯುತ್ತಮ ನಿರ್ದೇಶಕ’ರೂ ಈ ಚಿತ್ರದ ಡೇಮಿ­ಯೆನ್‌ ಚಾಜೆಲೆ. “ಅತ್ಯುತ್ತಮ ಛಾಯಾ­ಗ್ರಹಣ’ ಚಿತ್ರದ ಕ್ಯಾಮೆರಾಮನ್‌ ಲೈನಸ್‌ ಸ್ಯಾಂಡ್‌ಗೆನ್‌ರ ಮುಡಿಗೇರಿದೆ.

ಇನ್ನು “ಅತ್ಯುತ್ತಮ ನಟ’ನಾಗಿ “ಮ್ಯಾಂಚೆ­ಸ್ಟರ್‌ ಬೈದಿ ಸೀ’ ಚಿತ್ರದ ಕ್ಯಾಸಿ ಅಫ್ಲೆಕ್‌, “ಉತ್ತಮ ವಿದೇಶಿ ಚಿತ್ರ’ ಹೆಗ್ಗಳಿಕೆ “ದಿ ಸೇಲ್ಸ್‌ ಮನ್‌’ ಪಾಲಾಗಿದೆ. ಬಾಲಿವುಡ್‌, ಹಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಭಾರತೀಯ ಸನ್ನಿಗೆ ಚಪ್ಪಾಳೆ ಸುರಿಮಳೆ!
ಭಾರತೀಯ ಮೂಲದ ದೇವ್‌ ಪಟೇಲ್‌ಗೆ ಆಸ್ಕರ್‌ ತಪ್ಪಿದರೂ , ಭಾರತೀಯರೆಲ್ಲ ಹೆಮ್ಮೆ ಪಡುವಂಥ ಅಲೆ ಆಸ್ಕರ್‌ ಅಂಗಳದಲ್ಲಿ ಸೃಷ್ಟಿಯಾ ಗಿತ್ತು. ನಾಮನಿರ್ದೇಶನ­ಗೊಂಡ “ದಿ ಲಯನ್‌ ಕಿಂಗ್‌’ ಚಿತ್ರದಲ್ಲಿ ದೇವ್‌ ಪಟೇಲ್‌ನ ಬಾಲ್ಯದ ಪಾತ್ರದಲ್ಲಿ ನಟಿ ಸಿದ 8 ವರ್ಷದ ಸನ್ನಿ ಪವಾರ್‌,  ಕೆಂಪು ಹಾಸಿನ ಮೇಲೆ ಹೆಜ್ಜೆಯಿಟ್ಟರು. ಸನ್ನಿ ನಡಿಗೆಯ ಫೋಟೋ ಆಸ್ಕರ್‌ನ ಅತ್ಯು ತ್ತಮ ಫೋಟೋಗಳಲ್ಲಿ ಒಂದೆಂಬ ಶ್ಲಾಘ ನೆಗೆ ಪಾತ್ರವಾಗಿದೆ. ಅಮೆರಿಕದ ಖ್ಯಾತ ಹಾಸ್ಯ ನಟ ಜಿಮ್ಮಿ ಕಿಮ್ಮೆಲ್‌, ಸನ್ನಿಯನ್ನು “ಆಸ್ಕರ್‌’ ಪ್ರತಿಮೆಯಂತೆ ಎತ್ತಿ ಎಲ್ಲರೆ ದುರು ಗೌರವ ಸೂಚಿಸಿದಾಗ ಸಭಾಂ ಗಣದಲ್ಲಿ ಚಪ್ಪಾಳೆಗಳು ಮೊಳಗಿದವು.

ಟ್ರಂಪ್‌ ನೀತಿಗೆ ಅಸ್ಕರ್‌ ಫ‌ರ್ಹಾದಿ ಸಡ್ಡು
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಲಸೆ ವಿರೋಧಿ ನೀತಿಗೆ ಆಸ್ಕರ್‌ ಸಮಾರಂಭವನ್ನೂ ಕಾವೇರಿಸಿತ್ತು. “ಸೇಲ್ಸ್‌ಮ್ಯಾನ್‌’ ಚಿತ್ರದ ನಿರ್ದೇಶಕ, ಇರಾನ್‌ನ ಅಸ್ಕರ್‌ ಫ‌ರ್ಹಾದಿ “ಅತ್ಯುತ್ತಮ ವಿದೇಶಿ ಚಿತ್ರ’ ಗೌರವ ಸ್ವೀಕರಿಸಲು ಬಾರದೆ ಟ್ರಂಪ್‌ ವಿರುದ್ಧ ಪ್ರತಿಭಟನೆ ಸೂಚಿಸಿದರು. “ಅಮೆರಿಕ ತನ್ನ ದೇಶದ ಪ್ರಜೆಗಳನ್ನು ಅವಮಾನಿಸಿದೆ. ಹಾಗಾಗಿ ಆಸ್ಕರ್‌ಗೆ ಬರುವುದಿಲ್ಲ. ಆದರೆ, ಆಸ್ಕರ್‌ ಸಮಿತಿ ತಮ್ಮ ಚಿತ್ರಕ್ಕೆ ಗೌರವ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು’ ಎಂಬ ಪತ್ರವನ್ನು ಅಸ^ರ್‌  ರವಾನಿಸಿದ್ದರು.

ಟ್ರಂಪ್‌ಗೆ ವ್ಯಂಗ್ಯ ಮಾಡಿದ ಜಿಮ್ಮಿ
ಆಸ್ಕರ್‌ನಲ್ಲಿ ಇದೇ ಮೊದಲ ಬಾರಿಗೆ ಮುಸ್ಲಿಮ್‌ ಕಲಾವಿದನಿಗೆ (ಮಹೇರ್ಶಲಾ ಅಲಿ “ಅತ್ಯುತ್ತಮ ಪೋಷಕ ನಟ’) ಗೌರವ ಸಿಕ್ಕಿದೆ. ಇದನ್ನೇ ಪ್ರಸ್ತಾಪಿಸುತ್ತಾ ಅಮೆರಿಕದ ಹಾಸ್ಯ ನಟ ಜಿಮ್ಮಿ ಕಿಮ್ಮೆಲ್‌ ಅವರು ಡೊನಾಲ್ಡ್‌ ಟ್ರಂಪ್‌ರ ಭಾಷಣವನ್ನು ವೇದಿಕೆಯಲ್ಲಿಯೇ ಅಣಕಿಸಿದರು. ಅಲ್ಲದೆ, “ಜನಾಂಗೀಯ ನಿಂದನೆಯಿಂದ ಅಮೆರಿಕ ಈಗ ಇಬ್ಭಾಗ ಆಗಿ ಹೋಗಿದೆ. ಆದರೆ, ನಾವು ಜನಾಂಗೀಯ ನಿಂದಕರಲ್ಲ ಎಂದು ಆಸ್ಕರ್‌ ಹೇಳಿದೆ’ ಎನ್ನುವ ಮೂಲಕ ಅಧ್ಯಕ್ಷರ ಕಣ್ತೆರೆಸುವ ಕೆಲಸ ಮಾಡಿದರು!

ಟಾಪ್ ನ್ಯೂಸ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Actress: ಸಲ್ಮಾನ್‌,ಶಾರುಖ್‌ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50‌ ಲಕ್ಷ ರೂ. ಡಿಮ್ಯಾಂಡ್

Actress: ಸಲ್ಮಾನ್‌,ಶಾರುಖ್‌ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50‌ ಲಕ್ಷ ರೂ. ಡಿಮ್ಯಾಂಡ್

Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್‌ʼ ಚಿತ್ರದ ಟೈಟಲ್‌ ಬದಲಾವಣೆ

Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್‌ʼ ಚಿತ್ರದ ಟೈಟಲ್‌ ಬದಲಾವಣೆ

Arrested: ಶಾರುಖ್ ಖಾನ್ ಗೆ ಜೀವ ಬೆದರಿಕೆ ಹಾಕಿದ ವಕೀಲ ಛತ್ತೀಸ್ ಗಢದಲ್ಲಿ ಬಂಧನ

Mumbai: ಬಾಲಿವುಡ್ ನಟ ಶಾರುಖ್ ಖಾನ್ ಗೆ ಜೀವ ಬೆದರಿಕೆ ಹಾಕಿದ ವಕೀಲ ಛತ್ತೀಸ್ ಗಢದಲ್ಲಿ ಬಂಧನ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-qweqwe

Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

1-ssss

J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.