Mumbai: ಬಿಗ್‌ ಬಾಸ್‌ ಶೂಟಿಂಗ್‌ ಅರ್ಧದಲ್ಲೇ ಬಿಟ್ಟು ಆಸ್ಪತ್ರೆಗೆ ಧಾವಿಸಿದ ಸಲ್ಮಾನ್‌ ಖಾನ್

Team Udayavani, Oct 13, 2024, 10:36 AM IST

salman-khan

ಮುಂಬೈ: ನಟ ಸಲ್ಮಾನ್ ಖಾನ್ (Salman Khan) ಅವರು ಬಿಗ್ ಬಾಸ್ 18 ರ (Bigg Boss 18) ಚಿತ್ರೀಕರಣವನ್ನು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಸಾವಿನ ಸುದ್ದಿಯನ್ನು ಕೇಳಿದ ಹಠಾತ್ತನೆ ಸ್ಥಗಿತಗೊಳಿಸಿದ್ದಾರೆ. ಕಾರ್ಯಕ್ರಮದ ಶೂಟಿಂಗ್‌ ನಲ್ಲಿದ್ದ ನಟ, ಮುಂಬೈನ ಲೀಲಾವತಿ ಆಸ್ಪತ್ರೆಗೆ ಧಾವಿಸಿದರು, ಅಲ್ಲಿ ಸಿದ್ದಿಕ್ ಚಿಕಿತ್ಸೆ ಪಡೆಯುತ್ತಿದ್ದರು.

ಮುಂಬೈನ ಬಾಂದ್ರಾ ಪೂರ್ವದಲ್ಲಿರುವ ಅವರ ಶಾಸಕ ಪುತ್ರ ಜೀಶನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಶನಿವಾರ (ಅ.12) ರಾತ್ರಿ 66 ವರ್ಷದ ಬಾಬಾ ಸಿದ್ದಿಕಿ ಮೇಲೆ ದಾಳಿ ನಡೆಸಲಾಯಿತು. ಗಾಯಗೊಂಡಿದ್ದ ಅವರು ಚಿಕಿತ್ಸೆಯ ಫಲಕಾರಿಯಾಗದೆ ಸಾವನ್ನಪ್ಪಿದರು.

ಬಾಬಾ ಸಿದ್ದಿಕ್ ಜೊತೆ ನಿಕಟ ಸಂಬಂಧ ಹೊಂದಿದ್ದ ಸಲ್ಮಾನ್ ಮಧ್ಯರಾತ್ರಿ 12:30 ರ ಸುಮಾರಿಗೆ ಲೀಲಾವತಿ ಆಸ್ಪತ್ರೆಗೆ ಆಗಮಿಸಿದರು. ಬಾಲಿವುಡ್‌ ನ ದೊಡ್ಡ ತಾರೆಯರನ್ನು ಹೆಚ್ಚಾಗಿ ಒಟ್ಟುಗೂಡಿಸುವ ಸಿದ್ದಿಕಿ ಅವರ ಹೆಸರಾಂತ ವಾರ್ಷಿಕ ಇಫ್ತಾರ್ ಪಾರ್ಟಿಗಳಲ್ಲಿ ನಟ ಸಲ್ಮಾನ್ ನಿಯಮಿತವಾಗಿ ಪಾಲ್ಗೊಳ್ಳುತ್ತಿದ್ದರು.

ತನ್ನ ರಾಜಕೀಯ ಪರಂಪರೆ ಮತ್ತು ಸಾಮಾಜಿಕ ಪ್ರಭಾವಕ್ಕೆ ಹೆಸರುವಾಸಿಯಾಗಿರುವ ಬಾಬಾ ಸಿದ್ದಿಕಿ, ಬಾಲಿವುಡ್‌ನ ಅತ್ಯಂತ ಕುಖ್ಯಾತ ದ್ವೇಷವನ್ನು ಸರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2013 ರಲ್ಲಿ, ಅವರು ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ಐದು ವರ್ಷಗಳ ವೈರತ್ವ ಮರೆಯಿಸಿ ಒಂದಾಗಿಸಿದರು. ಸಲ್ಮಾನ್-‌ ಶಾರುಖ್‌ ವೈರತ್ವ ಕತ್ರಿನಾ ಕೈಫ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಜಗಳದ ನಂತರ ಪ್ರಾರಂಭವಾಗಿತ್ತು. 2013ರ ಅವರ ಇಫ್ತಾರ್ ಕೂಟದಲ್ಲಿ ಇಬ್ಬರು ಸೂಪರ್‌ ಸ್ಟಾರ್‌ ಗಳು ಮತ್ತೆ ಒಂದಾದರು.

ಹತ್ಯೆಯಾದ ಬಾಬಾ ಸಿದ್ದಿಕಿ ಅವರು ಬಾಂದ್ರಾ (ಪಶ್ಚಿಮ) ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕಾರಾಗಿ ಆಯ್ಕೆಯಾಗಿದ್ದರು. ಮುಂಬೈನ ಪ್ರಮುಖ ವ್ಯಕ್ತಿಯಾಗಿದ್ದ ಅವರು 2004ರಿಂದ 2008ರವರೆಗೆ ವಿಲಾಸ್‌ರಾವ್‌ ದೇಶ್‌ಮುಖ್‌ ಸರ್ಕಾರದಲ್ಲಿ ಸಚಿವರಾಗಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಅವರು ಕಾಂಗ್ರೆಸ್‌ ತೊರೆದು ಅಜಿತ್‌ ಪವಾರ್‌ ಅವರ ಎನ್‌ ಸಿಪಿಗೆ ಸೇರ್ಪಡೆಯಾಗಿದ್ದರು.

ಟಾಪ್ ನ್ಯೂಸ್

BBK11: ಈ ವಾರ ಮನೆಯಿಂದ ಯಾರು ಹೋಗಲ್ಲ.. ಕಾರಣವೇನು?

BBK11: ಈ ವಾರ ಮನೆಯಿಂದ ಯಾರು ಹೋಗಲ್ಲ.. ಕಾರಣವೇನು?

5-bommai

ಪೊಲೀಸ್ ಸ್ಟೇಶನ್ ಮೇಲೆ ದಾಳಿ ಮಾಡಿದರೆ ಪೊಲೀಸರು ಏನೂ ಮಾಡುವಂತಿಲ್ಲವೇ ? ಬೊಮ್ಮಾಯಿ‌ ಪ್ರಶ್ನೆ

Arrested: ಈವೆಂಟ್‌ ಮ್ಯಾನೇಜ್‌ಮೆಂಟ್‌ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ

Arrested: ಈವೆಂಟ್‌ ಮ್ಯಾನೇಜ್‌ಮೆಂಟ್‌ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ

Raichur: ಸ್ಕೂಟಿ – ಕಾರು ಡಿಕ್ಕಿ; ಯುವತಿ ಸ್ಥಳದಲ್ಲೇ ಸಾವು

Raichur: ಸ್ಕೂಟಿ – ಕಾರು ಡಿಕ್ಕಿ; ಯುವತಿ ಸ್ಥಳದಲ್ಲೇ ಸಾವು

15 ಅಡಿ ಆಳದ ಬಾವಿಗೆ ಬಿತ್ತು ನವದಂಪತಿಯ ಕಾರು; ಬದುಕಿ ಬಂದಿದ್ದೇ ಪವಾಡ!

Miracle: 15 ಅಡಿ ಆಳದ ಬಾವಿಗೆ ಬಿತ್ತು ನವದಂಪತಿಯ ಕಾರು; ಬದುಕಿ ಬಂದಿದ್ದೇ ಪವಾಡ!

Veera Ratna Foundation: ಯೋಧರ ಕುಟುಂಬಕ್ಕೆ ಹೆಗಲಾಗುವ ವೀರ ರತ್ನ

Veera Ratna Foundation: ಯೋಧರ ಕುಟುಂಬಕ್ಕೆ ಹೆಗಲಾಗುವ ವೀರ ರತ್ನ

1

Ratan Naval Tata: ರತನ್‌ ಟಾಟಾ ಮರೆಯಾದ ಮಾಣಿಕ್ಯ; ಅಳಿದ ಮೇಲೂ ಉಳಿವ ನೆನಪು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15 ಅಡಿ ಆಳದ ಬಾವಿಗೆ ಬಿತ್ತು ನವದಂಪತಿಯ ಕಾರು; ಬದುಕಿ ಬಂದಿದ್ದೇ ಪವಾಡ!

Miracle: 15 ಅಡಿ ಆಳದ ಬಾವಿಗೆ ಬಿತ್ತು ನವದಂಪತಿಯ ಕಾರು; ಬದುಕಿ ಬಂದಿದ್ದೇ ಪವಾಡ!

Baba Siddique Case:‌ ಲಾರೆನ್ಸ್‌ ಬಿಷ್ಣೋಯ್ ಕೈವಾಡ ಶಂಕೆ; ಇಬ್ಬರು ಶೂಟರ್‌ ಗಳ ಬಂಧನ

Baba Siddique Case:‌ ಲಾರೆನ್ಸ್‌ ಬಿಷ್ಣೋಯ್ ಕೈವಾಡ ಶಂಕೆ; ಇಬ್ಬರು ಶೂಟರ್‌ ಗಳ ಬಂಧನ

Ghaziabad: ಪೊದೆಯಲ್ಲಿ ಸಿಕ್ಕ ನವಜಾತ ಹೆಣ್ಣು ಶಿಶುವನ್ನು ದತ್ತು ಪಡೆದ ಇನ್ಸ್‌ಪೆಕ್ಟರ್‌!

Ghaziabad: ಪೊದೆಯಲ್ಲಿ ಸಿಕ್ಕ ನವಜಾತ ಹೆಣ್ಣು ಶಿಶುವನ್ನು ದತ್ತು ಪಡೆದ ಇನ್ಸ್‌ಪೆಕ್ಟರ್‌!

PM Modi

RSS; ಶತಮಾನದ ಸಂಭ್ರಮ: ಸದಸ್ಯರಿಗೆ ಮೋದಿ ಶುಭಾಶಯ

1-asss-bg

NCP Leader; ಗುಂಡಿನ ದಾಳಿಗೈದು ಬಾಬಾ ಸಿದ್ದಿಕಿ ಬರ್ಬರ ಹ*ತ್ಯೆ!!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

BBK11: ಈ ವಾರ ಮನೆಯಿಂದ ಯಾರು ಹೋಗಲ್ಲ.. ಕಾರಣವೇನು?

BBK11: ಈ ವಾರ ಮನೆಯಿಂದ ಯಾರು ಹೋಗಲ್ಲ.. ಕಾರಣವೇನು?

5-bommai

ಪೊಲೀಸ್ ಸ್ಟೇಶನ್ ಮೇಲೆ ದಾಳಿ ಮಾಡಿದರೆ ಪೊಲೀಸರು ಏನೂ ಮಾಡುವಂತಿಲ್ಲವೇ ? ಬೊಮ್ಮಾಯಿ‌ ಪ್ರಶ್ನೆ

crime

Bidar:‌ ರಸ್ತೆ ಅಪಘಾತ; ಇಬ್ಬರು ಬಲಿ; ಪ್ರಕರಣ ದಾಖಲು

4-udupi

Malpe: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪಾಪನಾಶಿನಿ ನದಿಯಲ್ಲಿ ಪತ್ತೆ

10

JC Nagar Dussehra: ಜೆ.ಸಿ.ನಗರ ದಸರಾದಲ್ಲಿ ನೂರಾರು ಪಲ್ಲಕ್ಕಿಗಳ ಉತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.