“ತ್ರಯ’ ಎಂಬ ಮರ್ಡರ್ ಮಿಸ್ಟರಿ
ತಾಪತ್ರಯದಲ್ಲಿ ಮೂವರು ಹುಡುಗರ ಕಥೆ-ವ್ಯಥೆ
Team Udayavani, Mar 24, 2019, 11:17 AM IST
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ತ್ರಯ’ ಚಿತ್ರದ ಟ್ರೇಲರ್ ಮತ್ತು ಆಡಿಯೋ ಇತ್ತೀಚೆಗೆ ಹೊರಬಂದಿದೆ. ಹೆಸರೇ ಹೇಳುವಂತೆ “ತ್ರಯ’ ಮೂವರು ಹರೆಯದ ಹುಡುಗರ ಕಥೆ ಇರುವ ಚಿತ್ರ. ಮೂವರು ಶ್ರೀಮಂತ ಕುಟುಂಬದ ಹುಡುಗರು ಗೊತ್ತು ಗುರಿಯಿಲ್ಲದೆ, ತುಂಟಾಟ, ಪುಂಡಾಟ ಮಾಡಿಕೊಂಡು ಕಾಲ ಕಳೆಯುತ್ತಿರುತ್ತಾರೆ.
ಹೀಗಿರುವಾಗಲೇ, ಅವರಲ್ಲೊಬ್ಬ ಪ್ರೀತಿಯ ಬಲೆಯಲ್ಲಿ ಬೀಳುತ್ತಾನೆ. ಬಳಿಕ ಈ ಹುಡುಗರ ಜೀವನದಲ್ಲಿ ಒಂದಷ್ಟು ತಿರುವುಗಳು ಸಿಕ್ಕು ಹುಡುಗರ ದಿಕ್ಕು-ದೆಸೆ ಎರಡೂ ಬದಲಾಗುತ್ತದೆ. ಇದರ ನಡುವೆ ಕೊಲೆಯೊಂದು ನಡೆದು ಕೊನೆಗೆ ಈ ಹುಡುಗರ ಜರ್ನಿ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎನ್ನುವುದೇ “ತ್ರಯ’ ಚಿತ್ರದ ಕಥಾಹಂದರ.
ಮರ್ಡರ್ ಮಿಸ್ಟರಿಯ “ತ್ರಯ’ ಚಿತ್ರಕ್ಕೆ ಕೃಷ್ಣ ಸಾಯ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ತಮಿಳಿನಲ್ಲಿ ಮೂರು ಚಿತ್ರಗಳನ್ನು ನಿರ್ದೇಶಿಸಿರುವ ಕೃಷ್ಣ ಸಾಯ್‌ಗೆ ಇದು ಚೊಚ್ಚಲ ಕನ್ನಡ ಚಿತ್ರ. ಚಿತ್ರದಲ್ಲಿ ಅಮೋಘ್ ರಾಹುಲ್, ಶಂಕರ್ ಹಾಗೂ ಮದನ್ ನಾಯಕರಾಗಿ, ಸಂಯುಕ್ತಾ ಹೊರನಾಡು, ರಜನಿ ಭಾರದ್ವಾಜ್ ಮತ್ತು ನೀತು ಬಾಲ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಮನದೀಪ್ ರಾಯ್, ಟೆನ್ನಿಸ್ ಕೃಷ್ಣ, ವಿಜಯ್ ಚೆಂಡೂರ್, ಕೃಷ್ಣ ಮುಂತಾದವರ ತಾರಾಗಣ ಚಿತ್ರದಲ್ಲಿದೆ. ಚಿತ್ರದ ಹಾಡುಗಳಿಗೆ ಯತೀಶ್ ಮಹದೇವ್ ಸಂಗೀತ ಸಂಯೋಜನೆಯಿದ್ದು, ಅಶ್ವಿನ್ ಕಾರ್ತಿಕ್ ಸಾಹಿತ್ಯ ಒದಗಿಸಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ ಚಿನ್ನೇಗೌಡ, ನಟ ಅನಿರುದ್ಧ್, ಸಂಗೀತ ನಿರ್ದೇಶಕ ವೀರ್ ಸಮರ್ಥ್,
ಗಾಯಕಿ ರೇಖಾ ಪಲ್ಲಟ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಹಾಜರಿದ್ದು, ಚಿತ್ರದ ಆಡಿಯೋ ಮತ್ತು ಟ್ರೇಲರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಸದ್ಯ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಯೋಜನೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.