ನನ್ನ ಪ್ರಯೋಗದ ಚಿತ್ರ ಮೈಸೂರು ಮಸಾಲ
ಫಿಲ್ಮ್ ಬಜಾರ್ ನಲ್ಲಿ ಸಿಕ್ಕ ಕನ್ನಡಿಗ ನಿರ್ದೇಶಕ ಆಭಿಷೇಕ್ ಅಭಿಪ್ರಾಯ
Team Udayavani, Nov 24, 2019, 11:05 AM IST
ಪಣಜಿ : ಮೈಸೂರು ಮಸಾಲ ಕನ್ನಡದ ಟೆಕಿಯೊಬ್ಬರು ನಿರ್ಮಿಸಿ ನಿರ್ದೇಶಿಸುತ್ತಿರುವ ಚಿತ್ರ. ತೆರೆಗೆ ಸಿದ್ಧಗೊಳ್ಳುತ್ತಿದೆ. ತನ್ನದೇ ಅದ ವಿಶಿಷ್ಟ ರುಚಿಯಿಂದ ಸಿನಿ ಪ್ರೇಕ್ಷಕರ ಆಭಿರುಚಿಯ ವಿಸ್ತರಣೆಗೆ ಬರುತ್ತಿರುವುದು ಅಭಿಷೇರ್ಕ ಸರ್ಪೇಶಕರ್ ಅವರ ಚಿತ್ರ “ಮೈಸೂರು ಮಸಾಲ”.
ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ (ಇಫಿ)ದಲ್ಲಿ ಎನ್ ಎಫ್ ಡಿಸಿ ಯ ಫಿಲ್ಮ್ ಬಜಾರ್ (ಚಲನಚಿತ್ರ ಸಂತೆ) ಗೆ ಭೇಟಿ ನೀಡಿದಾಗ ಉದಯವಾಣಿಯೊಂದಿಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದವರು ಅಭಿಷೇಕ್.
ಸುಮಾರು ಹದಿನೈದು ವರ್ಷಗಳ ಕಾಲ ಅಮೆರಿಕದ ಹೂಸ್ಟನ್ ನಲ್ಲಿ ಟೆಕಿಯಾಗಿದ್ದು, ಎರಡು ವರ್ಷಗಳ ಹಿಂದೆ ಸಿನಿಮಾ ರೂಪಿಸಲು ತಮ್ಮ ಊರು ಬೆಂಗಳೂರಿಗೆ ಬಂದಿಳಿದವರು ಅಭಿಷೇಕ್. ಅ ಬಳಿಕ ಸಾಕಷ್ಟು ಅಧ್ಯಯನ ಮಾಡಿ, ತಮ್ಮ ಮೂಲ ಅಸಕ್ತಿಯನ್ನು ಹೆಚ್ಚಿಸಿಕೊಂಡು ಸಿನಿಮಾಕರ್ತನಾಗಿ ಬೆಳೆಯಲು ಸವಾಲನ್ನು ತೆಗೆದುಕೊಂಡವರು ಅವರು. ಮೈಸೂರು ಮಸಾಲ ಚಿತ್ರದ ಬಹುತೇಕ ಕೆಲಸ ಮುಗಿದಿದೆ. ತಾರಾಗಣದಲ್ಲಿ ಕನ್ನಡದ ಹಿರಿಯ ನಟ ಅನಂತನಾಗ್ ಮತ್ತಿತರರು ಇದ್ದಾರೆ.
ಚಿತ್ರದ ಬಗ್ಗೆ
ಚಿತ್ರದ ಬಗ್ಗೆ ಕೇಳಿದಾಗ, ಇದು ಸೈನ್ಸ್ ಫಿಕ್ಷನ್ ಫಿಲ್ಮ್. ನನಗೆ ಮೊದಲಿನಿಂದಲೂ ನಾಟಕ ಇತ್ಯಾದಿಗಳಲ್ಲಿ ತೊಡಗಿಕೊಂಡವನು. ಇದರೊಂದಿಗೆ ನನಗೆ ಕಥೆ ಹೇಳುವುದೆಂದರೆ ಬಹಳ ಇಷ್ಟ. ಅದನ್ನೇ ಈಗ ಪ್ರಯತ್ನಿಸುತ್ತಿದ್ದೇನೆ ಎಂದವರು ಅಭಿಷೇಕ್.
ಕನ್ನಡಲ್ಲಿ ಸೈನ್ಸ್ ಫಿಕ್ಷನ್ ಎಂಬ ಪ್ರಯೋಗ ನಡೆದದ್ದೇ ಕಡಿಮೆ. ನಮ್ಮಲ್ಲಿ ಅ ಹೆಸರಿನಲ್ಲಿ ಬರುವ ಚಿತ್ರಗಳಲ್ಲಿ ಬಹುತೇಕ ಜಾದೂ ತುಂಬಿಕೊಂಡಿರುತತ್ತದೆ ಇಲ್ಲವೇ ಅತಿರಂಜನೀಯ (ಫ್ಯಾಂಟಸಿ)ತೆಯಿಂದ ಕೂಡಿರುತ್ತದೆ. ನಿಜವಾದ ಸೈನ್ಸ್ ತೀರಾ ಕಡಿಮೆ. ಆದ ಕಾರಣ ನಾನು ರೀತಿಯ ಸಿನಿಮ ಮಾಡಲು ಇಚ್ಛಿಸಿದ್ದೇನೆ.
ಇಂಥ ಸಿನಿಮಾಗಳು ಯಶಸ್ವಿಯಾಗಬಹುದೆ ಎಂಬ ಪ್ರಶ್ನೆ ಇದ್ದೇ ಇದೆ. ಅದಕ್ಕೆ ನನ್ನ ಉತ್ತರವೆಂದರೆ, ನಿಜ. ಸೈನ್ಸ್ ಫಿಕ್ಷನ್ ಅನ್ನು ನೋಡುವವರು ಇದ್ದಾರೆಯೇ ಎಂಬುದಕ್ಕಿಂತ ಭವಿಷ್ಯದ ನೆಲೆಯಲ್ಲಿ ಯೋಚಿಸಬೇಕು. ಇಂದು ಇಂಥ ಪ್ರೇಕ್ಷಕರು ಇರದಿರಬಹುದು. ಅದರೆ ಮುಂದೊಂದು ದಿನಕ್ಕೆ ಆಂಥ ಪ್ರೇಕ್ಷಕರನ್ನು ರೂಪಿಸಬೇಕಾದರೆ ಇಂದು ಪ್ರಯತ್ನಿಸಬೇಕು. ಅದು ನಾನು ಮಾಡುತ್ತಿದ್ದೇನೆ. ನಿಜ, ಮಾರುಕಟ್ಟೆಯನ್ನು ತಲುಪುವುದು, ವೀಕ್ಷಕರನ್ನು ತಲುಪುವುದು ಕಷ್ಟದ ಸಂಗತಿ ಅಥವ ನಿಧಾನವಾಗಬಹುದು. ಅದರೂ ಅದು ನಮ್ಮ ಕೆಲಸವನ್ನು ನಿಲ್ಲಿಸಬಾರದು. ಆ ಕೆಲಸ ಇಂದು ನಾನು ಮಾಡುತ್ತಿದ್ದೇನೆ, ಆಷ್ಟೇ ಎಂದದ್ದು ಅಭಿಷೇಕ್.
ನಮ್ಮ ಪ್ರೇಕ್ಷಕರನ್ನು ರೂಪಿಸಿಕೊಳ್ಳುವ ಕೆಲಸ ಆರಂಭಿಸುತ್ತಿದ್ದೇನೆ. ನಮ್ಮಲ್ಲೇ ಸಾವಿರಾರು ಕಥೆಗಳಿವೆ. ಅವೆಲ್ಲವೂ ಹೊಸ ತಲೆಮಾರಿಗೆ ರವಾನೆಯಾಗಬೇಕಂಥವು. ಅದರೆ ಆವೆಲ್ಲವುಗಳನ್ನೂ ಹೊಸ ಪೀಳಿಗೆಗೆ ಇಷ್ಟವಾಗುವಂತೆ ಮಾಡಬೇಕು.
ಹೌದು, ನಾನು ತೆಗೆದುಕೊಂಡಿರುವುದು ದೊಡ್ಡ ಮಟ್ಟದ ರಿಸ್ಕ್. ಮಧ್ಯಮವರ್ಗದವನಾಗಿ, ಎರಡು ವರ್ಷಗಳ ಹಿಂದೆ ಕೆಲಸ ಬಿಟ್ಟು ಸಿನಿಮ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅದರೂ ಶೇಕಡ ನೂರರಷ್ಟು ಇರಬೇಕಿದ್ದ ಒತ್ತಡವನ್ನು ಕಡಿಮೆಗೊಳಿಸಿಕೊಳ್ಳಲು ಕೆಲವು ತಂತ್ರ/ಉಪಾಯ ಪಡೆದುಕೊಂಡಿದ್ದೇನೆ. ಅದೆಂದರೆ ಈ ಸಿನಿಮವನ್ನು ನಾನೊಬ್ಬನೇ ನಿರ್ಮಿಸುತ್ತಿಲ್ಲ. ಬಹು ವಿಧಗಳಲ್ಲಿ ನಿಧಿ ಸಂಗ್ರಹಿಸುತ್ತಿದ್ದೇವೆ. ಹಾಗಾಗಿ ಬಹು ನಿರ್ಮಾಪಕರು. ಇದು ನಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂಬುದು ಆಭಿಷೇಕ್ ರ ಅನಿಸಿಕೆ.
ನಮಗೆ ಪ್ರೇಕ್ಷಕರಿದ್ದಾರೆ, ಅವರನ್ನು ಹುಡುಕಿಕೊಳ್ಳುವ ಕೆಲಸ ನಾವೇ ಮಾಡಬೇಕು. ನಗರದ ಜನರು ಹಾಗೂ ಟೆಕಿ ಕ್ರೌಡ್ ನ್ನು ನಿಜವಾಗಿಯೂ ಸಿನಿಮಾ ನಿರ್ದೇಶಕರು ತಲುಪಿಲ್ಲ. ಆದು ನಿಧಿಯಿದ್ದಂತೆ. ಅವರಿಗೆ ಒಳ್ಳೆಯ ಕನ್ನಡ ಸಿನಿಮಾಗಳ ಕೊರತೆ ಮತ್ತು ಅಲಭ್ಯತೆ ಇರುವುದರಿಂದ ಬಾಲಿವುಡ್, ಹಾಲಿವುಡ್ ನ ಹಿಂದೆ ಬಿದ್ದಿದ್ದಾರೆ. ಅವರಿಗೆ ಒಳ್ಳೆಯ ಸಿನಿಮಾ ಕೊಟ್ಟರೆ ಖಂಡಿತಾ ನಮ್ಮೊಡನೆ ಬಂದಾರು. ನಾನು ಆಶಾವಾದಿ. ಅದ ಕಾರಣ ಹೊಸ ಸಾಧ್ಯತೆ, ಸವಾಲಿನತ್ತ ಮಾತ್ರ ಗಮನಹರಿಸುತ್ತೇನೆ.
ಮೈಸೂರು ಮಸಾಲಾ ಚಿತ್ರ ಬಹುತೇಕ ಪೂರ್ಣಗೊಂಡಿದೆ. ನಿರ್ಮಾಣೋತ್ತರ ಕೆಲಸಗಳು ಪ್ರಗತಿಯಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Mika Singh: ಮಿಕಾ ಹಾಡಿಗೆ ಫಿದಾ..ಪಾಕ್ ಅಭಿಮಾನಿಯಿಂದ 3 ಕೋಟಿ ರೂ. ವಾಚ್, ಚಿನ್ನ ಗಿಫ್ಟ್
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.