![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Aug 29, 2023, 12:32 PM IST
ಹೈದರಾಬಾದ್: ಟಾಲಿವುಡ್ ಸ್ಟಾರ್ ನಟ, ಕಿಂಗ್ ಅಕ್ಕಿನೇನಿ ನಾಗಾರ್ಜುನ ಅವರಿಂದು 64ನೇ ಹುಟ್ಟುಹಬ್ಬದ ಸಂಭ್ರದಲ್ಲಿದ್ದಾರೆ. ಈ ನಡುವೆ ಅವರ 99ನೇ ಸಿನಿಮಾದ ಟೈಟಲ್ ರಿವೀಲ್ ಆಗಿದ್ದು, ಅಭಿಮಾನಿಗಳು ಸಿನಿಮಾದ ಗ್ಲಿಂಪ್ಸ್ ನೋಡಿ ಫಿದಾ ಆಗಿದ್ದಾರೆ.
“ನಾಗ್99” ಎಂದು ಸಿನಿಮಾಕ್ಕೆ ಮೊದಲು ತಾತ್ಕಾಲಿಕವಾಗಿ ಟೈಟಲ್ ಇಡಲಾಗಿತ್ತು. ಇದೀಗ ಕಿಂಗ್ ನಾಗಾರ್ಜುನ ಅವರ ಹುಟ್ಟುಹಬ್ಬಕ್ಕೆ ಸಿನಿಮಾದ ಟೈಟಲ್ ರಿವೀಲ್ ಮಾಡಲಾಗಿದೆ. “ನಾ ಸಾಮಿ ರಂಗ” ಎಂದು ಸಿನಿಮಾಕ್ಕೆ ಟೈಟಲ್ ಇಡಲಾಗಿದ್ದು, ಗ್ಲಿಂಪ್ಸ್ ರಿಲೀಸ್ ಮಾಡಲಾಗಿದೆ.
ರೌಡಿಗಳ ಗ್ಯಾಂಗ್ ನಡುವೆಯೇ ಕೂತು ಲೋಕಲ್ ಹೀರೋನಂತೆ ಅಕ್ಕಿನೇನಿ ತಮ್ಮ ಎಂದಿನ ಮಾಸ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ಡೈಲಾಗ್ಸ್ ಹಾಗೂ ಬಿಜಿಎಂ ಗ್ಲಿಂಪ್ಸ್ ಸೀನ್ ಗಳಲ್ಲಿ ಗಮನ ಸೆಳೆಯುತ್ತದೆ.
ಈ ಹಿಂದೆ ಹಲವು ಗಮನಾರ್ಹ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಜನಪ್ರಿಯ ನೃತ್ಯ ನಿರ್ದೇಶಕ ವಿಜಯ್ ಬಿನ್ನಿ ಈ ಚಿತ್ರದ ಮೂಲಕ ತಮ್ಮ ಚೊಚ್ಚಲ ನಿರ್ದೇಶನವನ್ನು ಮಾಡುತ್ತಿದ್ದಾರೆ. ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಬ್ಯಾನರ್ ಅಡಿಯಲ್ಲಿ ಶ್ರೀನಿವಾಸ ಚಿತ್ತೂರಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
2024ರ ಸಂಕ್ರಾಂತಿ ಹಬ್ಬಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. ಪ್ರತಿವರ್ಷ ಸಂಕ್ರಾಂತಿ ಹಬ್ಬಕ್ಕೆ ಟಾಲಿವುಡ್ ನಲ್ಲಿ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತವೆ. ಅದರಂತೆ “ನಾ ಸಾಮಿ ರಂಗ” ಸಿನಿಮಾ ಮಹೇಶ್ ಬಾಬು ಅವರ ಬಹು ನಿರೀಕ್ಷಿತ “ಗುಂಟೂರು ಕಾರಮ್” ಸಿನಿಮಾದೊಂದಿಗೆ ರಿಲೀಸ್ ಆಗಲಿದೆ. ಆ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಪೈಪೋಟಿ ಆಗುವ ಸಾಧ್ಯತೆಯಿದೆ.
ಸಿನಿಮಾದ ಇನ್ನೊಂದು ವಿಶೇಷವೆಂದರೆ ಈ ಸಿನಿಮಾದ ಸಂಗೀತವನ್ನು ರಾಷ್ಟ್ರೀಯ ಪ್ರಶಸ್ತಿ ಮತ್ತು ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರು ನೀಡಲಿದ್ದಾರೆ. ಪ್ರಸನ್ನ ಕುಮಾರ್ ಬೆಜವಾಡ ಸಂಭಾಷಣೆ ಬರೆದಿದ್ದಾರೆ.
ಸಿನಿಮಾದ ಇತರ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.
Naa Saami Ranga🤟
Ippudu #KingMassJataraమొదలు 🔥🔥
Our next with the King 👑@iamnagarjuna garu titled #NaaSaamiRanga 💥
World Wide Release on Sankranti 2024🤩
Here’s the Title Glimpse
➡️ https://t.co/0PuVDhdykA#HBDKingNagarjuna 🎊@ChoreographerVJ @mmkeeravaani… pic.twitter.com/5k88K8XNei
— Srinivasaa Silver Screen (@SS_Screens) August 29, 2023
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.