ಬಾಲಿವುಡ್ಡಲ್ಲೂ ಡ್ರಗ್ಸ್ ಮಾಯೆ: ರಿಯಾ ಚಕ್ರವರ್ತಿ ಬಂಧನ ಸನ್ನಿಹಿತ
Team Udayavani, Sep 7, 2020, 6:22 AM IST
ಮುಂಬಯಿ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಕೇಳಿಬಂದ ಬಾಲಿವುಡ್ ಡ್ರಗ್ಸ್ ಲಿಂಕ್ ಕುರಿತ ತನಿಖೆಯೂ ಚುರುಕಾಗಿದ್ದು, ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಬಂಧಿಸುವ ಸಾಧ್ಯತೆ ದಟ್ಟವಾಗಿದೆ.
ಮುಂಬಯಿಯ ಎನ್‌ಸಿಬಿ ಕಚೇರಿಯಲ್ಲಿ ರವಿವಾರ ಸತತ 6 ತಾಸುಗಳ ಕಾಲ ವಿಚಾರಣೆ ನಡೆದಿದೆ.
ಸೋಮವಾರವೂ ರಿಯಾ ವಿಚಾರಣೆ ಮುಂದುವರಿಯಲಿದೆ ಎಂದು ಎನ್‌ಸಿಬಿ ಹೇಳಿದೆ. ಇದೇ ವೇಳೆ ತನ್ನ ಸಹೋದರ ಶೋವಿಕ್ ಚಕ್ರವರ್ತಿಯ ಮೂಲಕ ಸುಶಾಂತ್‌ಗೋಸ್ಕರ ಡ್ರಗ್ಸ್ ತರಿಸುತ್ತಿದ್ದೆ ಎಂಬುದನ್ನು ರಿಯಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಡ್ರಗ್ಸ್ ಪೆಡ್ಲರ್ ಜೈದ್‌ನಿಂದ ಸುಶಾಂತ್‌ನ ಮ್ಯಾನೇಜರ್ ಸ್ಯಾಮುವೆಲ್ ಮಿರಾಂಡಾ ಮಾದಕ ದ್ರವ್ಯಗಳನ್ನು ಖರೀದಿಸುತ್ತಿದ್ದುದು ಕೂಡ ನನಗೆ ಗೊತ್ತಿತ್ತು.
ವಾಟ್ಸ್‌ಆ್ಯಪ್ ಚಾಟ್‌ನಲ್ಲಿ ನಾವು ಡ್ರಗ್ಸ್ ಬಗ್ಗೆ ಚರ್ಚಿಸಿದ್ದು ಕೂಡ ನಿಜ. ಬಂಧಿತ ಡ್ರಗ್ಸ್ ಪೆಡ್ಲರ್ ಬಾಸಿತ್‌ನಿಂದ ಶೋವಿಕ್ ಡ್ರಗ್ಸ್ ಖರೀದಿಸುತ್ತಿದ್ದುದು ನನಗೆ ಗೊತ್ತಿತ್ತು.
ಅಲ್ಲದೆ ಬಾಸಿತ್ ಒಂದು ಬಾರಿ ನಮ್ಮ ಮನೆಗೂ ಭೇಟಿ ನೀಡಿದ್ದ ಎಂದೂ ರಿಯಾ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.