ಫಸ್ಟ್ ಕಿಸ್ಸಿಂಗ್ ಸೀನ್ ಬಳಿಕ ಬಾಯಿಯನ್ನು ಡೆಟಲ್‌ನಿಂದ ತೊಳೆದುಕೊಂಡಿದ್ದೆ: ನೀನಾ ಗುಪ್ತಾ
Team Udayavani, Jun 28, 2023, 3:32 PM IST
ಮುಂಬಯಿ: ಬಾಲಿವುಡ್ ನ ಹಿರಿಯ ನಟಿ ನೀನಾ ಗುಪ್ತಾ ಸದ್ಯ ನೆಟ್‌ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗಲಿರುವ ಆಂಥಾಲಜಿ ಸಿನಿಮಾ ʼಲಸ್ಟ್ ಸ್ಟೋರಿಸ್ 2′ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಪ್ರಚಾರದ ವೇಳೆ ಬಾಲಿವುಡ್ ವೆಬ್ ಸೈಟ್ ವೊಂದರ ಜೊತೆ ಮಾತನಾಡಿದ ಅವರು ತನ್ನ ಮೊದಲ ಮುತ್ತಿನ ಕಥೆಯನ್ನು ಹೇಳಿದ್ದಾರೆ.
“ಇನ್ಸ್ಟಂಟ್ ಬಾಲಿವುಡ್” ಜೊತೆ ಮಾತನಾಡಿದ ಅವರು “ ಚಿತ್ರರಂಗದಲ್ಲಿ ಒಬ್ಬ ಕಲಾವಿದನಾಗಿ ಎಲ್ಲ ರೀತಿಯ ದೃಶ್ಯಗಳನ್ನು ಮಾಡಬೇಕು, ಕೆಲವೊಮ್ಮೆ ಕೆಸರಿನಲ್ಲಿ ಹೆಜ್ಜೆ ಹಾಕಬೇಕು, ಕೆಲವೊಮ್ಮೆ ಬಿಸಿಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾಗುತ್ತದೆ. ಹಲವು ವರ್ಷಗಳ ಹಿಂದೆ ದಿಲೀಪ್ ಧವನ್ ಜತೆ ಧಾರಾವಾಹಿಯೊಂದನ್ನು ಮಾಡಿದ್ದೆ. ಇದರಲ್ಲಿ ನಾನು ಲಿಪ್-ಟು-ಲಿಪ್ ಕಿಸ್ ಮಾಡಿದ್ದೆ. ಇದು ಭಾರತೀಯ ಟಿವಿಯಲ್ಲಿ ಮೊಟ್ಟಮೊದಲ ಲಿಪ್-ಟು-ಲಿಪ್ ಚುಂಬನದ ದೃಶ್ಯವಾಗಿತ್ತು. ಆ ಸಮಯದಲ್ಲಿ ನಾನು ರಾತ್ರಿಯಿಡೀ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. ಅವನು ನನ್ನ ಸ್ನೇಹಿತನಂತೆ ಇರಲಿಲ್ಲ,ಅವನು ನೋಡೋಕೆ ಚೆನ್ನಾಗಿ ಕಾಣುತ್ತಿದ್ದ. ಆದರೆ ಆ ಸಂದರ್ಭಗಳಲ್ಲಿ ಅದು ಮುಖ್ಯವಾಗಿರಲಿಲ್ಲ. ದೈಹಿಕವಾಗಿ ಮತ್ತು ಮಾನಸಿಕವಾಗಿ ನಾನು ಸಿದ್ಧವಾಗಿರಲಿಲ್ಲ. ನಾನು ತುಂಬಾ ಚಿಂತಿತಳಾಗಿದ್ದೆ. ಆದರೆ ನಾನು ಅದನ್ನು ಮಾಡಲೇಬೇಕಿತ್ತು. ಕೆಲವರಿಗೆ ಕಾಮಿಡಿ ಬರಲ್ಲ, ಕೆಲವರಿಗೆ ಕ್ಯಾಮೆರಾ ನೋಡಿದಾಗ ಕಣ್ಣಲ್ಲಿ ಅಳು ಬರಲ್ಲ. ಆದರೆ ನಾನು ಜಾಸ್ತಿ ಯೋಚಿಸದೇ ಅದನ್ನು ಮಾಡಿಯೇ ಬಿಟ್ಟೆ. ಕಿಸ್ಸಿಂಗ್ ಸೀನ್ ಮುಗಿದ ತಕ್ಷಣ ನನ್ನ ಬಾಯಿಯನ್ನು ನಾನು ಡೆಟಲ್ ನಿಂದ ತೊಳೆದುಕೊಂಡಿದ್ದೆ. ಆ ಸ್ಥಿತಿ ನನಗೆ ತುಂಬಾ ಕಷ್ಟಕರವಾಗಿತ್ತು” ಎಂದು ಹೇಳಿದ್ದಾರೆ.
ಸದ್ಯ ನೀನಾ ಗುಪ್ತಾ ಶೀಘ್ರದಲ್ಲೇ ʼಲಸ್ಟ್ ಸ್ಟೋರೀಸ್ 2ʼ ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ತಮನ್ನಾ ಭಾಟಿಯಾ, ವಿಜಯ್ ವರ್ಮಾ, ಕಾಜೋಲ್, ಕುಮುದ್ ಮಿಶ್ರಾ ಮುಂತಾದ ಕಲಾವಿದರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್ ಮಾತು
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
‘I am single’; ಅರ್ಜುನ್ ಕಪೂರ್ ಕಾಮೆಂಟ್ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
Report: ಐಸಿಯು ಗಲೀಜು, ಟ್ಯಾಂಕ್ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.