‘ಖಾಕಿ; ದಿ ಬಿಹಾರ್ ಚಾಪ್ಟರ್’ ಹೊಸ ವೆಬ್ ಸೀರೀಸ್ ಅನೌನ್ಸ್ ಮಾಡಿದ ನೀರಜ್ ಪಾಂಡೆ
Team Udayavani, Oct 27, 2022, 10:16 AM IST
ಮುಂಬೈ: ಸ್ಪೆಶಲ್ 26, ಎಂ.ಎಸ್.ಧೋನಿ, ಎ ವೆಡ್ನೆಸ್ ಡೇ ಮುಂತಾದ ಹಿಟ್ ಚಿತ್ರಗಳ ನಿರ್ದೇಶಕ ನಿರಜ್ ಪಾಂಡೆ ಇದೀಗ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ್ದಾರೆ. ಈ ಬಾರಿ ವೆಬ್ ಸೀರೀಸ್ ಒಂದನ್ನು ಅನೌನ್ಸ್ ಮಾಡಿದ್ದು, ಅದಕ್ಕೆ ‘ಖಾಕಿ; ದಿ ಬಿಹಾರ್ ಚಾಪ್ಟರ್’ ಎಂದು ಹೆಸರಿಡಲಾಗಿದೆ.
ಈ ಕ್ರೈಮ್ ಸೀರಿಸ್ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗಲಿದೆ. ಕರಣ್ ಟಕ್ಕರ್, ಅವಿನಾಶ್ ತಿವಾರಿ, ಅಶುತೋಷ್ ರಾಣಾ, ರವಿ ಕಿಶನ್, ಅನುಪ್ ಸೋನಿ, ಜತಿನ್ ಸರ್ನಾ, ನಿಖಿತಾ ದತ್ತಾ, ಅಭಿಮನ್ಯು ಸಿಂಗ್, ಐಶ್ವರ್ಯ ಸುಶ್ಮಿತಾ ಮತ್ತು ಶೃದ್ಧಾ ದಾಸ್ ಅವರು ಇದರಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಇದನ್ನೂ ಓದಿ:ಶಾರ್ದೂಲ್ ಠಾಕೂರ್ ಗೆ ಗೇಟ್ ಪಾಸ್ ಕೊಟ್ಟಿತೆ ಡೆಲ್ಲಿ ಕ್ಯಾಪಿಟಲ್ಸ್?
ನೆಟ್‌ಫ್ಲಿಕ್ಸ್ ಮತ್ತು ಅವರ ಮುಂಬರುವ ಸರಣಿಯ ಸಹಯೋಗದ ಕುರಿತು ಮಾತನಾಡುತ್ತಾ ನೀರಜ್ ಪಾಂಡೆ, “ವಿಚಾರಗಳಲ್ಲಿ ಇಂತಹ ವೈವಿಧ್ಯತೆಯನ್ನು ಪ್ರತಿನಿಧಿಸುವ ವೇದಿಕೆಯ (ನೆಟ್ ಫ್ಲಿಕ್ಸ್) ಅಭಿಮಾನಿಯಾಗಿ, ನಮ್ಮ ಮುಂಬರುವ ಸರಣಿ `ಖಾಕಿ’ಯ ಪಾಲುದಾರಿಕೆಯನ್ನು ಘೋಷಿಸಲು ಸಂತೋಷವಾಗುತ್ತದೆ. ಈ ಪೊಲೀಸ್ ಮತ್ತು ಕ್ರೈಮ್ ಥ್ರಿಲ್ಲರ್, 2000 ರ ದಶಕದ ಆರಂಭದ, ಬಿಹಾರದ ಹೃದಯ ಭಾಗದಿಂದ ಒಂದು ದೊಡ್ಡ ಕಥೆ. ಜಾರ್ಖಂಡ್ ಮತ್ತು ಬಿಹಾರದಲ್ಲಿ ಅನೇಕ ಕೋವಿಡ್ ಅಲೆಗಳಾದ್ಯಂತ ತೀವ್ರ ಕಷ್ಟಕರ ಸಂದರ್ಭಗಳಲ್ಲಿ ಚಿತ್ರೀಕರಿಸಲಾಗಿದೆ ಎಂದರು.
ಭವ್ ಧುಲಿಯಾ ಅವರು ಸೀರೀಸ್ ಗೆ ಆ್ಯಕ್ಷನ್ ಕಟ್ ಹೇಳಿದ್ದು, ಫ್ರೈಡೇ ಸ್ಟೋರಿ ಟೆಲ್ಲರ್ಸ್ ಬ್ಯಾನರ್ ನಲ್ಲಿ ಶೀತಲ್ ಭಾಟಿಯಾ ಬಂಡವಾಳ ಹೂಡಿದ್ದಾರೆ.
Here’s a sneak peek into our labour of love- Khakee: The Bihar Chapter!! Written by Uma Shankar and Directed by Bhav Dhulia. Can’t wait for you to watch it only on Netflix. ?@NetflixIndia @FridayStorytel1 @neerajpofficial @ShitalBhatiaFFW @DhuliaBhav @deshpandedeven pic.twitter.com/9FWqWwCQIc
— Neeraj Pandey (@neerajpofficial) October 26, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.