![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 9, 2023, 4:55 PM IST
ಮುಂಬಯಿ: ಬಾಲಿವುಡ್ ನಿರ್ದೇಶಕಿ ಹಾಗೂ ನಿರ್ಮಾಪಕಿ ಏಕ್ತಾ ಕಪೂರ್ ಸದ್ಯ ʼಥ್ಯಾಂಕ್ಯೂ ಫಾರ್ ಕಮಿಂಗ್ʼ ಸಿನಿಮಾಕ್ಕೆ ಬರುತ್ತಿರುವ ಪ್ರತಿಕ್ರಿಯಿಂದ ಖುಷ್ ಆಗಿದ್ದಾರೆ. ಈ ನಡುವೆ ಅವರು ಮಾಡಿರುವ ಟ್ವೀಟ್ ವೊಂದು ವೈರಲ್ ಆಗಿದೆ.
ಕಿರುತೆರೆ ಹಾಗೂ ಬಿಟೌನ್ ನಲ್ಲಿ ತಮ್ಮ ಬಾಲಾಜಿ ಮೋಷನ್ ಪಿಕ್ಚರ್ಸ್ ಮೂಲಕ ಅನೇಕ ಸಿನಿಮಾ ಹಾಗೂ ಶೋಗಳಿಗೆ ಬಂಡವಾಳ ಹಾಕಿ ಸಿನಿರಂಗದಲ್ಲಿ ಯಶಸ್ಸಾಗಿರುವ ಏಕ್ತಾ ಕಪೂರ್ ಇತ್ತೀಚೆಗೆ ಕರಣ್ ಬೂಲಾನಿ ನಿರ್ದೇಶನದ ʼಥ್ಯಾಂಕ್ಯೂ ಫಾರ್ ಕಮಿಂಗ್ʼ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಈ ಸಿನಿಮಾದ ಕಥಾಹಂದರ ಬೋಲ್ಡ್ ಆಗಿದ್ದು, ಇದಕ್ಕೆ ಸಂಬಂಧಿಸಿ ನೆಟ್ಟಿಗರೊಬ್ಬರು ಏಕ್ತಾ ಅವರ ಬಳಿ “ವಯಸ್ಕ ಚಲನಚಿತ್ರಗಳನ್ನು ಮಾಡುವುದನ್ನು ನಿಲ್ಲಿಸಿ” ಎಂದು ಟ್ವೀಟ್ ಮಾಡಿ ಹೇಳಿದ್ದಾರೆ. ಆದರೆ ಇದಕ್ಕೆ ಏಕ್ತಾ ಕಪೂರ್ ಕೊಟ್ಟಿರುವ ರಿಪ್ಲೈ ವೈರಲ್ ಆಗಿದೆ.
“ಇಲ್ಲ ನಾನು ವಯಸ್ಕನಾಗಿದ್ದೇನೆ ಆದ್ದರಿಂದ ನಾನು ವಯಸ್ಕ ಚಲನಚಿತ್ರಗಳನ್ನು ಮಾಡುತ್ತೇನೆ” ಎಂದು ನಿರ್ಮಾಪಕಿ ಟ್ವೀಟ್ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಇದನ್ನೂ ಓದಿ: Vaccine War: ಸಿನಿಮಾ ಪ್ರಚಾರ ಮಾಡಿಸಲು ಯೋಗಿ ಆದಿತ್ಯನಾಥ್ ಭೇಟಿಯಾದ ವಿವೇಕ್ ಅಗ್ನಿಹೋತ್ರಿ
ಇನ್ನೊಬ್ಬ ಬಳಕೆದಾರರು “ನೀವು ಹಾಗೂ ಕರಣ್ ಜೋಹರ್ ಇಡೀ ಭಾರತವನ್ನು ಬಿಗಾಡಿಸಿದ್ದಿರಿ.” ಎಂದಿದ್ದಾರೆ. ಇದಕ್ಕೆ ನಟಿ “ಹುಂ” ಎಂದು ರಿಪ್ಲೈ ಮಾಡಿದ್ದಾರೆ.
ಮತ್ತೊಬ್ಬರು “ನಿಮ್ಮಿಬ್ಬರಿಂದ(ಕರಣ್ – ಏಕ್ತಾ) ಭಾರತದಲ್ಲಿ ವಿಚ್ಚೇದನ ಹೆಚ್ಚಾಗಿದೆ” ಎಂದಿದ್ದಾರೆ. ಇದಕ್ಕೂ ಕೂಡ ನಿರ್ಮಾಪಕಿ ಏಕ್ತಾ “ಹುಂ” ಎಂದು ಪ್ರತಿಕ್ರಯಿಸಿದ್ದಾರೆ.
ʼಥ್ಯಾಂಕ್ಯೂ ಫಾರ್ ಕಮಿಂಗ್ʼ ಸಿನಿಮಾದಲ್ಲಿ ಭೂಮಿ ಪೆಡ್ನೇಕರ್, ಶೆಹನಾಜ್ ಗಿಲ್, ಡಾಲಿ ಸಿಂಗ್, ಕುಶಾ ಕಪಿಲಾ ಮತ್ತು ಶಿಬಾನಿ ಬೇಡಿ ನಟಿಸಿದ್ದಾರೆ.ಈ ಚಲನಚಿತ್ರವು 46ನೇ 2023 ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (TIFF) ಪ್ರಥಮ ಪ್ರದರ್ಶನಗೊಂಡಿತ್ತು.
No I’m an adult so I will make adult movies😁 https://t.co/orTGS9Nxmy
— Ektaa R Kapoor (@EktaaRKapoor) October 9, 2023
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.