ಕುದುರೆ ಮೇಲೆ ನಿಂತು ಪೋಸ್ ಕೊಟ್ಟ ನಟ: ನೆಟ್ಟಿಗರು ಫುಲ್ ಗರಂ
Team Udayavani, Mar 13, 2021, 3:55 PM IST
ಮುಂಬೈ: ಖ್ಯಾತ ಬಾಲಿವುಡ್ ನಟ ವಿಕಿ ಕೌಶಲ್ ಕುದುರೆ ಮೇಲೆ ನಿಂತು ಪೋಸ್ ಕೊಡುವ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದು, ಇದೀಗ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ನಟನ ಈ ರೀತಿಯ ವರ್ತನೆಯ ಕುರಿತಾಗಿ ನೆಟ್ಟಿಗರು ಅಸಮಾಧಾನಗೊಂಡಿದ್ದು, ಕಾಮೆಂಟ್ ಗಳ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಕುರಿತಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಿರುವ ನೆಟ್ಟಿಗರು, ಪ್ರಾಣಿಗಳ ಬಗ್ಗೆ ಸ್ಪಲ್ಪ ಯೋಚನೆ ಮಾಡಿ, ಅವುಗಳ ಕುರಿತಾಗಿ ದಯೆ ಇರಲಿ ಎಂದು ಹೇಳಿದ್ದಾರೆ.
ಈ ಪೋಟೋದ ಕುರಿತಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಟ ವಿಕ್ಕಿ ಕೌಶಲ್, ಅನಿಲ್ ಕಪೂರ್ ಅವರ ಕುದುರೆಯ ಚಿತ್ರಕಲೆಯನ್ನು ಹೋಲಿಕೆ ಮಾಡಿದ್ದಾರೆ.
ಈ ವಿಧವಾದ ಪೋಟೋದಲ್ಲಿ ಕಾಣಿಸಿಕೊಂಡಿರುವ ನಟ ಕುದುರೆ ಸವಾರಿ ಮಾಡುವಾಗ ಬಳಸಲಾಗುವ ಉಡುಪನ್ನು ಧರಿಸಿದ್ದು, ಜೊತೆಯಲ್ಲಿ ಹೆಲ್ಮೆಟ್ ಹಾಗೂ ಕಾಲಿಗೆ ಶೂ ವನ್ನು ಧರಿಸಿದ್ದು, ಕುದುರೆ ಮೇಲೆ ನಿಂತು ಬ್ಯಾಲೆನ್ಸ್ ಮಾಡುತ್ತಿರುವುದು ಕಂಡುಬರುತ್ತದೆ.
ಇದನ್ನೂ ಓದಿ:ಶಿವಸೇನೆಯವರು ಕನ್ನಡಿಗರಿಗೆ ಕಿರುಕುಳ ನೀಡುತ್ತಿರುವುದು ಖಂಡನೀಯ: ಡಾ.ವಿ.ಸೋಮಶೇಖರ
ನಟನ ಈ ವರ್ತನೆಯನ್ನು ಕಂಡು ಪ್ರತಿಕ್ರಿಯೆ ನೀಡಿರುವ ವ್ಯಕ್ತಿಯೊಬ್ಬ, ನೀವು ಈ ರೀತಿ ಮಾಡುವುದರಿಂದ ಕುದುರೆಗೆ ತೊಂದರೆಯಾಗುತ್ತದೆ. ವಿಕಿ ನೀವು ಈ ರೀತಿ ಮಾಡುವ ಬದಲು ಬೇರೆ ಏನನ್ನಾದರೂ ಮಾಡಬಹುದಿತ್ತು ಎಂದಿದ್ದಾರೆ. ಇನ್ನೊಬ್ಬ ವ್ಯಕ್ತಿ ಕುದುರೆ ಈಗ ಆರಾಮವಾಗಿದೆ ತಾನೆ ಎಂದು ನಟನನ್ನು ಪ್ರಶ್ನಿಸಿದ್ದಾರೆ.
ನಟ ಈ ಪೋಟೋವನ್ನು ಪೋಸ್ಟ್ ಮಾಡುವ ಮೊದಲು ಕುದುರೆ ಮೇಲೆ ಕುಳಿತು ಸವಾರಿ ಮಾಡುವ ದೃಶ್ಯವೊಂದನ್ನು ಕೂಡಾ ಪೋಸ್ಟ್ ಮಾಡಿದ್ದು , ‘ವಾಕ್ ಎಂಡ್ ಟ್ರೋಟ್, ಬ್ಯಾಕ್ ಟು ಬೆಸಿಕ್ಸ್’ ಎಂದು ಬರೆದುಕೊಂಡಿದ್ದರು.
ಸದ್ಯ ವಿಕಿ ತನ್ನ ಮುಂದಿನ ಸಿನಿಮಾವಾದ ಇಮ್ಮೋರ್ಟಲ್ ಅಶ್ವತ್ಥಾಮಗಾಗಿ ತಯಾರಿ ನಡೆಸುತ್ತಿದ್ದು, ಜೊತೆಗೆ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಲು ತಯಾರಾಗಿದ್ದಾರೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Mumbai: ಬ್ರೇಕಪ್ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Bollywood: ಹೃತಿಕ್ ರೋಷನ್ ʼಕ್ರಿಶ್ -4ʼ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.