Bollywood: ವರುಣ್ ಧವನ್ ʼಬೇಬಿ ಜಾನ್ʼ ಟೀಸರ್ ನೋಡಿ ʼಜವಾನ್ʼ ಕಾಪಿ ಎಂದ ನೆಟ್ಟಿಗರು
Team Udayavani, Nov 4, 2024, 1:23 PM IST
ಮುಂಬಯಿ: ವರುಣ್ ಧವನ್ (Varun Dhawan) ಖಾಕಿ ಅವತಾರದಲ್ಲಿ ಕಾಣಿಸಿಕೊಳ್ಳಲಿರುವ ʼಬೇಬಿ ಜಾನ್ʼ(Baby John) ಚಿತ್ರದ ಟೀಸರ್ ರಿಲೀಸ್ ಆಗಿದೆ.
ಪೊಲೀಸ್ ಜೀಪ್‌ನಿಂದ ಇಳಿಯುವ ʼಬೇಬಿ ಜಾನ್ʼ (ವರುಣ್ ಧವನ್) ಗಲಾಟೆ ಮಾಡುತ್ತಿರುವ ಗುಂಪನ್ನು ನಿಯಂತ್ರಿಸುವುದನ್ನು ತೋರಿಸಲಾಗಿದೆ. ಉದ್ದ ಕೂದಲು ಬಿಟ್ಟಿರುವ ಲುಕ್‌ನಲ್ಲಿ, ಬಾಡಿ ಬಿಲ್ಡ್ ಮಾಡಿರುವ ಜಬರ್‌ದಸ್ತ್ ಶೇಡ್‌ನಲ್ಲಿ ಚಾಕ್ಲೇಟ್ ಹೀರೋ ವರುಣ್ ಧವನ್ ಅಬ್ಬರಿಸಿದ್ದಾರೆ. ಮಾಸ್ ಸೀನ್ಸ್‌ಗಳ ಜತೆ ಖಡಕ್ ಡೈಲಾಗ್ಸ್‌ಗಳನ್ನು ಟೀಸರ್‌ನಲ್ಲಿ ತೋರಿಸಲಾಗಿದೆ.
ಟೀಸರ್ ರಿಲೀಸ್ ಆದ ಕೂಡಲೇ ನೆಟ್ಟಿಗರು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಟೀಸರ್‌ನಲ್ಲಿ ಕೆಲ ದೃಶ್ಯಗಳು ಶಾರುಖ್ ಖಾನ್ ಅವರ ʼಜವಾನ್ʼ ಸಿನಿಮಾದಂತಿದೆ ಎಂದು ಅನೇಕರು ಟ್ರೋಲ್ ಮಾಡಿದ್ದಾರೆ.
If this is the START, imagine the END, Baby 🔥⛏️
For now, watch #BabyJohnTasterCut, #BabyJohn will see you in the cinemas on Dec 25
Watch here 🔗https://t.co/2QOqSpiDPO#JyotiDeshpande @MuradKhetani @priyaatlee @Atlee_dir @Varun_dvn @KeerthyOfficial #WamiqaGabbi @bindasbhidu… pic.twitter.com/XsxgQHyDU7— Jio Studios (@jiostudios) November 4, 2024
ʼಜವಾನ್ʼ ಸಿನಿಮಾದಲ್ಲಿ ಶಾರುಖ್ ಖಾನ್ ನಡೆದುಕೊಂಡು ಬರುವ ದೃಶ್ಯವನ್ನೇ ವರುಣ್ ಧವನ್ ʼಬೇಬಿ ಜಾನ್ʼ ನಲ್ಲಿ ಮಾಡಿದ್ದಾರೆ. ಇದು ʼಜವಾನ್ʼ ಸಿನಿಮಾ ಚೀಪ್ ವರ್ಷನ್ ಎಂದು ಒಬ್ಬರು ಬರೆದುಕೊಂಡಿದ್ದಾರೆ.
“ಎಲ್ಲಾ ಅಂಶಗಳಲ್ಲಿ ʼಥೇರಿʼ ಸಿನಿಮಾದ ದೃಶ್ಯಗಳು ಎದ್ದು ಕಾಣುತ್ತದೆ. ʼಥೇರಿʼಯ ಆಕ್ಷನ್ ದೃಶ್ಯಗಳು ಚೆನ್ನಾಗಿತ್ತು. ಆದರೆ ಇಲ್ಲಿ ಅದನ್ನು ಹೆಚ್ಚು ಪಾಲಿಶ್ ಮಾಡಲಾಗಿದೆ” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
“ನಾನು ʼಥೇರಿʼಯನ್ನು ಹಲವಾರು ಬಾರಿ ವೀಕ್ಷಿಸಿದ್ದೇನೆ. ಈ ಟೀಸರ್‌ನಲ್ಲಿ ಇರುವುದು ಥೇಟು ʼಥೇರಿʼಯೇ ಎನ್ನುವುದು ಗೊತ್ತಾಗುತ್ತದೆ. ಆದರೂ ನಾನು ಥಿಯೇಟರ್‌ಗೆ ಸಿನಿಮಾ ನೋಡುತ್ತೇನೆ ಅದಕ್ಕೆ ಪ್ರಮುಖ ಕಾರಣ ಥಮನ್ ಅವರ ಮ್ಯೂಸಿಕ್ ಎಂದು ಒಬ್ಬರು ಬರೆದುಕೊಂಡಿದ್ದಾರೆ.
ವರುಣ್ ಧವನ್ ಜೊತೆ ಸಿನಿಮಾದಲ್ಲಿ ಕೀರ್ತಿ ಸುರೇಶ್ (Keerthy Suresh) ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಇವರೊಂದಿಗೆ ಚಿತ್ರದಲ್ಲಿ ವಾಮಿಕಾ ಗಬ್ಬಿ ಕೂಡ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ಸಿನಿಮಾದಲ್ಲಿ ವರುಣ್ ಧವನ್ ಜೊತೆ ಜಾಕಿ ಶ್ರಾಫ್ , ರಾಜ್ಪಾಲ್ ಯಾದವ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
ʼಬೇಬಿ ಜಾನ್ʼ ಅಟ್ಲಿ(Atlee Kumar) ಅವರ ʼಥೇರಿʼ ಸಿನಿಮಾದ ಹಿಂದಿ ರಿಮೇಕ್ ಎಂದು ಹೇಳಲಾಗುತ್ತಿದೆ. ಈ ಸಿನಿಮಾವನ್ನು ಮುರಾದ್ ಖೇತಾನಿ, ಪ್ರಿಯಾ ಅಟ್ಲಿ ಮತ್ತು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದಾರೆ.
ಇದೇ ವರ್ಷದ ಡಿಸೆಂಬರ್ 25 ರಂದು ಸಿನಿಮಾ ತೆರೆ ಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi: ಪಾಟ್ನಾ-ಗುಜರಾತ್ ಟೈ
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
C.T.Ravi issue: ಕೋರ್ಟ್‌ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.