‘ನಿಮ್ಮ ಮಗುವಿಗೆ ಅಪ್ಪ ಯಾರು’ ? ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ನಟಿ ನುಸ್ರತ್ ಜಹಾನ್
Team Udayavani, Sep 9, 2021, 7:01 PM IST
ಕೋಲ್ಕತ್ತಾ: ನಟಿ ಹಾಗೂ ಸಂಸದೆ ನುಸ್ರತ್ ಜಹಾನ್ ತಾಳಿ ಕಟ್ಟಿದ ಗಂಡನಿಂದ ದೂರವಾದ ಬಳಿಕ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಕಳೆದ ತಿಂಗಳು ಈಕೆಗೆ ಗಂಡು ಮಗುವಿನ ಜನನವಾಗಿದೆ.
ಜಹಾನ್ ಗರ್ಭವತಿಯಾಗಿದ್ದಾಗಲೇ ಆಕೆಯ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗಿದ್ದು ಬೆಳಕಿಗೆ ಬಂದಿತ್ತು. ಈಕೆಯ ಹೊಟ್ಟೆಯಲ್ಲಿರುವುದು ನನ್ನ ಮಗು ಅಲ್ಲ ಎಂದು ಜಹಾನ್ ಪತಿ ನಿಖಿಲ್ ಜೈನ್ ಹೇಳಿದ್ದರು. ಅಂದು ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ನಟಿ, ಭಾರತೀಯ ಕಾನೂನಿನ ಪ್ರಕಾರ ನಮ್ಮಿಬ್ಬರ ವಿವಾಹ ಮಾನ್ಯವಲ್ಲ ಅಂದ್ಮೇಲೆ ನೀನು ನನ್ನ ಪತಿಯಲ್ಲ ಎಂದು ತಿರುಗೇಟು ನೀಡಿದರು.
ಹೀಗೆ ಪತಿಯಿಂದ ದೂರುವಾದ ನುಸ್ರತ್ ಆಗಸ್ಟ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆಯ ಒಂದು ತಿಂಗಳ ನಂತರ ಮಾಧ್ಯಮಗಳ ಎದುರು ಕಾಣಿಸಿಕೊಂಡಿರುವ ಈಕೆ, ಇದೀಗ ಪತ್ರಕರ್ತರು ಕೇಳಿದ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟಿದ್ದಾರೆ.
ನನ್ನ ಮಗುವಿನ ತಂದೆ ಯಾರು ಎಂದು ಆ ತಂದೆಗಷ್ಟೇ ಗೊತ್ತು, ಮಗನನ್ನು ನೋಡಲು ಅವರು ಯಾರಿಗೂ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಅಲ್ಲದೆ ಪತ್ರಕರ್ತರನ್ನೇ ಗುರಿಯಾಗಿಸಿಕೊಂಡ ನುಸ್ರತ್ ಜಹಾನ್, ‘ಈ ರೀತಿಯ ಪ್ರಶ್ನೆಗಳನ್ನು ಕೇಳುವುದು ಒಂದು ಮಹಿಳೆಗೆ ಮಾಡುವ ಅವಮಾನ, ನಾನು ಹಾಗೂ ಯಶ್ ದಾಸ್ ಗುಪ್ತಾ ಮಗುವಿನ ಜೊತೆ ಖುಷಿಯಾಗಿದ್ದೇವೆ ಎಂದು ಹೇಳಿದರು.
ಇನ್ನು ನುಸ್ರತ್ ಜಹಾನ್ ಹಾಗೂ ಟರ್ಕಿಯಲ್ಲಿರುವ ಉದ್ಯಮಿ ನಿಖಿಲ್ ಜೈನ್ ಅವರ ವೈವಾಹಿಕ ಸಂಬಂಧ ಅಂತ್ಯವಾದ ಬಳಿಕ ನುಸ್ರತ್ ಅವರ ಹೆಸರು ಯಶ್ ದಾಸ್ ಗುಪ್ತಾ ಅವರ ಜೊತೆ ಗುರುತಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.