ಕೇಕ್ ಕತ್ತರಿಸುತ್ತಿದ್ದ ನಟಿ ಕೂದಲಿಗೆ ಹೊತ್ತಿಕೊಂಡ ಬೆಂಕಿ | ವಿಡಿಯೋ
Team Udayavani, Sep 23, 2021, 2:22 PM IST
ನವದೆಹಲಿ: ಹಾಲಿವುಡ್ ನಟಿ ನಿಕೋಲ್ ರಿಚಿ ಇತ್ತೀಚಿಗೆ 40ನೇ ವರ್ಷಕ್ಕೆ ಕಾಲಿಟ್ಟರು. ಈ ಸುದಿನದಂದು ಕೆಕ್ ಕತ್ತರಿಸಿದ ಸಂಭ್ರಮಿಸುತ್ತಿದ್ದ ವೇಳೆ ಅವಘಡವೊಂದು ಜರುಗಿತು.
ಅಮೆರಿಕಾದ ನಟಿ, ರೂಪದರ್ಶಿ ಹಾಗೂ ಫ್ಯಾಶನ್ ಡಿಸೈನರ್ ಆಗಿರುವ ನಿಕೋಲ್ ರಿಚಿ ಅವರು ಸೆಪ್ಟೆಂಬರ್ 21ಕ್ಕೆ 40 ನೇ ವಸಂತಕ್ಕೆ ಕಾಲಿಟ್ಟರು. ಸ್ನೇಹಿತರು, ಕುಟುಂಬಸ್ಥರು ಹಾಗೂ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಅದರಂತೆ ಸುಂದರವಾದ ಕೇಕ್ ಕಟ್ ಮಾಡಲು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲೇ ಪ್ರಮಾದವೊಂದು ನಡೆದು ಬಿಟ್ಟಿತು.
ನಿಕೋಲ್ ಅವರು ನಗುಮೊಗದಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದರು. ತಮ್ಮ ಬಾಲ್ಯದ ಫೋಟೊ ಹೊಂದಿದ್ದ ಕೇಕ್ ಮೇಲೆ ಉರಿಯುತ್ತಿದ್ದ ಮೇಣದಬತ್ತಿಗಳನ್ನು ಆರಿಸಲು ಮುಂದೆ ಬಾಗಿದರು. ಈ ವೇಳೆ ಕ್ಯಾಂಡಲ್ ಅವರ ತಲೆಯ ಕೂದಲುಗಳಿಗೆ ತಾಗಿತು. ನೋಡು ನೋಡುತ್ತಿದ್ದಂತೆ ಅವರ ಕೂದಲು ಹಾಗೂ ಕೊರಳಿಗೆ ಬೆಂಕಿ ಹತ್ತಿಕೊಂಡಿತು. ತಕ್ಷಣವೇ ಸ್ಥಳದಲ್ಲಿದ್ದವರು ಸಹಾಯಕ್ಕೆ ಬಂದು ಬೆಂಕಿ ನಂದಿಸಿದರು.
View this post on Instagram
ಇನ್ನು ನಿಕೋಲ್ ಅವರು ಈ ಘಟನೆಯ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಾಕಷ್ಟು ಅಭಿಮಾನಿಗಳು, ಸ್ನೇಹಿತರು ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಸುರಕ್ಷಿತವಾಗಿರಿ ಎಂದು ಕಾಮೆಂಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.