ಸ್ಟುಡಿಯೋದಲ್ಲೇ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ‘ಲಗಾನ್’ ಕಲಾ ನಿರ್ದೇಶಕ
Team Udayavani, Aug 2, 2023, 11:25 AM IST
ಮುಂಬಯಿ: ಬಾಲಿವುಡ್ ನ ಖ್ಯಾತ ಕಲಾ ನಿರ್ದೇಶಕರೊಬ್ಬರು ತಮ್ಮ ಸ್ಟುಡಿಯೋದಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬಾಲಿವುಡ್ ನ ಕಲಾ ನಿರ್ದೇಶಕ ನಿತಿನ್ ದೇಸಾಯಿ (57) ಮುಂಬಯಿಯ ಕರ್ಜಾತ್ ಬಳಿಯ ಖಲಾಪುರ್ ರಾಯ್‌ಗಢ್‌ನಲ್ಲಿರುವ ಅವರ ಎನ್‌ಡಿ ಸ್ಟುಡಿಯೋದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಅವರ ಸಾವಿನ ಸುದ್ದಿಯ ಕುರಿತು ಬಿಜೆಪಿಯ ಕರ್ಜಾತ್‌ನ ಸ್ಥಳೀಯ ಶಾಸಕ ಮಹೇಶ್ ಬಾಲ್ಡಿ “ನಿತಿನ್ ದೇಸಾಯಿ ಅವರು ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.
“ನಿತಿನ್ ದೇಸಾಯಿ ಅವರ ಎನ್‌ಡಿ ಸ್ಟುಡಿಯೋ ನನ್ನ ಕ್ಷೇತ್ರದಲ್ಲಿ ಬರುತ್ತದೆ. ಅವರಿಗೆ ಕಳೆದ ಕೆಲ ದಿನಗಳಿಂದ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು, ಈ ಕಾರಣದಿಂದ ಇಂದು ಬೆಳಗ್ಗೆ ಎನ್‌ಡಿ ಸ್ಟುಡಿಯೋದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಬಾಲ್ಡಿ ಹೇಳಿದ್ದಾರೆ.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, “ ಈ ಬಗ್ಗೆ ಎಲ್ಲಾ ಆಯಾಮದಲ್ಲೂ ನಾವು ತನಿಖೆ ನಡೆಸುತ್ತಿದೆ ಎಂದು ರಾಯಗಢದ ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ ಘರ್ಗೆ ಹೇಳಿದ್ದಾರೆ.
ನಿತಿನ್ ದೇಸಾಯಿ ಅವರು ಇಂದು (ಬುಧವಾರ ಆ.2 ರಂದು) ಮುಂಜಾನೆ 4:30 ಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದುರಂತವೆಂದರೆ ಆಗಸ್ಟ್ 9 ರಂದು ಅವರ 58ನೇ ಹುಟ್ಟುಹಬ್ಬವಿತ್ತು.
ಬಾಲಿವುಡ್ ನ ‘ಹಮ್ ದಿಲ್ ದೇ ಚುಕೆ ಸನಮ್’, ‘ದೇವದಾಸ್’, ‘ಜೋಧಾ ಅಕ್ಬರ್’ ಮತ್ತು ‘ಲಗಾನ್’ ಸಿನಿಮಾಗಳಲ್ಲಿ ಅದ್ಧೂರಿ ಸೆಟ್ ಗಳ ವಿನ್ಯಾಸವನ್ನು ಮಾಡಿ ಖ್ಯಾತಿಯಾಗಿದ್ದರು. 20 ವರ್ಷದ ತನ್ನ ವೃತ್ತಿ ಜೀವನದಲ್ಲಿ ಅಶುತೋಷ್ ಗೋವಾರಿಕರ್, ವಿಧು ವಿನೋದ್ ಚೋಪ್ರಾ, ರಾಜ್‌ಕುಮಾರ್ ಹಿರಾನಿ ಮತ್ತು ಸಂಜಯ್ ಲೀಲಾ ಬನ್ಸಾಲಿ ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.
2002 ರಲ್ಲಿ ಚಂದ್ರಕಾಂತ್ ಪ್ರೊಡಕ್ಷನ್ಸ್‌ನಲ್ಲಿ “ದೇಶ್ ದೇವಿ” ಎನ್ನುವ ಭಕ್ತಿ ಪ್ರಧಾನ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. 2005 ರಲ್ಲಿ, ಅವರು ಮುಂಬೈ ಸಮೀಪದ ಕರ್ಜತ್‌ನಲ್ಲಿ 52 ಎಕರೆ ಪ್ರದೇಶದಲ್ಲಿ ತಮ್ಮ ಎನ್ ಡಿ ಸ್ಟುಡಿಯೋವನ್ನು ತೆರೆದಿದ್ದರು. ಇವರ ಸ್ಟುಡಿಯೋದ ಪ್ರದೇಶದಲ್ಲಿ ʼಜೋಧಾ ಅಕ್ಬರ್ʼ, ʼಟ್ರಾಫಿಕ್ ಸಿಗ್ನಲ್ʼ ಶೋ ಬಿಗ್ ಬಾಸ್‌ನಂತಹ ಶೋಗಳ ಶೂಟ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?
CELEBRITIES: ಶಾರುಖ್ ಟು ಸಲ್ಮಾನ್; ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು
Bollywood: ವರುಣ್ ಧವನ್ ʼಬೇಬಿ ಜಾನ್ʼ ಟೀಸರ್ ನೋಡಿ ʼಜವಾನ್ʼ ಕಾಪಿ ಎಂದ ನೆಟ್ಟಿಗರು
Ranveer-Deepika ಮಗಳ ಹೆಸರು ‘ದುವಾ ಪಡುಕೋಣೆ ಸಿಂಗ್’
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.