![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, May 20, 2023, 2:44 PM IST
ಹೈದರಾಬಾದ್: ಟಾಲಿವುಡ್ ನ ಸ್ಟಾರ್ ನಟ ಜೂ.ಎನ್ ಟಿಆರ್ ಅವರಿಗೆ ಗ್ಲೋಬಲ್ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ.ʼಆರ್ ಆರ್ ಆರ್ʼ ಸಿನಿಮಾದ ಬಳಿಕ ಅವರ ಸಿನಿಮಾ ಇಮೇಜ್ ವ್ಯಾಲ್ಯೂ ಹೆಚ್ಚಿದೆ. ಇಂದು ಜೂ.ಎನ್ ಟಿಆರ್ ಹುಟ್ಟುಹಬ್ಬ ಅವರ ಬರ್ತ್ ಡೇ ದಿನ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ಸಿಕ್ಕಿದೆ.
ಬರ್ತ್ ಡೇಯ ಪ್ರಯುಕ್ತ ಜೂ.ಎನ್ ಟಿಆರ್ ಅವರ 30ನೇ ಸಿನಿಮಾ ‘ದೇವರʼ ಟೈಟಲ್ ಪೋಸ್ಟರ್ ರಿಲೀಸ್ ಆಗಿರುಚು ಗೊತ್ತೇ ಇದೆ. ಕೊರಟಾಲ ಶಿವರೊಂದಿಗೆ ಜೂ.ಎನ್ ಟಿಆರ್ ಅವರ ಎರಡನೇ ಸಿನಿಮಾ ಇದಾಗಿದ್ದು,ಜಾಹ್ನವಿ ಕಪೂರ್, ಸೈಫ್ ಆಲಿಖಾನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಜೂ.ಎನ್ ಟಿಆರ್ ಅವರೊಂದಿಗೆ ಪ್ರಶಾಂತ್ ನೀಲ್ ಸಿನಿಮಾ ಮಾಡಲಿದ್ದಾರೆ ಎಂಬ ಗಾಸಪ್ ಟಾಲಿವುಡ್ ನಲ್ಲಿ ಹರಿದಾಡಿ ಸಂಚಲನ ಸೃಷ್ಟಿಸಿತ್ತು. ಈ ವಿಚಾರ ಸತ್ಯವಾದರೂ ಸಿನಿಮಾದ ಬಗ್ಗೆ ಯಾವುದೇ ಅಪ್ಡೇಟ್ ಮಾತ್ರ ಸಿಕ್ಕಿರಲಿಲ್ಲ. ಇದೀಗ ‘NTR 31’ ಸಿನಿಮಾ ತಂಡ ನಟನ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಎಲ್ಲಾ ಗಾಸಿಪ್ ಗಳಿಗೆ ತೆರೆ ಎಳೆದು ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದೆ.
ಮೈತ್ರಿ ಮೂವಿ ಮೇಕರ್ಸ್ ಈ ಕುರಿತು ಪೋಸ್ಟರ್ ವೊಂದನ್ನು ರಿಲೀಸ್ ಮಾಡಿ ನಾಯಕ ನಟನಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದೆ. ಇನ್ನು ಸಿನಿಮಾದ ಚಿತ್ರೀಕರಣ ಮಾರ್ಚ್ 2024 ರಿಂದ ಆರಂಭವಾಗಲಿದೆ ಎನ್ನುವ ಮೇಜರ್ ಅಪ್ಡೇಟ್ ನ್ನು ಸಹ ಚಿತ್ರತಂಡ ನೀಡಿದೆ.
ಮುಂದಿನ ದಿನಗಳಲ್ಲಿ ಸಿನಿಮಾದ ಇತರ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ಹೊರಬೀಳಲಿದೆ.
ಸದ್ಯ ಪ್ರಶಾಂತ್ ನೀಲ್ ಪ್ರಭಾಸ್ ಅವರ ʼಸಲಾರ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಇದೇ ಸೆ.28 ರಂದು ರಿಲೀಸ್ ಆಗಲಿದೆ.
ಇನ್ನು ಅಯಾನ್ ಮುಖರ್ಜಿ ಅವರ ʼವಾರ್ -2ʼ ಸಿನಿಮಾದಲ್ಲಿ ಹೃತಿಕ್ ರೋಷನ್ ನೊಂದಿಗೆ ಜೂ.ಎನ್ ಟಿಆರ್ ಬಣ್ಣ ಹಚ್ಚುವ ಮೂಲಕ ಬಾಲಿವುಡ್ ಗೆ ಎಂಟ್ರಿ ಆಗಲಿದ್ದಾರೆ.
Team #NTR31 wishes @tarak9999 a very Happy Birthday 🔥🔥
On to the sets from March 2024 💥💥#HappyBirthdayNTR#PrashanthNeel @NTRArtsOfficial pic.twitter.com/Mi769WTE2o
— Mythri Movie Makers (@MythriOfficial) May 20, 2023
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.