ನಟ ಓಂ ಪುರಿ ಸಾವು : ಹಿಂದಿನ ರಾತ್ರಿ ನಡೆದದ್ದೇನು ? ಇಲ್ಲಿದೆ ವಿವರ
Team Udayavani, Jan 10, 2017, 5:17 PM IST
ಹೊಸದಿಲ್ಲಿ : ಬಾಲಿವುಡ್ ಹಿರಿಯ ನಟ ಓಂ ಪುರಿ (66) ಅವರ ಹಠಾತ್ ಸಾವು ಇಡಿಯ ಭಾರತೀಯ ಚಿತ್ರರಂಗಕ್ಕೆ ಭಾರೀ ದೊಡ್ಡ ಶಾಕ್ ನೀಡಿರುವುದು ಸತ್ಯ. ಅವರ ಅನಿರೀಕ್ಷಿತ ಸಾವಿಗಾಗಿ ಚಿತ್ರರಂಗ ಮರುಗಿದೆ. ಹಾಗಿದ್ದರೂ ಓಂ ಪುರಿ ಅವರು ಸಹಜ ಸಾವನ್ನು ಕಂಡಿಲ್ಲ ಎಂದು ಕೆಲವು ವರದಿಗಳು ಹೇಳುತ್ತಿವೆ. ಅವರ ಸಾವು ಶಂಕಾಸ್ಪದವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಓಂ ಪುರಿ ಸಾವಿನ ಹಿಂದೆ ಯಾರದೇ ಕೈವಾಡ ಇರುವ ಸಾಧ್ಯತೆಯನ್ನು ಮುಂಬಯಿ ಪೊಲೀಸರು ತಳ್ಳಿ ಹಾಕಿದ್ದಾರೆ.
ಆದರೆ ಓಂ ಪುರಿಯ ಸ್ನೇಹಿತನಾಗಿರುವ ಅವರ ಕಾರಿನ ಚಾಲಕ ಖಾಲಿದ್ ಕಿದ್ವಾಯಿ ನೀಡಿರುವ ಹೇಳಿಕೆ ಗಮನಾರ್ಹವಾಗಿದೆ. ಓಂ ಪುರಿ ಸಾವಿನ ಹಿಂದಿನ ರಾತ್ರಿ ನಡೆದ ಕೆಲವು ಆಘಾತಕಾರಿ ವಿದ್ಯಮಾನಗಳ ಮೇಲೆ ಆತನ ಹೇಳಿಕೆ ಬೆಳಕು ಚೆಲ್ಲುತ್ತವೆ.
ಡಿಎನ್‌ಎ ವರದಿ ಮಾಡಿರುವ ಪ್ರಕಾರ ಓಂ ಪುರಿ ಅವರು ತಮ್ಮ ಪುತ್ರನನ್ನು ಕಾಣಲು ಹಿಂದಿನ ಗುರುವಾರ ಸಂಜೆ ತೃಶೂಲ್ ಕಟ್ಟಡಕ್ಕೆ ತೆರಳಿದ್ದಾರೆ. ಆದರೆ ತನ್ನ ಪುತ್ರ ಹಾಗೂ ತನ್ನ ಮಾಜಿ ಪತ್ನಿ ನಂದಿತಾ ಯಾವುದೋ ಪಾರ್ಟಿಗೆ ಹೋಗಿರುವುದು ಓಂ ಪುರಿಗೆ ತಿಳಿದು ಬರುತ್ತದೆ.
ಆಗ ಓಂ ಪುರಿ ಅವರು ಮಾಜಿ ಪತ್ನಿ ನಂದಿತಾಗೆ ಫೋನ್ ಮಾಡುತ್ತಾರೆ. ಫೋನಿನಲ್ಲಿ ಸಿಟ್ಟಿನಿಂದ ಕೂಗಾಡುತ್ತಾರೆ. ಪಾರ್ಟಿಯಿಂದ ಬೇಗನೆ ಮನೆಗೆ ಮರಳಬೇಕೆಂದೂ ತಾನು ತನ್ನ ಪುತ್ರನನ್ನು ಅರ್ಜೆಂಟಾಗಿ ಕಾಣಬೇಕಾಗಿದೆ ಎಂದೂ ಓಂ ಪುರಿ ಫೋನಿನಲ್ಲಿ ಗುಡುಗುತ್ತಾರೆ.
ಇದಾಗಿ ಸುಮಾರು 45 ನಿಮಿಷಗಳ ಕಾಲ ಓಂ ಪುರಿ, ನಂದಿತಾಳ ಫ್ಲಾಟ್‌ನಲ್ಲಿ ಕಾಯುತ್ತಾರೆ. ಆದರೆ ಪತ್ನಿ – ಪುತ್ರ ಇಬ್ಬರೂ ಮರಳಿ ಬರುವುದಿಲ್ಲ. ಈ ನಡುವೆ ಓಂ ಪುರಿ ಲಿಕ್ಕರ್ ಬಾಟಲ್ ಹಿಡಿದುಕೊಂಡು ಗ್ಲಾಸಿಗೆ ಮದ್ಯವನ್ನು ಸುರಿಯುತ್ತಾ ಕುಡಿಯಲು ಆರಂಭಿಸುತ್ತಾರೆ. ಪತ್ನಿ – ಮಗನಿಗಾಗಿ ಕಾದು ಸುಸ್ತಾಗಿ ಕುಡಿಯುವುದನ್ನು ಮುಗಿಸಿ ಕಾರನ್ನು ಹತ್ತುತ್ತಾರೆ.
ಇವಿಷ್ಟು ವಿವರಗಳನ್ನು ಓಂ ಪುರಿ ಅವರ ಚಾಲಕ-ಸ್ನೇಹಿತ ಖಾಲಿದ್ ಕಿದ್ವಾಯಿ ಪೊಲೀಸರಿಗೆ ನೀಡಿದ್ದಾರೆ.
ಓಂ ಪುರಿ ಜನವರಿ 6ರಂದು ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
Life threat: ಸಲ್ಮಾನ್ ಮನೆ ಬಾಲ್ಕನಿಗೆ ಬುಲೆಟ್‌ಪ್ರೂಫ್ ಗಾಜು
ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್.. ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.