Happy B’day: ಮಲಯಾಳಂ ಮೆಗಾಸ್ಟಾರ್, ನಟ ಮೋಹನ್ ಲಾಲ್ 61ನೇ ಹುಟ್ಟುಹಬ್ಬ
ಸುಕುಮಾರನ್, ಟೊವಿನೊ ಥಾಮಸ್ ಸೇರಿದಂತೆ ಹಲವು ಗಣ್ಯರು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.
Team Udayavani, May 21, 2021, 10:41 AM IST
ತಿರುವನಂತಪುರಂ:ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ ಇಂದು (ಮೇ 21) 61ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನೆಟಿಜನ್ಸ್ ತಮ್ಮ ನೆಚ್ಚಿನ ನಟನಿಗೆ ಭರಪೂರ ಶುಭಾಶಯಗಳ ಸಂದೇಶವನ್ನು ಕಳುಹಿಸುತ್ತಿದ್ದಾರೆ.
ಇದನ್ನೂ ಓದಿ:ವೈಲೆಂಟ್ ಬಿಟ್ಟು ಸೈಲೆಂಟ್ ಆಗಿರೋಣ.. ಮಾನ್ವಿತಾ ಹೇಳಿದ ಲಾಕ್ ಡೌನ್ ಅನುಭವ
ಮೆಗಾಸ್ಟಾರ್ ಮೋಹನ್ ಲಾಲ್ ಸಿನಿಮಾರಂಗದಲ್ಲಿ ಸಾಮಾನ್ಯವಾಗಿ ಲಾಲ್ ಎಂದೇ ಗುರುತಿಸಿಕೊಂಡಿದ್ದಾರೆ. ಆದರೆ ನಿಕಟವರ್ತಿಗಳು, ಆಪ್ತರಿಗೆ ಲಾಲೆಟ್ಟನ್ ಆಗಿದ್ದಾರೆ. ಐದು ಬಾರಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿರುವ ಮೋಹನ್ ಲಾಲ್ ಗೆ ಜಾಗತಿಕವಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಲಾಲೆಟ್ಟನ್ 61ನೇ ಹುಟ್ಟುಹಬ್ಬದ ನಿಟ್ಟಿನಲ್ಲಿ ಬಿಡುಗಡೆ ಮಾಡಿರುವ ಕಾಮನ್ ಡಿಪಿ ಪೋಸ್ಟರ್ ನಲ್ಲಿಯೂ ಮೋಹನ್ ಲಾಲ್ ಅಭಿನಯದ ದೃಶ್ಯಂ 2 ಸಿನಿಮಾದ ಸ್ಟೈಲ್ ಹೈಲೈಟ್ ಮಾಡಲಾಗಿದೆ. ಇದನ್ನು ಲಾಲ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸುತ್ತಿದ್ದಾರೆ.
ಮಲಯಾಳಂ ಸಿನಿಮಾರಂಗದ ಜತೆಗೆ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಮೋಹನ್ ಲಾಲ್ ನಾಲ್ಕು ದಶಕಗಳ ಕಾಲ ಸ್ಟಾರ್ ಪಟ್ಟದಲ್ಲಿಯೇ ಮುಂದುವರಿದಿರುವುದು ಅವರ ಅಭಿನಯದ ಹೆಗ್ಗಳಿಕೆಯಾಗಿದೆ. ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಮೆಚ್ಚುಗೆ ಪಡೆದ ನಟರಲ್ಲಿ ಮೋಹನ್ ಲಾಲ್ ಕೂಡಾ ಒಬ್ಬರಾಗಿದ್ದು, ಈವರೆಗೆ 340ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮೋಹನ್ ಲಾಲ್ ಅವರ ಹುಟ್ಟುಹಬ್ಬಕ್ಕೆ ಮಲಯಾಳಂ ನಟರಾದ ಪ್ರಥ್ವಿರಾಜ್, ಸುಕುಮಾರನ್, ಟೊವಿನೊ ಥಾಮಸ್ ಸೇರಿದಂತೆ ಹಲವು ಗಣ್ಯರು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.