“ಸಲಾರ್”ನಿಂದ ಬಂದ ರಗಡ್ ʼವರ್ಧರಾಜ ಮನ್ನಾರ್ʼ: ಪೃಥ್ವಿರಾಜ್ ಫಸ್ಟ್ ಲುಕ್ ವೈರಲ್
Team Udayavani, Oct 16, 2022, 11:47 AM IST
ಬೆಂಗಳೂರು: ಪ್ರಶಾಂತ್ ನೀಲ್ – ಪ್ರಭಾಸ್ ಕಾಂಬಿನೇಷನ್ ನ ʼಸಲಾರ್ʼ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸೆಟ್ಟೇರಿದ ದಿನದಿಂದಲೇ ಕುತೂಹಲ ಹೆಚ್ಚಿಸಿರುವ ಚಿತ್ರ ಮುಂದಿನ ವರ್ಷ ತೆರೆಗೆ ಬರಲಿದೆ.
ಕೆಜಿಎಫ್ -2 ಬಳಿಕ ಪ್ರಶಾಂತ್ ನೀಲ್ ತಮ್ಮ ಮುಂದಿನ ಸಿನಿಮಾ ʼಸಲಾರ್ʼ ಗಾಗಿ ಭರ್ಜರಿ ತಯಾರಿ ನಡೆಸಿಕೊಂಡು, ಕಟ್ಟುನಿಟ್ಟಿನ ನಿಯಮವನ್ನು ಹಾಕಿಕೊಂಡು ಚಿತ್ರೀಕರಣದಲ್ಲಿ ತೊಡಗಿದ್ದಾರೆ. ʼರಾಧೆ ಶ್ಯಾಮ್ʼ ನಂತರ ಡಾರ್ಲಿಂಗ್ ಪ್ರಭಾಸ್ ಆ್ಯಕ್ಷನ್ – ಮಾಸ್ ಅವತಾರದಲ್ಲಿ ʼಸಲಾರ್ʼ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿರುವ ಪ್ರಭಾಸ್ ಅವರಿಗೆ ʼಸಲಾರ್ʼ ಗೆಲುವು ತಂದುಕೊಡುವ ವಿಶ್ವಾಸವಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ʼಸಲಾರ್ʼ ನಲ್ಲಿ ಬಹುತಾರಂಗಣವಿದೆ. ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಅವರು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಅವರ ಪಾತ್ರದ ಲುಕ್ ರಿವೀಲ್ ಮಾಡಿ, ಚಿತ್ರ ತಂಡ ನಟನ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಟ್ಟಿದೆ.
ಪೃಥ್ವಿರಾಜ್ ಅವರ ಪಾತ್ರಕ್ಕೆ “ವರ್ಧರಾಜ ಮನ್ನಾರ್” ಹೆಸರಿಡಲಾಗಿದ್ದು, ತಲೆಗೆ ಉದ್ದನಾಮ ಹಾಕಿಕೊಂಡು,ಕುತ್ತಿಗೆಗೆ ಖಡ್ಗ ಹಾಕಿಕೊಂಡು, ಮೈಯಲ್ಲಿ ಧೂಳು ಹಿಡಿದ ಬಟ್ಟೆಯನ್ನು ಹಾಕಿಕೊಂಡು ರಗಡ್ ಲುಕ್ ನಲ್ಲಿ ಯುದ್ಧ ಭೂಮಿಯಲ್ಲಿ ನಿಂತ ಖಳನಾಯಕನಂತೆ ಪೃಥ್ವಿರಾಜ್ ನಿಂತಿರುವ ಫಸ್ಟ್ ಲುಕ್ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೊಂಬಾಳೆ ಫಿಲ್ಮ್ಸ್ ಪೃಥ್ವಿರಾಜ್ ಅವರ 40 ನೇ ಹುಟ್ಟುಹಬ್ಬಕ್ಕೆ ಈ ಪೋಸ್ಟರ್ ರಿಲೀಸ್ ಮಾಡಿ ಶುಭಾಶಯವನ್ನು ಕೋರಿದೆ.
ಸಲಾರ್ ಚಿತ್ರದಲ್ಲಿ ಪ್ರಭಾಸ್, ಶ್ರುತಿ ಹಾಸನ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಮತ್ತು ಜಗಪತಿ ಬಾಬು ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. “ಸಲಾರ್” 2023 ರ ಸೆ.28 ರಂದು ವಿಶ್ವದೆಲ್ಲೆಡೆ ರಿಲೀಸ್ ಆಗಲಿದೆ.
Presenting ‘?????????? ???????’ from #Salaar.
Parallel or mainstream, Arthouse or commercial, he has always made sure to strike a balance n delivered stupendously with an entertaining n engaging act. To the most versatile @PrithviOfficial a very Happy Birthday. pic.twitter.com/LlCBuc6Tkd
— Hombale Films (@hombalefilms) October 16, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.