Oscars: ಆಸ್ಕರ್ ಅಕಾಡೆಮಿ ಸದಸ್ಯತ್ವಕ್ಕೆ ರಾಜಮೌಳಿ, ಶಬಾನಾ ಅಜ್ಮಿ ಸೇರಿ 487 ಮಂದಿಗೆ ಆಹ್ವಾನ
Team Udayavani, Jun 26, 2024, 1:01 PM IST
ನವದೆಹಲಿ: ʼಬಾಹುಬಲಿʼ, ʼಆರ್ ಆರ್ ಆರ್ʼ (RRR Movie) ಬಳಿಕ ನಿರ್ದೇಶಕ ಎಸ್ಎಸ್ ರಾಜಮೌಳಿ (SS Rajamouli) ಅವರ ಜನಪ್ರಿಯತೆ ವಿಶ್ವಾದ್ಯಂತ ಹೆಚ್ಚಾಗಿದೆ. ಸಿನಿಮಾದಿಂದ ಮಾತ್ರವಲ್ಲದೆ ವ್ಯಕ್ತಿತ್ವದಿಂದಲೂ ಅವರಿಗೆ ಎಲ್ಲೆಡೆ ಗೌರವ ಸಿಕ್ಕಿದೆ.
ʼಆರ್ ಆರ್ ಆರ್ʼ ದೇಶ – ವಿದೇಶಗಳಲ್ಲಿ ಪ್ರದರ್ಶನ ಕಂಡು ಪ್ರತಿಷ್ಠಿತ ಆಸ್ಕರ್ (Oscars) ಕೂಡ ತನ್ನದಾಗಿಸಿಕೊಂಡು ದಾಖಲೆ ಬರೆದಿರುವುದು ಗೊತ್ತೇ ಇದೆ. ಇದೀಗ ಅವರಿಗೆ ಆಸ್ಕರ್ ಅಕಾಡೆಮಿಯಲ್ಲಿ ಸದಸ್ಯತ್ವ ಅವಕಾಶವೊಂದು ಒದಗಿ ಬಂದಿದೆ.
ಇತ್ತೀಚೆಗೆ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸ್ 487 ಮಂದಿಗೆ ಅಕಾಡೆಮಿಯ ಸದಸ್ಯತ್ವ ಪಡೆಯಲು ಆಹ್ವಾನ ನೀಡಿದೆ. ಇದರಲ್ಲಿ ನಿರ್ದೇಶಕ ರಾಜಮಾಳಿ ಅವರ ಪತ್ನಿ ಸೇರಿದಂತೆ ಹಲವು ಭಾರತೀಯರು ಇದ್ದಾರೆ. 487 ಆಹ್ವಾನಿತರಲ್ಲಿ19 ಆಸ್ಕರ್ ವಿಜೇತರು ಸೇರಿದಂತೆ 71 ಆಸ್ಕರ್ ನಾಮನಿರ್ದೇಶಿತರು ಸೇರಿದ್ದಾರೆ.
ರಾಜಮೌಳಿ ಅವರ ಪತ್ನಿ ರಾಮ ರಾಜಮೌಳಿ ಸೇರಿದಂತೆ ಛಾಯಾಗ್ರಾಹಕ ರವಿವರ್ಮನ್, ಚಲನಚಿತ್ರ ನಿರ್ಮಾಪಕಿ ರಿಮಾ ದಾಸ್ ʼನಾಟು ನಾಟುʼ ನೃತ್ಯ ನಿರ್ದೇಶಕ ಪ್ರೇಮ್ ರಕ್ಷಿತ್ ಅವರನ್ನೂ ಕೂಡ ಸದಸ್ಯತ್ವಕ್ಕಾಗಿ ಆಹ್ವಾನ ನೀಡಲಾಗಿದೆ.
ಎಲ್ಲಾ ಆಹ್ವಾನಿತರು ಆಹ್ವಾನಗಳನ್ನು ಸ್ವೀಕರಿಸಿದರೆ ಅಕಾಡೆಮಿಯ ಒಟ್ಟು ಸದಸ್ಯತ್ವವು 10,910 ಕ್ಕೆ ಏರುತ್ತದೆ ಮತ್ತು 9,000 ಕ್ಕೂ ಹೆಚ್ಚು ಜನರು ಮತ ಚಲಾಯಿಸಲು ಅರ್ಹರಾಗಿರುತ್ತಾರೆ.
ಸದಸ್ಯತ್ವ ಪಡೆದವರಿಗೆ ಅಕಾಡೆಮಿ ನಾನಾ ಸವಲತ್ತುಗಳು ಸಿಗಲಿವೆ. ಆಸ್ಕರ್ ಗೆ ಆಯ್ಕೆಯಾದ ಸಿನಿಮಾಗಳಿಗೆ ವೋಟ್ ಮಾಡುವ ಅವಕಾಶ ಈ ಸದಸ್ಯರಿಗೆ ಇರಲಿದೆ. ಸಿನಿಮಾಗಳ ವಿಶೇಷ ಸ್ಕ್ರೀನಿಂಗ್ ನಲ್ಲಿ ಇವರು ಭಾಗಿಯಾಗಬಹುದು. ವರ್ಕ್ಶಾಪ್, ಸೆಮಿನಾರ್ ಹಾಗೂ ಗ್ರಂಥಾಲಯವನ್ನು ಬಳಸುವ ಅವಕಾಶ ಇವರಿಗಿರುತ್ತದೆ.
ಎಆರ್ ರೆಹಮಾನ್,ರಾಮ್ ಚರಣ್, ಜೂನಿಯರ್ ಎನ್ಟಿಆರ್, ಎಂಎಂ ಕೀರವಾಣಿ ಮುಂತಾದವರು ಈಗಾಗಲೇ ಅಕಾಡೆಮಿ ಸದಸ್ಯತ್ವವನ್ನು ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.