ಶಾರುಖ್ ಪುತ್ರನಿಗೆ ಧೈರ್ಯ ತುಂಬಿದ ನಟ ಹೃತಿಕ್ ರೋಷನ್
Team Udayavani, Oct 7, 2021, 6:32 PM IST
ಬೆಂಗಳೂರು: ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಬಂಧಿತನಾದ ಶಾರುಖ್ ಪುತ್ರ ಆರ್ಯನ್ ಖಾನ್ ಪರ ಬಾಲಿವುಡ್‍ನ ಕೆಲವು ಸೆಲೆಬ್ರಿಟಿಗಳು ಬೆಂಬಲ ಸೂಚಿಸಿದ್ದಾರೆ. ಶಾರುಖ್ ಮನೆಗೆ ತೆರಳಿ ಧೈರ್ಯ ತುಂಬಿದ್ದಾರೆ. ಇದೀಗ ನಟ ಹೃತಿಕ್ ರೋಷನ್ ಅವರು ಆರ್ಯನ್ ಉಲ್ಲೇಖಿಸಿ ಪತ್ರವೊಂದನ್ನು ಬರೆದಿದ್ದಾರೆ.
ನನ್ನ ಪ್ರೀತಿಯ ಆರ್ಯನ್ ಖಾನ್..’ ಎಂದು ಹೃತಿಕ್ ಈ ಪತ್ರ ಆರಂಭಿಸಿದ್ದಾರೆ. ‘ಬದುಕೊಂದು ವಿಚಿತ್ರವಾದ ಪ್ರಯಾಣ. ಅನಿಶ್ಚಿತತೆ ಮತ್ತು ಕಷ್ಟದ ಕಾರಣದಿಂದಲೇ ಇದು ಮಹಾನ್ ಎನಿಸಿಕೊಂಡಿದೆ. ಆದರೆ ದೇವರು ಕರುಣಾಮಯ. ಪ್ರಬಲರಿಗೆ ಮಾತ್ರ ಅವನು ಕಠಿಣವಾದ ಕಷ್ಟ ಕೊಡುತ್ತಾನೆ. ಸಿಟ್ಟು, ಗೊಂದಲ, ಅಸಹಾಯಕತೆ ಎಲ್ಲವನ್ನೂ ನೀನು ಫೀಲ್ ಮಾಡಬೇಕು. ನಿನ್ನೊಳಗಿನ ನಾಯಕನನ್ನು ಹೊರತರಲು ಇವು ಪ್ರಮುಖ ಅಂಶಗಳು. ಆದರೆ ಹುಷಾರು, ಒಳ್ಳೆಯತನವನ್ನೂ ಇವು ಸುಟ್ಟು ಹಾಕಬಹುದು’.
ಅನುಭವಗಳಿಂದ ಯಾವ ಅಂಶವನ್ನು ನಮ್ಮ ಜೊತೆಗೆ ಇಟ್ಟುಕೊಳ್ಳಬೇಕು ಮತ್ತು ಯಾವುದನ್ನು ದೂರ ಎಸೆಯಬೇಕು ಎಂದು ಅರ್ಥ ಮಾಡಿಕೊಂಡಾಗ ತಪ್ಪು, ಸೋಲು, ಯಶಸ್ಸು ಇವೆಲ್ಲವೂ ಒಂದೇ ಎನಿಸುತ್ತದೆ. ಅವೆಲ್ಲವುಗಳಿಂದ ನೀನು ಇನ್ನೂ ಚೆನ್ನಾಗಿ ಬೆಳೆಯಬಹುದು. ನಿನ್ನನ್ನು ಚಿಕ್ಕಂದಿನಿಂದಲೂ ನೋಡುತ್ತಿದ್ದೇನೆ. ಎಲ್ಲ ಅನುಭವಗಳನ್ನು ನಿನ್ನದಾಗಿಸಿಕೋ. ಅವು ನಿನ್ನ ಉಡುಗೊರೆಗಳು’ ಎಂದು ಹೃತಿಕ್ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.