ಪಾಕ್ ಸರ್ಕಾರದಿಂದ ಲೆಜೆಂಡರಿ ನಟರಾದ ರಾಜ್ ಕಪೂರ್, ದಿಲೀಪ್ ಕುಮಾರ್ ಪೂರ್ವಜರ ಮನೆ ಖರೀದಿ
ರಾಜ್ ಕಪೂರ್, ದಿಲೀಪ್ ಕುಮಾರ್ ದೇಶ ಇಬ್ಭಾಗವಾಗುವ ಮುನ್ನ ತಮ್ಮ ಬಾಲ್ಯವನ್ನು ಪೇಶಾವರದಲ್ಲಿಯೇ ಕಳೆದಿದ್ದರು
Team Udayavani, Sep 28, 2020, 11:22 AM IST
ಪೇಶಾವರ: ಪಾಕಿಸ್ತಾನದ ಖೈಬರ್ ಪಖ್ತೂನ್ ಖವಾದ ಪ್ರಾಂತೀಯ ಸರ್ಕಾರ ಬಾಲಿವುಡ್ ದಂತಕತೆಯಾಗಿದ್ದ ನಟರಾದ ರಾಜ್ ಕಪೂರ್ ಮತ್ತು ದಿಲೀಪ್ ಕುಮಾರ್ ಅವರ ಪೂರ್ವಜರ ಐತಿಹಾಸಿಕ ಮನೆಗಳನ್ನು ಖರೀದಿಸಲು ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.
ರಾಜ್ ಕಪೂರ್ ಮತ್ತು ದಿಲೀಪ್ ಕುಮಾರ್ ಅವರ ಪೂರ್ವಜರ ಐತಿಹಾಸಿಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಒಡೆಯಬೇಕಾದ ಸ್ಥಿತಿಯನ್ನು ಎದುರಿಸುತ್ತಿದೆ ಎಂದು ವರದಿ ವಿವರಿಸಿದೆ. ಈ ನಿಟ್ಟಿನಲ್ಲಿ ಖೈಬರ್ ಪಾಖ್ತುನ್ ಖವಾ ಪ್ರಾಂತ್ಯದ ಪುರಾತತ್ವ ಇಲಾಖೆ ಈ ಎರಡು ಕಟ್ಟಡಗಳನ್ನು ಖರೀದಿಸಲು ಅಗತ್ಯವಾದ ಹಣಕಾಸು ಬಿಡುಗಡೆಗೆ ನಿರ್ಧರಿಸಿದೆ.
ಪೇಶಾವರದ ಹೃದಯಭಾಗದಲ್ಲಿರುವ ಭಾರತದ ಇಬ್ಬರು ದಿಗ್ಗಜರ ಪೂರ್ವಜರ ಮನೆಗಳನ್ನು ರಾಷ್ಟ್ರೀಯ ಪಾರಂಪರಿಕ ತಾಣವನ್ನಾಗಿ ಘೋಷಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಐತಿಹಾಸಿಕ ಕಟ್ಟಡಗಳಿಗೆ ಎಷ್ಟು ವೆಚ್ಚ ತಗಲಬಹುದು ಎಂಬ ಬಗ್ಗೆ ಮಾಹಿತಿ ನೀಡುವಂತೆ ಪೇಶಾವರದ ಡೆಪ್ಯುಟಿ ಕಮಿಷನರ್ ಗೆ ಈಗಾಗಲೇ ಪತ್ರ ರವಾನಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
LIVE: ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ತೋರಿದ ಕರಾವಳಿ: ಎಲ್ಲೆಲ್ಲಿ ಹೇಗಿದೆ?
ಭಾರತದ ಇಬ್ಬರು ಮಹಾನ್ ನಟರಾದ ರಾಜ್ ಕಪೂರ್, ದಿಲೀಪ್ ಕುಮಾರ್ ದೇಶ ಇಬ್ಭಾಗವಾಗುವ ಮುನ್ನ ತಮ್ಮ ಬಾಲ್ಯವನ್ನು ಪೇಶಾವರದಲ್ಲಿಯೇ ಕಳೆದಿರುವುದಾಗಿ ಪುರಾತತ್ವ ಇಲಾಖೆಯ ಮುಖ್ಯಸ್ಥ ಡಾ.ಅಬ್ದುಸ್ ಸಮದ್ ಖಾನ್ ತಿಳಿಸಿದ್ದಾರೆ.
ನಟ ರಾಜ್ ಕಪೂರ್ ಅವರ ಪೂರ್ವಜರ ಮನೆ “ಕಪೂರ್ ಹವೇಲಿ” ಎಂದೇ ಕರೆಯಲಾಗುತ್ತಿದೆ. ಇದು ಪ್ರಸಿದ್ಧ ಕ್ವಿಸ್ಸಾ ಖಾವಾನಿ ಬಜಾರ್ ಸಮೀಪ ಕಟ್ಟಲಾಗಿದೆ. ಈ ಮನೆಯನ್ನು 1918 ಮತ್ತು 1922ರ ನಡುವೆ ದಂತಕತೆ ನಟ ಕಪೂರ್ ಅಜ್ಜ ದೀವಾನ್ ಬಾಶೇವರ್ನಾಥ್ ಕಪೂರ್ ಕಟ್ಟಿಸಿದ್ದರು. ಈ ಮನೆಯಲ್ಲಿ ಕಪೂರ್ ಮತ್ತು ಅವರ ಚಿಕ್ಕಪ್ಪ ತ್ರಿಲೋಕ್ ಕಪೂರ್ ಜನಿಸಿದ್ದರು. ಈ ಮನೆಯನ್ನು ಪೇಶಾವರದ ಪ್ರಾಂತೀಯ ಸರ್ಕಾರ ರಾಷ್ಟ್ರೀಯ ಪಾರಂಪರಿಕ ತಾಣ ಎಂದು ಘೋಷಿಸಿದೆ.
ಹಿರಿಯ ನಟ ದಿಲೀಪ್ ಕುಮಾರ್ ಅವರ ಪೂರ್ವಜರ ಮನೆ ನೂರು ವರ್ಷಕ್ಕಿಂತ ಹಿಂದೆಯೇ ಕಟ್ಟಲಾಗಿದ್ದು, ಇದು ಕೂಡಾ ಕಪೂರ್ ಮನೆಯ ಪ್ರದೇಶದಲ್ಲಿಯೇ ಇದೆ. ಈ ಮನೆಯನ್ನು 2014ರಲ್ಲಿ ನವಾಜ್ ಷರೀಫ್ ಸರ್ಕಾರ ರಾಷ್ಟ್ರೀಯ ಪಾರಂಪರಿಕ ತಾಣ ಎಂದು ಘೋಷಿಸಿತ್ತು. ಈ ಎರಡು ಮನೆಗಳ ಮಾಲೀಕರು ಹಲವಾರು ಬಾರಿ ಒಡೆಯಲು ಯತ್ನಿಸಿದ್ದು, ಇದಲ್ಲಿ ಕಮರ್ಷಿಯಲ್ ಪ್ಲಾಜಾ ನಿರ್ಮಿಸಲು ಸಿದ್ದತೆ ನಡೆಸಿದ್ದರು. ಆದರೆ ಪುರಾತತ್ವ ಇಲಾಖೆ ಅದಕ್ಕೆ ಅವಕಾಶ ನೀಡದೆ, ಐತಿಹಾಸಿಕ ಪ್ರಾಮುಖ್ಯತೆ ನೀಡಲು ನಿರ್ಧರಿಸಿ ಮನೆ ಧ್ವಂಸಕ್ಕೆ ತಡೆಯೊಡ್ಡಿರುವುದಾಗಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.