Jailer Twitter Review: 1st ಹಾಫ್‌ನಲ್ಲಿ ಮಾಸ್,ಕಾಮಿಡಿ, ಬಿಜಿಎಂನದ್ದೇ ಹವಾ 2nd ಹಾಫ್..
Team Udayavani, Aug 10, 2023, 10:02 AM IST
ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ʼಜೈಲರ್ʼ ಅಬ್ಬರ ಜೋರಾಗಿದೆ. ಮುಂಜಾನೆಯಿಂದಲೇ ಥಿಯೇಟರ್ ಮುಂದೆ ನೂರಾರು ʼತಲೈವಾʼ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದಾರೆ. ಪೋಸ್ಟರ್ ಗಳಿಗೆ ಹಾಲು ಎರೆದು, ಹೂಮಾಲೆ ಹಾಕಿ, ತೆಂಗಿನ ಕಾಯಿ ಒಡೆದು ಶಿಳ್ಳೆ ಹಾಕಿ ಫ್ಯಾನ್ಸ್‌ಗಳು ರಜಿನಿಕಾಂತ್ ಅವರಿಗೆ ಜೈಕಾರ ಹಾಕುತ್ತಿದ್ದಾರೆ.
ಈಗಾಗಲೇ ರಿಲೀಸ್ ಗೂ ಮುನ್ನ ʼಜೈಲರ್ʼ ಸಿನಿಮಾದ 14 ಕೋಟಿಗೂ ಅಧಿಕ ಅಡ್ವಾನ್ಸ್ ಟಿಕೆಟ್ ಬುಕ್ ಆಗಿವೆ. 4000 ಕ್ಕೂ ಅಧಿಕ ಥಿಯೇಟರ್ ಗಳಲ್ಲಿ ಸಿನಿಮಾ ಗ್ರ್ಯಾಂಡ್ ಆಗಿ ತೆರೆ ಕಂಡಿದೆ.
ಇನ್ನು ಪ್ರತಿ ಸಿನಿಮಾದಂತೆ ರಜಿನಿ ಅವರ ʼಜೈಲರ್ʼ ಸಿನಿಮಾಕ್ಕೂ ಅವರ ಅಭಿಮಾನಿಗಳು ಟ್ವಿಟರ್ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. #JailerFDFS (ಫಸ್ಟ್ ಡೇ ಫಸ್ಟ್ ಶೋ) ಎನ್ನುವ ಹ್ಯಾಷ್ ಟ್ಯಾಗ್ ಮೂಲಕ ಫ್ಯಾನ್ಸ್ ಟ್ರೆಂಡ್ ಸೃಷ್ಟಿಸಿ, ಸಿನಿಮಾ ನೋಡಿದ ಬಳಿಕ ತನ್ನ ರಿವ್ಯೂ ಹಾಕುತ್ತಿದ್ದಾರೆ.
ಹೇಗಿದೆ ಟ್ವಿಟರ್ ರಿವ್ಯೂ..
ಸಿನಿಮಾದ ಮೊದಲ ಹಾಫ್ ಚೆನ್ನಾಗಿದೆ. ಇಂಟರ್ ವೆಲ್ ನಲ್ಲಿ ಬರುವ ಫೈಟ್ ಪ್ರೇಕ್ಷಕರನ್ನು ಸೆಳೆಯುತ್ತದೆ. ಸೆಕೆಂಡ್ ಹಾಫ್ ಬ್ಲಾಕ್ ಬಸ್ಟರ್ ಆಗಿದೆ. ಅನಿರುದ್ಧ್ ಮ್ಯೂಸಿಕ್ ಅದ್ಭುತವಾಗಿದೆ. ಇದು ರಜಿನಿ ಕಂಬ್ಯಾಕ್ ಸಿನಿಮಾವೆಂದು ಟ್ವಿಟರ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಟೈಗರ್ ಮುತ್ತುವೇಲ್ ಪಾಂಡಿಯನ್ ಆಗಿ ರಜಿನಿಕಾಂತ್ ಅಬ್ಬರಿಸಿದ್ದಾರೆ.ಇದು ನೆಲ್ಸನ್ ಅವರ ಸ್ಟ್ರಾಂಗ್ ಕಂಬ್ಯಾಕ್. ಚಿತ್ರದ ಮೊದಲ ಹಾಗೂ ಎರಡನೇ ಹಾಫ್ ಎರಡೂ ಕೂಡ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತದೆ. ಸಾಹಸ ದೃಶ್ಯ ಹಾಗೂ ಡಾರ್ಕ್ ಕಾಮಿಡಿ ಸಿನಮಾದಲ್ಲಿ ಚೆನ್ನಾಗಿ ವರ್ಕೌಟ್ ಆಗಿದೆ. ಬಿಜಿಎಂ & ಮ್ಯೂಸಿಕ್ ಅದ್ಭುತವಾಗಿದೆ ಎಂದು ಟ್ವಿಟರ್ ನಲ್ಲಿ ಒಬ್ಬರು ಬರೆದುಕೊಂಡಿದ್ದಾರೆ.
ರಜಿನಿ ನಟನೆ, ಅನಿರುದ್ಧ್ ಮ್ಯೂಸಿಕ್& ಬಿಜಿಎಂ ಹಾಗೂ ಯೋಗಿ ಬಾಬು ಕಾಮಿಡಿಯಿಂದ ಸಿನಿಮಾ ಎಲ್ಲೂ ಕೂಡ ಬೋರಾಗದಂತೆ ಸಾಗುತ್ತದೆಂದು ಟ್ವಿಟರ್ ಬಳಕೆದಾರೊಬ್ಬರು ಬರೆದುಕೊಂಡಿದ್ದಾರೆ.
ಕಾಮಿಡಿ ಟೈಮಿಂಗ್, ರಜಿನಿ ಕ್ಯಾರೆಕ್ಟರ್ ಎಂಟ್ರಿ, ಬಿಜಿಎಂ ಹಾಗೂ ಮಾಸ್ ಅಂಶ ಚಿತ್ರದಲ್ಲಿದೆ. ರಜಿನಿ ಮಾಸ್ ಅವತರಾದಲ್ಲಿ ಮಿಂಚಿದ್ದಾರೆ. ನೆಲ್ಸನ್ ನಿರ್ದೇಶನಕ್ಕೆ ಜೈ ಎನ್ನುವ ಮೂಲಕ ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬ ತನ್ನ ರಿವ್ಯೂ ಬರೆದುಕೊಂಡಿದ್ದಾರೆ.
ಸಿನಿಮಾದ ಫಸ್ಟ್ ಹಾಫ್ ಚೆನ್ನಾಗಿದೆ. ಕಾಮಿಡಿ, ಬಿಜಿಎಂ, ಮಾಸ್ ಸೀನ್ ,ಇಂಟರ್ ವೆಲ್ ಫೈಟ್ ಎಲ್ಲ ಇದೆ. ಆದರೆ ಸೆಕೆಂಡ್ ಹಾಫ್ ಸಿನಮಾ ಇದಕ್ಕೆ ವಿರೋಧವಾಗಿ ಸಾಗುತ್ತದೆ. ನೆಲ್ಸನ್ ಮತ್ತೊಮ್ಮೆ ಸೆಕೆಂಡ್ ಹಾಫ್ ನಿಭಾಯಿಸುವಲ್ಲಿ ಎಡವಿದ್ದಾರೆ ಎಂದು ಕೆಲ ಫ್ಯಾನ್ಸ್ ಗಳು ಟ್ವೀಟ್ ಮಾಡಿದ್ದಾರೆ.
ʼಜೈಲರ್ʼ ನಲ್ಲಿ ರಜಿನಿಕಾಂತ್ ಜೊತೆ ಜಾಕಿ ಶ್ರಾಫ್, ರಮ್ಯಾ ಕೃಷ್ಣನ್, ತಮನ್ನಾ ,ವಿನಾಯಕನ್ ಮುಂತಾದವರು ನಟಿಸಿದ್ದಾರೆ. ಮೋಹನ್‌ಲಾಲ್, ಶಿವ ರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
Super Movie 🔥🔥🥵🥵
Good 1st half
Super interval fight 🔥🔥
Block buster 2nd half 🥵🥵@anirudhofficial pichiekkinchav ra bakkoda bgm 🔥🔥🔥
Super star Rajini Back 🔥🤙🥵🤙#JailerFDFS pic.twitter.com/WMaIw4V70h
— SURY🅰️🅰️🪓 (@SurendraK1447) August 10, 2023
#Jailer first Half Over…#Nelson what a come back🔥👏👏👏#Anirudh Fire🔥#Thalaivar sollavey venaam , God of Maaasssess 🔥🔥🔥
Waiting Second half🔥#JailerFDFS#JailerFDFS pic.twitter.com/8O1SwQMNXg
— Kadiri NTR Fans® Official™ (@kadiriNTR_Fans) August 10, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.