ಅಪಘಾತದಲ್ಲಿ ಸಾವು ಎಂಬ ಸುದ್ದಿ ವೈರಲ್: ವಿಡಿಯೋ ಮಾಡಿ “ನಾನು ಜೀವಂತವಾಗಿದ್ದೇನೆ..” ಎಂದ ನಟಿ
Team Udayavani, Feb 28, 2024, 3:29 PM IST
ಮುಂಬಯಿ: ಇತ್ತೀಚೆಗೆ ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ನಟ – ನಟಿಯರು ಸೇರಿದಂತೆ 9 ಮಂದಿ ಮೃತಪಟ್ಟಿದ್ದರು ಎನ್ನುವ ಸುದ್ದಿಯೊಂದು ಹೊರಬಿದ್ದಿತ್ತು. ಈ ಘಟನೆಯಲ್ಲಿ ʼ ಪಂಚಾಯತ್ 2ʼ ವಿನ ನಟಿ ಆಂಚಲ್ ತಿವಾರಿ ಕೂಡ ಸಾವನ್ನಪಿದ್ದಾರೆ ಎಂದು ವರದಿ ಆಗಿತ್ತು.
ಬಿಹಾರದ ಕೈಮೂರ್ನ್ ದೇವಕಲಿದಲ್ಲಿ ಭಾನುವಾರ(ಫೆ.25 ರಂದು) ಕಾರು ಹಾಗೂ ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಇದರಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದರು. ಇದರಲ್ಲಿ ಭೋಜ್ ಪುರಿಯ ನಟ – ನಟಿ ಹಾಗೂ ಗಾಯಕರು ಕೂಡ ಇದ್ದರು ಎಂದು ವರದಿಯಾಗಿತ್ತು.
ʼಪಂಚಾಯತ್ 2ʼ ಮೂಲಕ ಖ್ಯಾತರಾಗಿದ್ದ ನಟಿ ಆಂಚಲ್ ತಿವಾರಿ ಮತ್ತು ಗಾಯಕ ಛೋಟು ಪಾಂಡೆ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಫೋಟೋ ಸಮೇತ ಸುದ್ದಿ ಹರಿದಾಡಿತ್ತು.
ಈ ಘಟನೆಯ ಬಗ್ಗೆ ವಿಚಾರ ಹೊರಬೀಳುತ್ತಿದ್ದಂತೆ ಆಂಚಲ್, ಅಪಘಾತದಲ್ಲಿ ತಾನು ಸಾವನ್ನಪ್ಪಿಲ್ಲ. ತನಗೇನು ಆಗಿಲ್ಲ ಎಂದು ವಿಡಿಯೋವೊಂದನ್ನು ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಆಂಚಲ್ ಹೆಸರಿನ ಭೋಜ್‌ಪುರಿ ನಟಿ ಸಾವನ್ನಪ್ಪಿದ್ದು, ಅವಳ ಫೋಟೋ ಬದಲು ಸುದ್ದಿ ಮಾಧ್ಯಮಗಳು ʼಪಂಚಾಯತ್ -2ʼ ನಟಿಯ ಫೋಟೋವನ್ನು ಬಳಸಿಕೊಂಡು ಸುದ್ದಿಯನ್ನು ಬಿತ್ತರಿಸಿದೆ ಎಂದು ಅಂಚಲ್ ಹೇಳಿದ್ದಾರೆ.
“ಇದೊಂದು ಸುಳ್ಳು ಸುದ್ದಿ. ಅಪಘಾತದಲ್ಲಿ ಮೃತಪಟ್ಟಿದ್ದು ಭೋಜ್ ಪುರಿ ನಟಿ ಅಂಚಲ್. ನಿಜವಾದ ಆಂಚಲ್ ನಿಮ್ಮ ಮುಂದೆ ಸುರಕ್ಷಿತವಾಗಿದ್ದಾರೆ. ನಾನು ಹಿಂದಿ ಸಿನಿಮಾದ ನಟಿಯಾಗಿದ್ದೇನೆ. ಭೋಜ್ ಪುರಿಯಿಂದ ನನಗೆ ಯಾವ ಸಂಪರ್ಕವೂ ಇಲ್ಲ. ಮಾಧ್ಯಮದವರು ಸುದ್ದಿಯನ್ನು ಬಿತ್ತರಿಸುವ ಮುನ್ನ ದಯವಿಟ್ಟು ಪರಿಶೀಲನೆ ಮಾಡಿಕೊಳ್ಳಿ. ನಿಮ್ಮಿಂದ ನನ್ನ ಸ್ನೇಹಿತರು ಹಾಗೂ ಪೋಷಕರಿಗೆ ಬಹಳ ತೊಂದರೆ ಆಗಿದೆ. ಆದಷ್ಟು ಬೇಗ ಇದನ್ನು ಸರಿ ಮಾಡಿ” ಎಂದು ನಟಿ ವಿಡಿಯೋ ಮೂಲಕ ಹೇಳಿದ್ದಾರೆ.
“ಜನರು ತನ್ನನ್ನು ಪೂನಂ ಪಾಂಡೆಗೆ ಹೋಲಿಸುತ್ತಿದ್ದಾರೆ. ನಾನು ಪಬ್ಲಿಕ್ ಸ್ಟಂಟ್ ಮಾಡುತ್ತಿದ್ದೇನೆ ಹೇಳುತ್ತಿದ್ದಾರೆ. ಇದೆಲ್ಲಾ ಮಾಡಿರುವುದು ಮೀಡಿಯಾದವರು ನನ್ನಲ್ಲ” ಎಂದು ಅವರು ಹೇಳಿದ್ದಾರೆ.
ʼಪಂಚಾಯತ್ 2ʼರಲ್ಲಿ ಪರಮೇಶ್ವರ್ ಅವರ ಮಗಳು ರವೀನಾ ಪಾತ್ರದಲ್ಲಿ ಆಂಚಲ್ ನಟಿಸಿದ್ದರು.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್ಬುಕ್ನಲ್ಲಿ ಹಣಕ್ಕೆ ಬೇಡಿಕೆ: ದೂರು
NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ
Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.