Pawan Kalyan:1st Insta post ನಲ್ಲಿ ಚಿತ್ರರಂಗದ ಕಿರಿ-ಹಿರಿಯರನ್ನು ನೆನೆದ ಪವರ್ ಸ್ಟಾರ್
Team Udayavani, Jul 16, 2023, 6:43 PM IST
ಹೈದರಾಬಾದ್: ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ʼಬ್ರೋʼ ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ತನ್ನ ಪಕ್ಷದ ಜನಸೇನಾ ಪಕ್ಷದ ಯಾತ್ರೆಯನ್ನು ಮುಗಿಸಿದ್ದಾರೆ.
ಟಾಲಿವುಡ್ ಸಿನಿಮಾರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಪವರ್ ಸ್ಟಾರ್ ಆಗಿ ಅಪಾರ ಮನೆ ಮಂದಿಯ ಮನ ಗೆದ್ದಿರುವ ಪವನ್ ಕಲ್ಯಾಣ್ ರಾಜಕೀಯವಾಗಿ ಕಳೆದ ಕೆಲ ವರ್ಷಗಳಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ತನ್ನ ಜನಸೇನಾ ಪಕ್ಷದ ‘ವಾರಾಹಿ ವಿಜಯ’ ಯಾತ್ರೆಯ ಮೊದಲ ಹಂತವನ್ನು ಮುಗಿಸಿ ತನ್ನ ನಿವಾಸದಲ್ಲಿ ಪತ್ನಿಯ ಜೊತೆ ಪೂಜೆಯಲ್ಲಿ ಅವರು ಭಾಗಿಯಾಗಿದ್ದರು.
ಟ್ವಿಟರ್ ನಲ್ಲಿ ಸಕ್ರಿಯವಾಗಿರುವ ಅವರು ಜು.4 ರಂದು ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದಿದ್ದರು. ಯಾವುದೇ ಪೋಸ್ಟ್ ಗಳನ್ನು ಹಾಕದೆ ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದರು. ಇದೀಗ ಪವರ್ ಸ್ಟಾರ್ ಮೊದಲ ಪೋಸ್ಟ್ ಹಾಕಿದ್ದು, ಈ ಪೋಸ್ಟ್ ನಲ್ಲಿ ಹಲವು ವಿಶೇಷಗಳಿವೆ.
ಇದನ್ನೂ ಓದಿ: SRK: ‘ಪಠಾಣ್ʼ ನಿಜವಾಗಿಯೂ ಗಳಿಸಿದ್ದೆಷ್ಟು? ಶಾರುಖ್ ಸಿನಿಮಾ ಬಗ್ಗೆ ವ್ಯಂಗ್ಯವಾಡಿದ ಕಾಜೋಲ್
ತಾನು ಚಿತ್ರರಂಗದಲ್ಲಿ ಸಾಗಿ ಬಂದ ವರ್ಷದಲ್ಲಿ ಪರಿಚಿತರಾದ ಸಹ ನಟರು, ಅವರೊಂದಿಗೆ ಕಳೆದ ಅಮೂಲ್ಯ ಕ್ಷಣಗಳ ಬಗ್ಗೆ ಪೋಸ್ಟ್ ನಲ್ಲಿ ವಿಡಿಯೋ ಮೂಲಕ ತೋರಿಸಿದ್ದಾರೆ. ಮುಖ್ಯವಾಗಿ ಹಿರಿಯ ನಟರಾಗಿರುವ ಚಿರಂಜೀವಿ, ಅಮಿತಾಬ್ ಬಚ್ಚನ್ ಸೇರಿದಂತೆ ಪ್ರಭಾಸ್, ರಾಮ್ ಚರಣ್, ಮಹೇಶ್ ಬಾಬು, ವಿಜಯ್, ಮತ್ತು ಕಾರ್ತಿ ಅವರೊಂದಿಗೆ ಕಳೆದ ಕ್ಷಣವನ್ನು ಹಂಚಿಕೊಂಡಿದ್ದಾರೆ. ಕಾಲಿವುಡ್, ಟಾಲಿವುಡ್ ಮಾತ್ರವಲ್ಲದೆ ಭಾರತೀಯ ಸಿನಿಮಾರಂಗದಲ್ಲಿನ ಪ್ರಮುಖ ಕಲಾವಿದರೊಂದಿಗೂ ಅವರು ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನ ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಅವರೊಂದಿಗೆ ಫೋಟೋ ಸೇರಿದಂತೆ ನಿರ್ದೇಶಕ ರಾಜಮೌಳಿ, ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಸೇರಿದಂತೆ ನಟರು, ನಿರ್ದೇಶಕರು, ನಿರ್ಮಾಪಕರೊಂದಿಗಿರುವ ಫೋಟೋ ಹಾಗೂ ಶೂಟಿಂಗ್ ಸ್ಪಾಟ್ ನಲ್ಲಿನ ಫೋಟೋಗಳು ಇದರಲ್ಲಿವೆ.
ಇಲಿಯಾನಾ ಡಿ ಕ್ರೂಜ್, ಕಾಜಲ್ ಅಗರ್ವಾಲ್ ,ನಿತ್ಯಾ ಮೆನನ್,ಹಾಗೂ ಅವರೊಂದಿಗೆ ನಟಿಸಿರುವ ಖ್ಯಾತ ನಟರಾದ ಬ್ರಹ್ಮಾಜಿ, ಬ್ರಹ್ಮಾನಂದಂ ಮುಂತಾದ ಸಹ ನಟರ ಫೋಟೋಗಳು ವಿಡಿಯೋದಲ್ಲಿದೆ. ನಮ್ಮ ಬಂಧವು ಹೀಗೆಯೇ ಇರಬೇಕೆಂದು ನಾನು ಆಶಿಸುತ್ತೇನೆ ಎಂದು ಪವನ್ ಕಲ್ಯಾಣ್ ಬರೆದಿದ್ದಾರೆ.
ಸದ್ಯ ಈ ಪೋಸ್ಟ್ ಇನ್ಸ್ಟಾಗ್ರಾಮ್ ನಲ್ಲಿ ಭಾರೀ ವೈರಲ್ ಆಗಿದೆ. 72 ಸಾವಿರಕ್ಕೂ ಹೆಚ್ಚಿನ ಮಂದಿ ಕಮೆಂಟ್ ಮಾಡಿದ್ದಾರೆ.
ಸಾಯಿ ಧರಮ್ ತೇಜ್ ಅವರೊಂದಿಗೆ ನಟಿಸಿರುವ ʼಬ್ರೋʼ ಸಿನಿಮಾ ಜು.28 ರಂದು ತೆರೆಗೆ ಬರಲಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.