ಎರಡು ವರ್ಷದ ಬಳಿಕ ‘ವಕೀಲ್ ಸಾಬ್ ‘ನಾಗಿ ಪವನ್ ಕಲ್ಯಾಣ್ : ದಸಾರಕ್ಕೆ ಟೀಸರ್ ಕೊಡುಗೆ
Team Udayavani, Oct 24, 2020, 9:15 PM IST
ನವದೆಹಲಿ : ಟಾಲಿವುಡ್ ಪವರ್ ಸ್ಟಾರ್ ನಟ ಪವನ್ ಕಲ್ಯಾಣ್ 2018 ರಲ್ಲಿ ತೆರಕಂಡ ‘ಅಜ್ಞಾತವಾಸಿ’ ಚಿತ್ರದ ಬಳಿಕ ಸಿನಿಮಾರಂಗದಿಂದ ದೂರ ಉಳಿದು ರಾಜಕೀಯ ಕ್ಷೇತ್ರದಲ್ಲಿ ತೂಡಗಿಕೊಂಡಿದ್ದರು.ಅಭಿಮಾನಿಗಳಿಗೆ ಅವರ ಮುಂದಿನ ಚಿತ್ರ ಯಾವುದೆನ್ನುವ ಕುತೂಹಲ ಇತ್ತು. ಸದ್ಯ ಅಭಿಮಾನಿಗಳ ಕಾತರಕ್ಕೆ ಉತ್ತರ ಸಿಕ್ಕಿದೆ. ಎರಡು ವರ್ಷದ ಬಳಿಕ ಪವರ್ ಸ್ಟಾರ್ ಮತ್ತೆ ಸಿನಿ ಪರದೆಯಲ್ಲಿ ಜಾದೂ ಮಾಡಲಿದ್ದಾರೆ.
‘ವಕೀಲ್ ಸಾಬ್’ ಚಿತ್ರದ ಮೂಲಕ ನಟ ಪವನ್ ಕಲ್ಯಾಣ್ ಮತ್ತೆ ಸಿನಿ ರಂಗಕ್ಕೆ ಎಂಟ್ರಿ ಆಗಲಿದ್ದಾರೆ. ಅಂದ ಹಾಗೆ ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಗೆ ಚಿತ್ರ ತಂಡ ಯೋಜನೆ ಹಾಕಿಕೊಳ್ಳುತ್ತಿದೆ. ವಕೀಲ್ ಸಾಬ್ ಚಿತ್ರ ಇಷ್ಟು ಹೊತ್ತಿಗೆ ಬಿಡುಗೆಡೆ ಆಗಿರಬೇಕಿತ್ತು. ಕೋವಿಡ್ ಕಾರಣದಿಂದ ಮುಂದೂಡಿಕೆ ಆಗಿದೆ. ಈ ಮಧ್ಯ ವಕೀಲ್ ಸಾಬ್ ಚಿತ್ರದ ಟೀಸರ್ ಅಕ್ಟೋಬರ್ 25 ರ ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.
ವಕೀಲ್ ಸಾಬ್ 2016 ರಲ್ಲಿ ಬಾಲಿವುಡ್ ನಲ್ಲಿ ತೆರೆಕಂಡಿದ್ದ ‘ಪಿಂಕ್ ಚಿತ್ರದ ತೆಲುಗು ರಿಮೇಕ್ ಆಗಿದ್ದು, ಪಿಂಕ್ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ತಾಪ್ಸಿ ಪನ್ನು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.ವರದಿಯ ಪ್ರಕಾರ ವಕೀಲ್ ಸಾಬ್ ಚಿತ್ರವನ್ನು ಬೋನಿ ಕಪೂರ್ ಹಾಗೂ ದಿಲ್ ರಾಜು ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗಿದೆ. ಚಿತ್ರವನ್ನು ಶ್ರೀರಾಮ್ ವೇಣು ನಿರ್ದೇಶಿಸಿದ್ದಾರೆ.
ಪವನ್ ಕಲ್ಯಾಣ್ ಜತಗೆ ಚಿತ್ರದಲ್ಲಿ ನಿವೇತಾ ಥಾಮಸ್, ಅಂಜಲಿ,ಅನನ್ಯ ನಾಗಳ್ಳ ಹಾಗೂ ಇತರ ಪ್ರಮುಖ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. ಚಿತ್ರ 2021 ಕ್ಕೆ ಥಿಯೇಟರ್ ಗೆ ಬರಲಿದೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mika Singh: ಮಿಕಾ ಹಾಡಿಗೆ ಫಿದಾ..ಪಾಕ್ ಅಭಿಮಾನಿಯಿಂದ 3 ಕೋಟಿ ರೂ. ವಾಚ್, ಚಿನ್ನ ಗಿಫ್ಟ್
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
Oscars 2025: ಆಸ್ಕರ್ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
Mumbai: ಬಾಲಿವುಡ್ ನಟ ಶಾರುಖ್ ಖಾನ್ ಗೆ ಜೀವ ಬೆದರಿಕೆ ಹಾಕಿದ ವಕೀಲ ಛತ್ತೀಸ್ ಗಢದಲ್ಲಿ ಬಂಧನ
Bollywood: ʼಸಿಂಗಂ ಎಗೇನ್ʼ ಬಳಿಕ ʼಗೋಲ್ ಮಾಲ್ -5ʼಗೆ ಜತೆಯಾಗಲಿದ್ದಾರೆ ಅಜಯ್- ರೋಹಿತ್
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.