ʼPeaky Blindersʼ ಹಾಡು ಕಾಪಿ ಮಾಡಿ ʼಲಿಯೋʼದಲ್ಲಿ ಬಳಸಿದ್ರಾ ಅನಿರುದ್ಧ್?‌ ಏನಿದು ವಿವಾದ?

ವಿವಾದದ ಕುರಿತು ಪ್ರತಿಕ್ರಿಯೆ ಕೊಟ್ಟ Peaky Blinder ಸಂಯೋಜಕ

Team Udayavani, Oct 24, 2023, 2:21 PM IST

tdy-9

ಚೆನ್ನೈ: ದಳಪತಿ ವಿಜಯ್‌ ಅವರ ʼಲಿಯೋʼ ಸಿನಿಮಾ ಎಲ್ಲೆಡೆ ಭರ್ಜರಿ ಸದ್ದು ಮಾಡುತ್ತಿದೆ. ಸಿನಿಮಾಕ್ಕೆ ಅಂದುಕೊಂಡ ಹಾಗೆ ಬಾಕ್ಸ್‌ ಆಫೀಸ್‌ ನಲ್ಲಿ ಧಮಾಕ ಆರಂಭ ಸಿಕ್ಕಿದೆ. ಈಗಾಗಲೇ ವರ್ಲ್ಡ್‌ ವೈಡ್‌ ಸಿನಿಮಾ 400 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

ಸಿನಿಮಾದಲ್ಲಿ ದಳಪತಿ ಅವರ ಮಾಸ್‌ ಲುಕ್‌ & ಸೀನ್‌ ಗಳು ಎಷ್ಟು ಗಮನ ಸೆಳೆಯುತ್ತದೆಯೋ ಅಷ್ಟೇ ಗಮನ ಸೆಳೆಯುವುದು ಅನಿರುದ್ಧ್‌ ಅವರ ಮ್ಯೂಸಿಕ್.‌ ʼಲಿಯೋʼ ಸಿನಿಮಾದ ಮ್ಯೂಸಿಕ್‌ ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಇದೇ ಮ್ಯೂಸಿಕ್‌ ವಿಚಾರವಾಗಿ ಸಂಗೀತ ಸಂಯೋಜಕ ಅನಿರುದ್ಧ್‌ ಅವರು ಟೀಕೆಗೆ ಒಳಗಾಗಿದ್ದಾರೆ.

ʼಲಿಯೋʼ ಸಿನಿಮಾದಲ್ಲಿನ ʼಆರ್ಡನರಿ ಪರ್ಸನ್‌ʼ ಎನ್ನುವ ಹಾಡು ಪ್ರೇಕ್ಷಕರ ಗಮನ ಸೆಳೆಯುತ್ತದೆ. ಈ ಹಾಡಿನ ಬಿಜಿಎಂ ಕಿಕ್‌ ಕೊಡುವಂತಿದೆ. ಟ್ರ್ಯಾಕ್‌ ನ್ನು ಯೂಟ್ಯೂಬ್‌ ಗೆ ಹಾಕುವಂತೆ ಕೆಲ ಫ್ಯಾನ್ಸ್‌ ಗಳು ಆಗ್ರಹಿಸಿದ್ದರು. ಅದರಂತೆ ʼಲಿಯೋʼ ತಂಡ ಹಾಡನ್ನು ಯೂಟ್ಯೂಬ್‌ ಗೆ ಅಪ್ಲೋಡ್‌ ಮಾಡಿದೆ. ಆದರೆ ಇಲ್ಲಿಂದ ವಿವಾದ ಉಂಟಾಗಿದೆ.

ʼಆರ್ಡನರಿ ಪರ್ಸನ್‌ʼ ಹಾಡನ್ನು ಕಾಪಿ ಮಾಡಲಾಗಿದೆ. ಇದನ್ನು ಕದ್ದು ಚಿತ್ರದಲ್ಲಿ ಆಳವಡಿಸಲಾಗಿದೆ ಎಂದು ಅನಿರುದ್ಧ್‌ ಮೇಲೆ ಕೆಲವರು ಆರೋಪವನ್ನು ಮಾಡಿದ್ದಾರೆ. ಓಟ್ನಿಕಾ(Otnicka) ಎನ್ನುವ ಬೆಲರೂಸಿಯನ್ ಮೂಲದ ಗಾಯಕನ ‘ಪೀಕಿ ಬ್ಲೈಂಡರ್ಸ್'(Peaky Blinders) ಹಾಡಿನಿಂದ ಇದನ್ನು ಕಾಪಿ ಮಾಡಲಾಗಿದೆ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.

ಹಾಡನ್ನು ಕೇಳಿ ಅನೇಕರು ಓಟ್ನಿಕಾ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಕೇಳಿದ್ದಾರೆ. ಇದೀಗ ಈ ವಿವಾದದ ಬಗ್ಗೆ ಸ್ವತಃ ಓಟ್ನಿಕಾ ಅವರೇ ಇನ್ಸ್ಟಾಗ್ರಾಮ್‌ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

“ಗೆಳೆಯರೇ, “ಲಿಯೋ” ಚಿತ್ರದ ಕುರಿತು ನಿಮ್ಮ ನೂರಾರು ಸಂದೇಶಗಳು ಬರುತ್ತಿದೆ. ನಾನು ಎಲ್ಲವನ್ನೂ ನೋಡಬಹುದು, ಆದರೆ ಎಲ್ಲರಿಗೂ ಉತ್ತರಿಸುವುದು ಕಷ್ಟ. ಈ ಹಾಡಿನ ಬಗ್ಗೆ ನನ್ನನು ಅನೇಕರು ಕೇಳುತ್ತಿದ್ದಾರೆ. ʼಲಿಯೋʼ ಹಾಡಿನ ಕೆಳಗೆ ನನ್ನನ್ನು ಉಲ್ಲೇಖಿಸಿ ಎಲ್ಲಿದ್ದೀರಾ ಅಂಥ ಕೇಳುತ್ತಿದ್ದಾರೆ. ಸದ್ಯ ಪರಿಸ್ಥಿತಿ ತುಂಬಾ ಅಸ್ಪಷ್ಟವಾಗಿದೆ. ಇದರ ಬಗ್ಗೆ ಪರಿಶೀಲಿಸಿ, ಸ್ಪಷ್ಟನೆ ನೀಡುತ್ತೇನೆ” ಎಂದು ಅವರು ಪೋಸ್ಟ್‌ ನಲ್ಲಿ ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ ಗೆ ಕಾಮೆಂಟ್‌ ಮಾಡಿದ ವ್ಯಕ್ತಿಗೆ ಪ್ರತಿಕ್ರಿಯೆ ನೀಡಿರುವ ಅವರು, “ನನ್ನ ಹಾಡನ್ನು ‘ಲಿಯೋ’ ನಲ್ಲಿ ಬಳಸಿರುವ ಬಗ್ಗೆ ನನಗೆ ತಿಳಿದಿಲ್ಲ. ಲೇಬಲ್ ಹಕ್ಕುಸ್ವಾಮ್ಯವನ್ನು ಹೊಂದಿಲ್ಲ ಮತ್ತು ಕಲಾವಿದನ ಅರಿವಿಲ್ಲದೆ ಪರವಾನಗಿ ನೀಡಲು ಸಾಧ್ಯವಿಲ್ಲ. ಯಾರೂ ನನ್ನನ್ನು ಮತ್ತು ತಂಡವನ್ನು ಸಂಪರ್ಕಿಸಿಲ್ಲ” ಎಂದು ಅವರು ಹೇಳಿದ್ದಾರೆ.

ಅನಿರುದ್ಧ್ ರವಿಚಂದರ್ ‘ಪೀಕಿ ಬ್ಲೈಂಡರ್ಸ್’ನ ಅಭಿಮಾನಿ. ‘ಆರ್ಡಿನರಿ ಪರ್ಸನ್’ ಟ್ರ್ಯಾಕ್ ‘ಪೀಕಿ ಬ್ಲೈಂಡರ್ಸ್’ ನಿಂದ ಪ್ರೇರಿತವಾಗಿದೆ. ಅದನ್ನು ನಕಲು ಮಾಡಿಲ್ಲ ಎಂದು ಕೆಲವರು ಅನಿರುದ್ಧ್‌ ಪರ ಕಾಮೆಂಟ್‌ ಮಾಡಿದ್ದಾರೆ.

ʼಲಿಯೋʼ ಸಿನಿಮಾದಲ್ಲಿ ವಿಜಯ್, ತ್ರಿಶಾ, ಸಂಜಯ್ ದತ್, ಅರ್ಜುನ್ ಸರ್ಜಾ, ಮಿಸ್ಕಿನ್, ಸ್ಯಾಂಡಿ ಮತ್ತು ಗೌತಮ್ ಮೆನನ್ ಸೇರಿದಂತೆ ಸಮಗ್ರ ತಾರಾಗಣವನ್ನು ಹೊಂದಿದೆ. ಮ್ಯಾಥ್ಯೂ ಥಾಮಸ್, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್ ಮತ್ತು ಹಲವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweewqe

TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ

Suniel Shetty: ಆ್ಯಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಅವಘಡ; ಸುನಿಲ್‌ ಶೆಟ್ಟಿಗೆ ಗಂಭೀರ ಗಾಯ

Suniel Shetty: ಆ್ಯಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಅವಘಡ; ಸುನಿಲ್‌ ಶೆಟ್ಟಿಗೆ ಗಂಭೀರ ಗಾಯ

Threat Call: ಸಲ್ಮಾನ್ ಖಾನ್ ಬಳಿಕ ಬಾಲಿವುಡ್ ನಟ ಶಾರುಖ್ ಖಾನ್ ಗೂ ಜೀವ ಬೆದರಿಕೆ

Threat Call: ಸಲ್ಮಾನ್ ಖಾನ್ ಬಳಿಕ ಬಾಲಿವುಡ್ ನಟ ಶಾರುಖ್ ಖಾನ್ ಗೂ ಜೀವ ಬೆದರಿಕೆ

7

SRK: ಶಾರುಖ್ ಭೇಟಿಗೆ 95 ದಿನ ಮನೆ ಹೊರಗೆ ಕಾದು ಕೂತ ಅಭಿಮಾನಿ; ನಟ ಕೊಟ್ಟ ಉಡುಗೊರೆ ಏನು?

10

BʼTown: ʼಪುಷ್ಪ-2ʼಗೆ ದಾರಿ ಬಿಟ್ಟ ವಿಕ್ಕಿ ಕೌಶಲ್‌ ʼಛಾವಾʼ; ರಿಲೀಸ್‌ ಡೇಟ್‌ ಮುಂದೂಡಿಕೆ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.