Pooja Bhatt: ತಂದೆ ಜೊತೆಗಿನ ಲಿಪ್ ಲಾಕ್ ವಿವಾದ; ಮತ್ತೆ ಮೌನ ಮುರಿದ ಪೂಜಾ ಭಟ್
Team Udayavani, Sep 11, 2023, 1:21 PM IST
ಮುಂಬಯಿ: ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾರಂಗದಲ್ಲಿ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ನಟಿ ಪೂಜಾ ಭಟ್ ಇತ್ತೀಚೆಗೆ ಬಿಗ್ ಬಾಸ್ ಓಟಿಟಿ-2 ನಲ್ಲಿ ಭಾಗಿಯಾದ ಬಳಿಕ ಮತ್ತೆ ಸುದ್ದಿಯಾಗಿದ್ದಾರೆ.
80 ರ ದಶಕದಲ್ಲಿ ಬಾಲಿವುಡ್ ನಲ್ಲಿ ಬಿಕಿನಿ ಧರಿಸಿ ಹಾಟ್ & ಬೋಲ್ಡ್ ಲುಕ್ ನಲ್ಲಿ ಪಡ್ಡೆ ಹುಡುಗರ ಗಮನ ಸೆಳೆದ ನಿರ್ದೇಶಕ ಮಹೇಶ್ ಭಟ್ ಅವರ ಪುತ್ರಿ ಪೂಜಾ ಭಟ್ ಅವರಿಗೆ 1989 ರಲ್ಲಿ ಬಂದ ‘ಡ್ಯಾಡಿ’ 1991 ರಲ್ಲಿ ಬಂದ ‘ದಿಲ್ ಹೈ ಕಿ ಮಾಂತಾ ನಹೀನ್’ ಮತ್ತು ‘ಸಡಕ್’ ಸಿನಿಮಾಗಳ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು. ಈ ಎರಡೂ ಸಿನಿಮಾಗಳನ್ನು ಅವರ ತಂದೆಯೇ ನಿರ್ದೇಶನ ಮಾಡಿದ್ದರು. ಬೋಲ್ಡ್ ಆಗಿ ನಟಿಸುವ ಮೂಲಕ ಸಿನಿಮಾರಂಗದಲ್ಲಿ ಮಿಂಚುತ್ತಿದ್ದ ಸಮಯದಲ್ಲಿ ಅವರ ಒಂದು ಫೋಟೋ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು.
ಪೂಜಾ ಭಟ್ ಅವರು ಹಲವು ವಿವಾದಗಳಿಂದ ಸುದ್ದಿಯಾಗಿದ್ದರು. ಈ ವಿವಾದಗಳಲ್ಲಿ ದೊಡ್ಡ ವಿವಾದವಾಗಿದ್ದು ಅವರ ತಂದೆ ಜೊತೆಗಿನ ಲಿಪ್ ಲಾಕ್ ಕಿಸ್ ವಿವಾದ.
ನಟಿ ಪೂಜಾ ಭಟ್ ʼ ಸ್ಟಾರ್ಡಸ್ಟ್ʼ ಮ್ಯಾಗ್ ಜಿನ್ ನಲ್ಲಿ ಪ್ರಕಟವಾದ ಒಂದು ಫೋಟೋ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ತಂದೆ – ಮಗಳಾಗಿರುವ ಪೂಜಾ ಭಟ್ – ಮಹೇಶ್ ಭಟ್ ಪರಸ್ಪರ ಚುಂಬಿಸುವ ( ಲಿಪ್ ಲಾಕ್) ಮಾಡಿಕೊಳ್ಳುವ ಫೋಟೋವನ್ನು ಅಂದು ಮ್ಯಾಗ್ ಜಿನ್ ಗಾಗಿ ಶೂಟ್ ಮಾಡಲಾಗಿತ್ತು. ತಂದೆ ಮಹೇಶ್ ಭಟ್ ಮಡಿಲಿನ ಮೇಲೆ ಕೂತುಕೊಂಡು ಪೂಜಾ ಭಟ್ ಲಿಪ್ ಲಾಕ್ ಮಾಡಿರುವ ಫೋಟೋ ಮ್ಯಾಗ್ ಜಿನ್ ಮುಖಪುಟದಲ್ಲಿ ಪ್ರಕಟಿಸಲಾಗಿತ್ತು.
ಈ ಫೋಟೋಗೆ ಅನೇಕರಿಂದ ವಿರೋಧ ವ್ಯಕ್ತವಾಗಿತ್ತು. ಪೂಜಾ ಭಟ್ – ಮಹೇಶ್ ಭಟ್ ಅವರ ವಿರುದ್ಧ ಜನ ಆಕ್ರೋಶಗೊಂಡಿದ್ದರು.
1990 ರಲ್ಲಿ ಈ ಕಿಸ್ ವಿವಾದ ನಡೆದಿತ್ತು. ಈ ಬಗ್ಗೆ ನಟಿ ಪೂಜಾ ಭಟ್ ಸಂದರ್ಶನವೊಂದರಲ್ಲಿ ಮತ್ತೆ ಮಾತನಾಡಿದ್ದಾರೆ. ತಂದೆಯೊಂದಿಗೆ ಲಿಪ್ ಲಾಕ್ ಮಾಡಿ ನೀವು ಪಶ್ಚಾತ್ತಾಪ ಪಟ್ಟಿದ್ದೀರಾ? ಎಂದು ಸಂದರ್ಶನದಲ್ಲಿ ಕೇಳಲಾಗಿದೆ.
“ಇಲ್ಲ, ಏಕೆಂದರೆ ನಾನು ಅದನ್ನು ತುಂಬಾ ಸರಳವಾಗಿ ನೋಡುತ್ತೇನೆ. ನನ್ನ ಪ್ರಕಾರ ದುರದೃಷ್ಟವಶಾತ್ ಏನಾದರೂ ಆದರೂ ಆ ಕ್ಷಣವನ್ನು ಹೇಗಾದರೂ ಪ್ರತಿನಿಧಿಸಬಹುದು ಮತ್ತು ತಪ್ಪಾಗಿ ನಿರೂಪಿಸಬಹುದು. ನನಗೆ ಈಗಲೂ ನೆನಪಿದೆ ಆಗ ಶಾರುಖ್ ಖಾನ್ ಅವರು ನನಗೆ ಹೇಳಿದ್ದರು. ನಿಮ್ಮ ಮಕ್ಕಳು ಸಣ್ಣದಿರುವಾಗ ನೀವು ಹೆಣ್ಣು ಮಕ್ಕಳನ್ನು ಹೊಂದಿರುವಾಗ ಮಗು ತುಂಬಾ ಸಲಿ ಅಪ್ಪ- ಅಮ್ಮ ನನಗೊಂದು ಕಿಸ್ ಕೊಡಿ ಎಂದು ಹೇಳುತ್ತದೆ. ಆಗ ತಂದೆ – ತಾಯಿ ಈ ರೀತಿ ಮಾಡುತ್ತಾರೆ ಎಂದಿದ್ದರು. ನಾನು ಈಗಲೂ ನನ್ನ ತಂದೆಗೆ 10 ಪೌಂಡ್ ನ ಸಣ್ಣ ಮಗುವೇ ಆಗಿದ್ದೇನೆ. ನನಗೆ ಅವರು ಜೀವನವಿಡೀ ಹೀಗೆಯೇ ಇರುತ್ತಾರೆ” ಎಂದು ಹೇಳಿದ್ದಾರೆ.
“ಅದು ಸಂಪೂರ್ಣವಾಗಿ ಮುಗ್ಧವಾಗಿದ್ದ ಕ್ಷಣವನ್ನು ಸೆರೆ ಹಿಡಿಯಲಾಗಿತ್ತು. ಇದರ ಅರ್ಥವನ್ನು ಓದುವವರು ಓದುತ್ತಾರೆ. ಯಾರು ನೋಡಬೇಕೋ ಅವರು ನೋಡುತ್ತಾರೆ. ನಾನಿಲ್ಲಿ ಅದನ್ನು ನಿವಾರಣೆ ಮಾಡಲು ಕೂತಿಲ್ಲ. ಜನ ಒಂದು ತಂದೆ – ಮಗಳ ಸಂಬಂಧವನ್ನು ಬೇರೆ ದೃಷ್ಟಿಯನ್ನು ನೋಡುತ್ತಾರೋ ಅವರು ಬೇರೇನನ್ನೂ ಮಾಡಬಲ್ಲರು. ಇದೆಲ್ಲ ಹೇಳಿ ನಾವು ಕೌಟುಂಬಿಕ ಮೌಲ್ಯಗಳ ಬಗ್ಗೆ ಮಾತನಾಡುತ್ತೇವೆ. ಇದೊಂದು ರೀತಿಯ ತಮಾಷೆಯ ವಿಚಾರ” ಎಂದು ಅವರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.