ಪ್ರಭಾಸ್ ಫೇಸ್ ಬುಕ್ ಖಾತೆ ಹ್ಯಾಕ್… ಪೋಸ್ಟ್ ನೋಡಿ ಶಾಕ್ ಆದ ಅಭಿಮಾನಿಗಳು


Team Udayavani, Jul 28, 2023, 12:41 PM IST

prabas

ಆಂಧ್ರಪ್ರದೇಶ: ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಇತ್ತೀಚೆಗೆ ‘ಆದಿಪುರುಷ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಸಖತ್ ನಟನೆಯಿಂದ ಅಭಿಮಾನಿಗಳ ಮನ ಗೆದ್ದಿರುವ ಪ್ರಭಾಸ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

ಪ್ರಭಾಸ್ ಪ್ರಸ್ತುತ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಸತತವಾಗಿ ಬ್ಯುಸಿಯಾಗಿದ್ದಾರೆ. ಅದರ ಭಾಗವಾಗಿ ಪ್ರಭಾಸ್ ಮತ್ತೊಂದು ದೊಡ್ಡ ಸಿನಿಮಾ ಕಲ್ಕಿ 2898 ರ ಸಿನಿಮಾದ ಚಿತ್ರೀಕರಣದ ಬ್ಯುಸಿಯಲ್ಲಿದ್ದಾರೆ.

ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಅಂದಹಾಗೆ ಚಿತ್ರದ ಶೇ.80ಕ್ಕೂ ಹೆಚ್ಚು ಚಿತ್ರೀಕರಣ ಈಗಾಗಲೇ ಮುಗಿದಿದೆ. ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ಯಾನ್ ವರ್ಲ್ಡ್ ಚಿತ್ರವಾಗಿ ಬರುತ್ತಿರುವ ಈ ಚಿತ್ರದ ಬಗ್ಗೆ ಪ್ರೇಕ್ಷಕರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಬ್ಯುಸಿಯ ನಡುವೆ ಪ್ರಭಾಸ್ ಅವರ ಫೇಸ್ ಬುಕ್ ಖಾತೆ ಹ್ಯಾಕ್ ಆಗಿದೆಯಂತೆ. ಮೇಲಾಗಿ ಅವರ ಖಾತೆಯಿಂದ ಅನಿರೀಕ್ಷಿತ ಪೋಸ್ಟ್ ಬಂದಿದ್ದು, ಫೇಸ್‌ಬುಕ್ ಪೇಜ್  ಹ್ಯಾಕ್ ಮಾಡಿದ ನಂತರ, ಹ್ಯಾಕರ್‌ಗಳು ‘ಅನ್‌ಲಕ್ಕಿ ಹ್ಯೂಮನ್’ ಮತ್ತು ‘ಬಾಲ್ ಫೇಲ್ಸ್ ಅರೌಂಡ್ ದಿ ವರ್ಲ್ಡ್’ ಶೀರ್ಷಿಕೆಗಳೊಂದಿಗೆ ಎರಡು ವೈರಲ್ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ ಇದನ್ನು ಕಂಡ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ.

ಇತ್ತ ಫೇಸ್ ಬುಕ್ ನಲ್ಲಿ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನಟನ ಗಮನಕ್ಕೆ ಬಂದಿದ್ದು ಕೂಡಲೇ ಎಚ್ಚೆತ್ತುಕೊಂಡ ನಟ ತಮ್ಮ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಸ್ವತಃ ಪ್ರಭಾಸ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಭಾಸ್ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಭಾಸ್ ಅವರ ಕಲ್ಕಿ 2898 ಚಿತ್ರ ಶೇಘ್ರದಲ್ಲೇ ತೆರೆಗೆ ಬರಲಿದ್ದು ಅದ್ಧೂರಿ ಬಜೆಟ್‌ನಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅವರು ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆಯಂತೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸುತ್ತಿದ್ದು, ಮುಂದಿನ ವರ್ಷ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಕಾರು; ಶಾಕ್ ಹೊಡೆದು ಇಬ್ಬರು ಸಾವು, ಮೂವರಿಗೆ ಗಾಯ

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?

Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್‌ ಬಾಸ್‌ʼ ಖ್ಯಾತಿಯ ಅಬ್ದು ವಿವಾಹ

Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್‌ ಬಾಸ್‌ʼ ಖ್ಯಾತಿಯ ಅಬ್ದು ವಿವಾಹ

National Cinema Day: ಈ ದಿನ‌ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್

National Cinema Day: ಈ ದಿನ‌ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

Tumbbad 2: ಪ್ರಳಯ್ ಆಯೇಗಾ..‌ ಹಾರರ್‌ ಥ್ರಿಲ್ಲರ್‌ ‘ತುಂಬಾಡ್ʼ ಸೀಕ್ವೆಲ್‌ ಅನೌನ್ಸ್

Tumbbad 2: ಪ್ರಳಯ್ ಆಯೇಗಾ..‌ ಹಾರಾರ್‌ ಥ್ರಿಲ್ಲರ್‌ ‘ತುಂಬಾಡ್ʼ ಸೀಕ್ವೆಲ್‌ ಅನೌನ್ಸ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.