ಇದೇ ವರ್ಷ ನಡೆಯಲಿದೆಯಂತೆ ಪ್ರಭಾಸ್ ವಿವಾಹ
Team Udayavani, Mar 8, 2022, 1:25 PM IST
ಬಹುನಿರೀಕ್ಷಿತ ‘ರಾಧೆ ಶ್ಯಾಮ್’ ಚಿತ್ರ ಇದೇ ವಾರದಲ್ಲಿ ತೆರೆಕಾಣುತ್ತಿದೆ. ನಟ ಪ್ರಭಾಸ್ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 42 ವರ್ಷ ಪ್ರಾಯದ, ಭಾರತದ ಅತ್ಯಂತ ಅರ್ಹ ಬ್ಯಾಚುಲರ್ ಗಳಲ್ಲಿ ಒಬ್ಬರಾದ ಪ್ರಭಾಸ್ ಅವರ ಮದುವೆಯ ಕುರಿತಾಗಿ ಸುದ್ದಿಗಳು ಹರಿದಾಡುತ್ತಲೇ ಇರುತ್ತದೆ.
ಇದೀಗ ಆಚಾರ್ಯ ವಿನೋದ್ ಕುಮಾರ್ ಎಂಬ ಜ್ಯೋತಿಷಿಯೊಬ್ಬರು ಪ್ರಭಾಸ್ ಮದುವೆ ಯಾವಾಗ ಎಂದು ಭವಿಷ್ಯ ನುಡಿದಿದ್ದಾರೆ. ಒಂದು ವರ್ಷದೊಳಗೆ ಪ್ರಭಾಸ್ ಮದುವೆಯಾಗಲಿದ್ದಾರೆ ಎಂದು ಜ್ಯೋತಿಷಿ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಸಂದರ್ಶನದಲ್ಲಿ, ಪ್ರಭಾಸ್ ಅವರು ಬಾಹುಬಲಿ ನಂತರ ಮದುವೆಯಾಗುವುದಾಗಿ ತಮ್ಮ ಕುಟುಂಬಕ್ಕೆ ತಿಳಿಸಿದ್ದರು ಎಂದು ಬಹಿರಂಗಪಡಿಸಿದರು. ಆದರೆ ಬಾಹುಬಲಿ ನಂತರ ಸಾಹೋ, ಇದೀಗ ರಾಧೆ ಶ್ಯಾಮ್ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದರೂ, ಪ್ರಭಾಸ್ ಮದುವೆಯ ಸುದ್ದಿಯಲ್ಲಿಲ್ಲ. ಆದರೆ ಇದೀಗ ಆಚಾರ್ಯ ವಿನೋದ್ ಕುಮಾರ್ ಎಂಬ ಜ್ಯೋತಿಷಿ ಪ್ರಭಾಸ್ ಮದುವೆ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ:ಚೆನ್ನೈ ಸೂಪರ್ ಕಿಂಗ್ಸ್ ಗೆ ನೆಟ್ ಬೌಲರ್ ಆಗಿ ಸೇರಿದ ಐರ್ಲೆಂಡ್ ತಂಡದ ಪ್ರಮುಖ ಬೌಲರ್
ಇನ್ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಜ್ಯೋತಿಷಿ, 2022ನೇ ವರ್ಷ ಪ್ರಭಾಸ್ ಗೆ ಅತ್ಯಂತ ವಿಶೇಷ ವರ್ಷವಾಗಿರಲಿದೆ. ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ 2022ರ ಅಕ್ಟೋಬರ್ ನಿಂದ 2023ರ ಅಕ್ಟೋಬರ್ ಒಳಗೆ ಮದುವೆಯಾಗಲಿದ್ದಾರೆ ಎಂದಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ ಪ್ರಭಾಸ್ ಮದುವೆ ಬಗ್ಗೆ ಮಾತನಾಡಿದ್ದರು. ಪ್ರೀತಿಯ ಬಗೆಗಿನ ನನ್ನ ಅಂದಾಜು ತಪ್ಪಾಗಿದ್ದೇ ನಾನು ಮದುವೆಯಾಗದಿರಲು ಕಾರಣ. ಬಾಹುಬಲಿ ಚಿತ್ರದ ಬಳಿಕ ನಾನು ಮದುವೆಯಾಗುತ್ತೇನೆ ಎಂದು ಅಮ್ಮನ ಬಳಿ ಹೇಳಿಕೊಂಡಿದೆ. ಈ ಬಗ್ಗೆ ಯಾವಾಗಲೂ ಚರ್ಚೆ ನಡೆಯುತ್ತಿರುತ್ತದೆ. ಅದರಲ್ಲಿ ತಪ್ಪೇನಿದೆ. ಈಗ, ನನಗೆ ಆಯ್ಕೆಯಿಲ್ಲ, ನಾನು ಸರಿಯಾದ ಸಮಯದಲ್ಲಿ ಮದುವೆಯಾಗಿ ನೆಲೆಸಲು ಬಯಸುತ್ತೇನೆ ಎಂದು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.