Salaar: ಪೃಥ್ವಿರಾಜ್ ಸುಕುಮಾರನ್ ಹುಟ್ಟುಹಬ್ಬಕ್ಕೆ ʼಸಲಾರ್ʼ ಪೋಸ್ಟರ್ ಗಿಫ್ಟ್
Team Udayavani, Oct 16, 2023, 12:23 PM IST
ಹೈದರಾಬಾದ್: ಪ್ರಶಾಂತ್ ನೀಲ್ – ಪ್ರಭಾಸ್ ʼಸಲಾರ್ʼ ರಿಲೀಸ್ ಗೆ ದಿನ ನಿಗದಿಯಾಗಿದೆ. ಬಿಡುಗಡೆ ದಿನಾಂಕ ಫೈನಲ್ ಆದ ಬಳಿಕ ಸಿನಿಮಾ ತಂಡ ಪ್ರಚಾರದ ಅಖಾಡಕ್ಕೆ ಮತ್ತೆ ಇಳಿದಿದೆ. ಈ ನಡುವೆ ಸಿನಿಮಾದಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳಲಿರುವ ಪೃಥ್ವಿರಾಜ್ ಸುಕುಮಾರನ್ ಅವರ ಹುಟ್ಟುಹಬ್ಬಕ್ಕೆ ಸ್ಪೆಷೆಲ್ ಪೋಸ್ಟರ್ ರಿಲೀಸ್ ಮಾಡಿದೆ.
ಪ್ಯಾನ್ ಇಂಡಿಯಾ ʼಸಲಾರ್ʼ ಸಿನಿಮಾ ಸಟ್ಟೇರಿದ ದಿನದಿಂದ ನಾನಾ ಕಾರಣದಿಂದ ಸದ್ದು ಮಾಡುತ್ತಿದೆ. ಸಿನಿಮಾದ ಕೆಲ ಕೆಲಸಗಳು ಬಾಕಿಯಿರುವುದರಿಂದ ರಿಲೀಸ್ ಡೇಟ್ ಮುಂದೂಡಿಕೆ ಆಗಿತ್ತು. ಅಂತಿಮವಾಗಿ ಸಿನಿಮಾ ಡಿಸೆಂಬರ್ 22 ರಂದು ರಿಲೀಸ್ ಆಗುವುದಾಗಿ ಸಿನಿಮಾ ತಂಡ ಇತ್ತೀಚೆಗೆ ಅಧಿಕೃತವಾಗಿ ಹೇಳಿತ್ತು.
ಇದನ್ನೂ ಓದಿ: ರಾಮನಗರಕ್ಕೆ ಕಸ ತಂದರೆ ಲಾರಿಗಳಿಗೆ ಬೆಂಕಿ ಹಾಕುತ್ತೇವೆ: ಡಿಸಿಎಂಗೆ ಜೆಡಿಎಸ್ ಎಚ್ಚರಿಕೆ
ಬಹುತಾರಾಗಣವುಳ್ಳ ʼಸಲಾರ್ʼ ಟೀಸರ್ ಮೂಲಕ ಮತ್ತಷ್ಟು ಹೈಪ್ ಹೆಚ್ಚಿಸಿದೆ. ಮಾಲಿವುಡ್ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಸಿನಿಮಾದಲ್ಲಿ ‘ವರ್ಧರಾಜ ಮನ್ನಾರ್’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೋಮವಾರ(ಅ.16 ರಂದು) ಪೃಥ್ವಿರಾಜ್ ಸುಕುಮಾರನ್ ಅವರ 41ನೇ ಹುಟ್ಟುಹಬ್ಬವಾಗಿದ್ದು, ಈ ನಿಟ್ಟಿನಲ್ಲಿ ʼಸಲಾರ್ʼ ತಂಡ ಅವರ ಪಾತ್ರದ ಸ್ಪೆಷೆಲ್ ಪೋಸ್ಟರ್ ರಿಲೀಸ್ ಮಾಡಿ ಬರ್ತ್ ಡೇ ವಿಶ್ ಮಾಡಿದೆ.
ಎರಡು ಪಾರ್ಟ್ ಗಳಲ್ಲಿ ʼಸಲಾರ್ʼ ಸಿನಿಮಾ ರಿಲೀಸ್ ಆಗಲಿದೆ. ಪ್ರಭಾಸ್ ಜೊತೆ ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಗಪತಿ ಬಾಬು, ತಿನ್ನು ಆನಂದ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮತ್ತು ರಾಮಚಂದ್ರರಾಜು ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
Wishing ‘𝐕𝐚𝐫𝐝𝐡𝐚𝐫𝐚𝐣𝐚 𝐌𝐚𝐧𝐧𝐚𝐚𝐫’ 𝗧𝗛𝗘 𝗞𝗜𝗡𝗚 @PrithviOfficial, a majestic birthday.#HBDVardharajaMannaar #HBDPrithvirajSukumaran#SalaarCeaseFire #Salaar @SalaarTheSaga #SalaarCeaseFireOnDec22 pic.twitter.com/hNDdna6CNQ
— Hombale Films (@hombalefilms) October 16, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Mumbai: ಬ್ರೇಕಪ್ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Bollywood: ಹೃತಿಕ್ ರೋಷನ್ ʼಕ್ರಿಶ್ -4ʼ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.