ಬೆಂಗಳೂರಿನಲ್ಲಿ ‘ಪುಷ್ಪ’ ಪ್ರಚಾರ: ಪುನೀತ್ ಮನೆಗೆ ಭೇಟಿ ನೀಡುತ್ತೇನೆಂದ ಅಲ್ಲು ಅರ್ಜುನ್
Team Udayavani, Dec 16, 2021, 9:49 AM IST
ಮೊನ್ನೆಯಷ್ಟೇ ತೆಲುಗಿನ “ಆರ್‌ಆರ್‌ಆರ್’ ತಂಡ ಬೆಂಗಳೂರಿಗೆ ಬಂದು ಚಿತ್ರದ ಪ್ರಚಾರ ಕಾರ್ಯಕೈಗೊಂಡಿತ್ತು. ಈಗ “ಪುಷ್ಪ’ ಸರದಿ. ಅಲ್ಲು ಅರ್ಜುನ್ ನಟನೆಯ ತೆಲುಗು ಚಿತ್ರ “ಪುಷ್ಪ’ ಡಿ.17ರಂದು ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರ “ಪುಷ್ಪ” ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ನಟ ಅಲ್ಲು ಅರ್ಜುನ್, ನಟಿ ರಶ್ಮಿಕಾ ಮಂದಣ್ಣ ಹಾಗೂ ಧನಂಜಯ್ ಚಿತ್ರದ ಬಗ್ಗೆ ಮಾತನಾಡಿದರು.
ಅಲ್ಲು ಅರ್ಜುನ್ ಅವರು ಕರ್ನಾಟಕ, ಅದರಲ್ಲೂ ಬೆಂಗಳೂರಿನ ಜನ ತೋರುತ್ತಿರುವ ಪ್ರೀತಿ ಬಗ್ಗೆ ಹೇಳಿಕೊಂಡರು. “ನಾನು ಸಿನಿಮಾ ರಂಗಕ್ಕೆ ಬರುವ ಮುನ್ನ ಸಾಕಷ್ಟು ಬಾರಿ ಬೆಂಗಳೂರಿಗೆ ಬಂದು ಹೋಗುತ್ತಿದ್ದೆ. ಆಗ ನನಗೆ ಬೆಂಗಳೂರಿನಲ್ಲಿ ನನ್ನ ಸಿನಿಮಾ ರಿಲೀಸ್ ಆಗುತ್ತೆ, ಇಲ್ಲಿ ನನಗೆ ಅಭಿಮಾನಿಗಳಿರುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಇಲ್ಲಿನ ಜನರ ಪ್ರೀತಿಯನ್ನು ನಾನು ಮರೆಯುವುದಿಲ್ಲ’ ಎಂದ ಅಲ್ಲು ಅರ್ಜುನ್, “ಪುಷ್ಪ ಒಂದು ಕಾಲ್ಪನಿಕ ಕಥೆಯುಳ್ಳ ಸಿನಿಮಾ. ಹೆಚ್ಚಿನ ಭಾಗ ಕಾಡಿನಲ್ಲೇ ಚಿತ್ರೀಕರಿಸಿದ್ದು, ಇದಕ್ಕೆ ತಂಡದ ಶ್ರಮವೇಕಾರಣ’ಎಂದರು. ಜೊತೆಗೆ ನಟ ಧನಂಜಯ್, ನಟಿ ರಶ್ಮಿಕಾ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದರು.
ಇದನ್ನೂ ಓದಿ:ವನಿತಾ ಏಕದಿನ ವಿಶ್ವಕಪ್ -2022: ಭಾರತದ ಮೊದಲ ಎದುರಾಳಿ ಪಾಕಿಸ್ಥಾನ
ಇದೇ ವೇಳೆ ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡ ಅಲ್ಲು, “ಸಿನಿಮಾ ಕೆಲಸಗಳಲ್ಲಿ ತೊಡಗಿದ್ದರಿಂದ ಪುನೀತ್ ಅವರ ಮನೆಗೆ ಭೇಟಿ ನೀಡಲು ಆಗಿಲ್ಲ. ಈಗ ನಾನು”ಪುಷ್ಪ’ ಸಿನಿಮಾದ ಪ್ರಚಾರಕ್ಕೆ ಬಂದಿರೋದು. ಈ ಸಂದರ್ಭದಲ್ಲಿ ನಾನು ಅಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ. ಸಿನಿಮಾ ಬಿಡುಗಡೆಯಾದ ನಂತರ ಪುನೀತ್ ಅವರ ಕುಟುಂಬದ ಭೇಟಿಗೆಂದೇ ಬೆಂಗಳೂರಿಗೆ ಬರುತ್ತೇನೆ’ ಎಂದರು.
ಈ ವೇಳೆ “ಸೂಪರ್’ ಎಂದುಕೂಗಿದ ಅಭಿಮಾನಿಗೆ, “ಇದು ಸೂಪರ್ ಎನ್ನುವ ವಿಚಾರವಲ್ಲ, ಇದು ನನ್ನ ಕರ್ತವ್ಯ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಗೆದ್ದವರು ಯಾರು?
Movies: ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಿ ಕೈ ಸುಟ್ಟುಕೊಂಡ ಸ್ಟಾರ್ ಸಿನಿಮಾಗಳು
Salman Khan; ಬಾಲಿವುಡ್ ದಿಗ್ಗಜನಿಗೆ ಮತ್ತೆ ಬೆದರಿಕೆ: 2 ಕೋಟಿ ರೂ. ಬೇಡಿಕೆ
Bollywood: 30 ವರ್ಷದ ಬಳಿಕ ಮತ್ತೆ ಥಿಯೇಟರ್‌ಗೆ ಬರಲಿದ್ದಾರೆ ʼಕರಣ್ ಅರ್ಜುನ್ʼ
Mirzapur The Film : ಸಿನಿಮಾವಾಗಿ ಬರಲಿದೆ ಸೂಪರ್ ಹಿಟ್ ʼಮಿರ್ಜಾಪುರ್ʼ ಸರಣಿ
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.