ಬ್ರೇಕ್ ಅಪ್ ಬಗ್ಗೆ ಇದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ಸುಷ್ಮಿತಾ ಸೇನ್ ಜೋಡಿ..!
ರೋಹ್ಮನ್ ಶಾಲ್ ಹಾಗೂ ಸುಷ್ಮಿತಾ ಸೇನ್ ಶುಕ್ರವಾರ ರಾತ್ರಿ ಕೂಡ ಜೊತೆಯಲ್ಲಿ ಕಾಣಿಸಿಕೊಂಡಿದ್ದರು
Team Udayavani, Feb 13, 2021, 6:56 PM IST
ನವ ದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಸುಷ್ಮಿತಾ ಸೇನ್ ಹಾಗೂ ಅವರ ಗೆಳೆಯ, ಮಾಡೆಲ್ ರೋಹ್ಮನ್ ಶಾಲ್ ಅವರೊಂದಿಗೆ ಮುಂಬೈ ಸಿಟಿಯಲ್ಲಿ ಶನಿವಾರ(ಫೆ. 13) ವಿಹಾರದಲ್ಲಿ ಕಾಣಿಸಿಕೊಳ್ಳುವುದರ ಮೂಲಕ ತಮ್ಮ ಸಂಬಂಧದ ಮೇಲೆ ಇದ್ದ ಎಲ್ಲಾ ಬ್ರೇಕ್ ಅಪ್ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಓದಿ : ಬೈಡನ್ ದಂಪತಿಗಳು ತೆರೆದಿಟ್ಟ ಪ್ರೇಮ್ ಕಹಾನಿ..!
ಈ ಬಾಲಿವುಡ್ ಅಂಗಳದ ಜೋಡಿಗಳು ಮುಂಬೈ ಸಿಟಿಯಲ್ಲಿ ವಿಹಾರದ ಸಂದರ್ಭದಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದು ಈಗ ಬಹಿರಂಗವಾಗಿದೆ. ರೋಹ್ಮನ್ ಶಾಲ್ ಹಾಗೂ ಸುಷ್ಮಿತಾ ಸೇನ್ ಶುಕ್ರವಾರ ರಾತ್ರಿ ಕೂಡ ಜೊತೆಯಲ್ಲಿ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿದೆ.
“ಸಮಸ್ಯೆ ಎಂದರೇ ಅವನು ಬದಲಾಗುತ್ತಾನೆ ಎಂದು ಮಹಿಳೆಯರು ಬಯಸುತ್ತಾರೆ. ಆದರೇ, ಅವನು ಬದಲಾಗುವುದಿಲ್ಲ. ಪುರುಷರು ಮಾಡುವ ತಪ್ಪು ಏನೆಂದರೇ, ಅವಳು ಬದಲಾಗುವುದಿಲ್ಲ ಎಂದುಕೊಳ್ಳುವುದು. ಆದರೇ ಅವಳು ಬದಲಾಗುತ್ತಾಳೆ” ಎಂದು ಮಾಜಿ ಮಿಸ್ ಯೂನಿವರ್ಸ್ ಸುಷ್ಮಿತಾ ಸೇನ್ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ವಿಷಾದವನ್ನು ಸೂಚಿಸುವ ಪೋಸ್ಟ್ ನ ಕಾರಣದಿಂದಾಗಿ, ಸಾಮಾಜಿಕ ಜಾಲತಾಣದಾದ್ಯಂತ ಸುಷ್ಮಿತಾ ಸೇನ್ ಅವರ ಲವ್ ರಿಲೇಶನ್ ಶಿಪ್ ನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಊಹಾಪೋಹಗಳು ಹರಿದಾಡುತ್ತಿತ್ತು.
ಈ ಊಹಾಪೋಹಗಳು ಹರಿದಾಡುತ್ತಿರುವ ಮಧ್ಯದಲ್ಲೇ ಸುಷ್ಮಿತಾ ಸೇನ್ ಇತ್ತೀಚೆಗೆ ಸೋಲೋ ಫೋಟೊವೊಂದನ್ನು ಪೋಸ್ಟ್ ಮಾಡಿದ್ದರು.
ಸದ್ಯ, ಕಿಸ್ ಡೇ ದಿನ ಜೋಡಿ ಹಕ್ಕಿಗಳು ಜೊತೆಯಾಗಿ ಪೋಟೊ ಕ್ಲಿಕ್ಕಿಸಿಕೊಂಡಿರುವುದು ಅಭಿಮಾನಿಗಳಲ್ಲಿದ್ದ ಬೇಸರಗಳನ್ನು ಅಳಿಸಿಹಾಕಿದೆ.
ಓದಿ : ವಿಧಾನಸಭಾ ಚುನಾವಣೆಗೆ ಸಿದ್ಧತೆ : ನಾಳೆ ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.