Video Viral: ವ್ಯಕ್ತಿಯೋರ್ವನಿಗೆ ಚಪ್ಪಲಿಯಲ್ಲಿ ಹೊಡೆದ ಗಾಯಕ ರಾಹತ್ ಪತೇಹ್ ಅಲಿ ಖಾನ್
Team Udayavani, Jan 28, 2024, 7:44 AM IST
ಹೊಸದಿಲ್ಲಿ: ಖ್ಯಾತ ಗಾಯಕ ರಾಹತ್ ಪತೇಹ್ ಅಲಿ ಖಾನ್ ಅವರು ವ್ಯಕ್ತಿಯೋರ್ವನಿಗೆ ಚಪ್ಪಲಿಯಲ್ಲಿ ಹೊಡೆದ ವಿಡಿಯೋ ಇದೀಗ ವೈರಲ್ ಆಗಿದೆ. ಗಾಯಕ ಆ ವ್ಯಕ್ತಿಯನ್ನು ಬಾಟಲಿಯ ಬಗ್ಗೆ ಕೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ವೀಡಿಯೊದಲ್ಲಿ, ರಾಹತ್ ಫತೇಹ್ ಅಲಿ ಖಾನ್ ಕಪ್ಪು ಕುರ್ತಾವನ್ನು ಧರಿಸಿದ್ದು, ವ್ಯಕ್ತಿಯನ್ನು ಪದೇ ಪದೇ ಹೊಡೆಯುತ್ತಿರುವುದನ್ನು ಕಾಣಬಹುದು.
ನಂತರ ಮತ್ತೊಂದು ವೀಡಿಯೊದಲ್ಲಿ, ರಾಹತ್ ಫತೇಹ್ ಅಲಿ ಖಾನ್ ವೈರಲ್ ವೀಡಿಯೊದ ಬಗ್ಗೆ ಸ್ಪಷ್ಟಪಡಿಸಿದರು, ತನ್ನ ವಿದ್ಯಾರ್ಥಿ ಮಾಡಿದ ತಪ್ಪಿಗೆ ಶಿಕ್ಷೆಗೆ ಗುರಿಯಾಗಿದ್ದಾನೆ, ಆದರೆ ನಂತರ ಅವರು ಆತನ ಬಳಿ ಕ್ಷಮೆಯಾಚಿಸಿದ್ದಾರೆ.
ಥಳಿತಕ್ಕೊಳಗಾದ ವ್ಯಕ್ತಿ, ತಾನು ‘ದಮ್ ಕಿಯಾ ಹುವಾ ಪಾನಿ’ (ಪವಿತ್ರ ನೀರು) ಹೊಂದಿರುವ ಬಾಟಲಿಯನ್ನು ಎಲ್ಲೋ ತಪ್ಪಾಗಿ ಇರಿಸಿದ್ದೇನೆ ಎಂದು ಹೇಳಿದರು. “ವಿಡಿಯೋ ವೈರಲ್ ಮಾಡಿದವರು ನನ್ನ ಉಸ್ತಾದ್ ನ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ವ್ಯಕ್ತಿ ಹೇಳಿದರು.
Rahat Fateh Ali Khan issued a clarification justifying his viral video, There was Holy Water in the bottle, not Alcohol !
It seems he compelled the house help to speak words in his favor after the viral video. What say? https://t.co/1IQvEnXlyN pic.twitter.com/R7ythDEr6a
— Ashwini Shrivastava (@AshwiniSahaya) January 27, 2024
ಮತ್ತೊಂದು ವೀಡಿಯೊದಲ್ಲಿ, ಆ ವ್ಯಕ್ತಿ ತನ್ನ ಮಾಸ್ಟರ್ ರಾಹತ್ ಫತೇಲ್ ಅಲಿ ಖಾನ್ ಕ್ಷಮೆ ಕೇಳಿದ್ದಾರೆ, ನನಗೆ ಯಾವುದೇ ದೂರುಗಳಿಲ್ಲ ಎಂದು ಹೇಳಿದರು. “ಉಸ್ತಾದ್ ಜೀ ಬಂದು ನನ್ನಲ್ಲಿ ಕ್ಷಮೆ ಕೇಳಿದರು. ಅವರು ನನ್ನ ತಂದೆ, ಮುರ್ಷಿದ್, ಗುರು. ತಂದೆ ತನ್ನ ಮಗನನ್ನು ಶಿಕ್ಷಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಈ ವಿಡಿಯೋ ವಿವಾದ ಸೃಷ್ಟಿಸುವುದು ನನ್ನ ಉಸ್ತಾದ್ ಅವರನ್ನು ಬ್ಲಾಕ್ ಮೇಲ್ ಮಾಡುವ ವಿಧಾನವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.