ರಾಜವರ್ಧನ್‌ ಹೇಳುವ ನೂರೊಂದು ನೆನಪುಗಳು

Team Udayavani, Jun 8, 2017, 3:41 PM IST

9.jpg

ರಾಜವರ್ಧನ್‌ ಹಾಸ್ಯನಟ ಡಿಂಗ್ರಿ ನಾಗರಾಜ್‌ ಅವರ ಪುತ್ರ. ರಾಜವರ್ಧನ್‌ ಗೆ ಚಿಕ್ಕಂದಿನಿಂದಲೂ ನಟನೆ ಮೇಲೆ ಒಲವಿತ್ತು. ಆದರೆ, ಕಣ್ಣ ಮುಂದೆ ಓದು ಇತ್ತು. ಅಪ್ಪನ ಆಸೆಯಂತೆ ಡಬ್ಬಲ್‌ ಡಿಗ್ರಿ ಮುಗಿಸಿರುವ ರಾಜವರ್ಧನ್‌ ಅಭಿನಯದ ಮೊದಲ ಸಿನಿಮಾ “ನೂರೊಂದು ನೆನಪು’ ನಾಳೆ ಬಿಡುಗಡೆಯಾಗುತ್ತಿದೆ. ಅವರ ಕೆರಿಯರ್‌ ಶುರವಾಗಿ ನಾಲ್ಕು ವರ್ಷಗಳಾಗಿವೆ. ಈಗ ಮೊದಲ ಚಿತ್ರ ರಿಲೀಸ್‌ ಆಗುತ್ತಿದೆ. ಆ ಕುರಿತು ಮಾತನಾಡಿದ್ದಾರೆ.

ಚಿತ್ರರಂಗಕ್ಕೆ ಬಂದು ಮೂರು ವರ್ಷಗಳ ನಂತರ ಮೊದಲ ಚಿತ್ರ ಬಿಡುಗಡೆಯಾಗುತ್ತಿದೆ?
ಮೊದಲ ಚಿತ್ರ. ಸಹಜವಾಗಿಯೇ ಒಂದು ಕಡೆ ಭಯ ಮತ್ತು ಖುಷಿ ಇದೆ. ಜನ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ. ನನ್ನ ಸಿನಿಮಾ ಜರ್ನಿ ಶುರುವಾಗಿದ್ದು 2013ರಲ್ಲಿ. ಈಗ ಒಂದು ಸಿನಿಮಾ ಆಚೆ ಬರುತ್ತಿದೆ. ಇಷ್ಟು ವರ್ಷ ಕಷ್ಟಪಟ್ಟಿದ್ದಕ್ಕೆ ಮೊದಲ ಸಾರ್ಥಕವಾಗುತ್ತಿದೆ.

“ನೂರೊಂದು ನೆನಪು’ ಬಗ್ಗೆ ಹೇಳ್ಳೋದಾದರೆ?
ಇಲ್ಲಿ ಚೇತನ್‌, ಮೇಘನಾ, ನಾನು, ಅರ್ಚನಾ, ಯಶ್‌ ಶೆಟ್ಟಿ ಸೇರಿದಂತೆ ಆರು ಜನ ಕಲಾವಿದರಿದ್ದೇವೆ. ಈ ಆರು ಪಾತ್ರಗಳ ನಡುವಿನ ಕಥೆ ಇದು. 1980ರ ದಶಕದಲ್ಲಿ ಶುರುವಾಗಿ, 1989ರಲ್ಲಿ ಅಂತ್ಯಗೊಳ್ಳುವ ಸ್ಟೋರಿಯಲ್ಲಿ ರೆಟ್ರೋ ಸ್ಟೈಲ್‌ ಹೈಲೆಟ್‌. ಕಂಪ್ಲೀಟ್‌ ರೆಟ್ರೋ ಶೈಲಿಯಲ್ಲಿ ಚಿತ್ರ ಮೂಡಿಬಂದಿದೆ. ಬೆಂಗಳೂರು, ಧಾರವಾಡ, ಬೆಳಗಾವಿಯಲ್ಲಿ ಚಿತ್ರೀಕರಿಸಲಾಗಿದೆ.

ನಿಮ್ಮ ಪಾತ್ರ ಹೇಗಿದೆ?
ನಾನಿಲ್ಲಿ ಡಿಎಸ್‌ಪಿ ಎಂಬ ಪಾತ್ರ ನಿರ್ವಹಿಸಿದ್ದೇನೆ. ಅದೊಂಥರಾ ಅಮಿತಾಭ್‌ ಬಚ್ಚನ್‌ ಅವರನ್ನು ಅನುಕರಣೆ ಮಾಡುವಂತಹ ಪಾತ್ರ. ಅವರ ಹಾವ-ಭಾವ, ನಡೆ, ನುಡಿ ಎಲ್ಲವೂ ಹಾಗೇ ಇರುವಂಥದ್ದು. ಕಾಲೇಜ್‌ನಲ್ಲಿ ಲಾಸ್ಟ್‌ ಬೆಂಚ್‌ ಸ್ಟುಡೆಂಟ್‌ ನಾನು. ಬಿಲ್ಡಪ್‌ ರಾಜನಂತಿರುವ, ಆಟಿಟ್ಯೂಡ್‌ ಇರುವಂತಹ ಪಾತ್ರ. ಇಲ್ಲಿ ಲೆಫ್ಟ್ ಹ್ಯಾಂಡ್‌ ಬಳಕೆ ಹೆಚ್ಚು ಮಾಡಿದ್ದೇನೆ. ಸ್ಮೋಕ್‌ ಮಾಡೋದಿರಲಿ, ಬೈಕ್‌ ಓಡಿಸೋದಿರಲಿ ಎಲ್ಲವೂ ಲೆಫ್ಟ್ಹ್ಯಾಂಡ್‌ನ‌ಲ್ಲೇ ನಡೆಯುತ್ತೆ.

 ಹೇಗಿತ್ತು ಅನುಭವ?
ಇದೊಂದು ಚಾಲೆಂಜಿಂಗ್‌ ಸಿನಿಮಾ ಆಗಿತ್ತು. ಯಾಕೆಂದರೆ, ಇಡೀ ಸಿನಿಮಾವನ್ನು ಕ್ಯಾರಿ ಮಾಡುವ ಪಾತ್ರ ನನ್ನದು. ಆ್ಯಕ್ಷನ್‌, ಕಾಮಿಡಿ, ಸೆಂಟಿಮೆಂಟ್‌ ಎಲ್ಲವೂ ನಮ್ಮ ಮೇಲೆಯೇ ಇರುವುದರಿಂದ ಅದೊಂದು ಹೊಸ ಅನುಭವ ಕಟ್ಟಿಕೊಟ್ಟಿತು. ಒಳ್ಳೇ ಟೀಮ್‌, ಒಳ್ಳೇ ಕಥೆಯಲ್ಲಿ ಕೆಲಸ ಮಾಡಿದ ಖುಷಿ ಇದೆ. ಎಲ್ಲರ ಪ್ರೋತ್ಸಾಹ, ಸಹಕಾರದಿಂದ ನಾನು ಚೆನ್ನಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಇಲ್ಲಿ ಎಲ್ಲರೂ ಹಳಬರಿದ್ದಾರೆ. ನಾನೊಬ್ಬ ಹೊಸಬ. ಹಾಗಾಗಿ, ಅವರಿಂದ ಕಲಿತದ್ದು ಬಹಳವಿದೆ.

 “ನೂರೊಂದು ನೆನಪು’ ಆಯ್ತು. ಮುಂದೆ?
ಹೌದು, ಒಳ್ಳೆಯ ಕಥೆ ಕೇಳುತ್ತಿದ್ದೇನೆ. ಯಾವುದನ್ನೂ ಫೈನಲ್‌ ಮಾಡಿಲ್ಲ. “ಫ್ಲೈ’ ರಿಲೀಸ್‌ಗೆ ರೆಡಿಯಾಗುತ್ತಿದೆ. ಒಳ್ಳೆಯ ಪಾತ್ರಕ್ಕಾಗಿ ಎದುರು ನೋಡುತ್ತಿದ್ದೇನೆ. ಒಂದೆರೆಡು ಮಾತುಕತೆಯಲ್ಲಿದೆ.

ಟಾಪ್ ನ್ಯೂಸ್

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

IFFI 2024:  ತಾಲಿಯಾ..ತಾಲಿಯಾ…ಜೋರ್‌ ದಾರ್‌ ತಾಲಿಯಾ..!

IFFI 2024:  ತಾಲಿಯಾ..ತಾಲಿಯಾ…ಜೋರ್‌ ದಾರ್‌ ತಾಲಿಯಾ..!

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

12-uv-fusion

UV FUsion: ಇತರರನ್ನು ಗೌರವಿಸೋಣ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

Perth test: ಜೈಸ್ವಾಲ್‌, ವಿರಾಟ್‌ ಶತಕ; ಆಸೀಸ್‌ ಗೆ ಭಾರೀ ಗುರಿ ನೀಡಿದ ಭಾರತ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.