![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Nov 15, 2023, 11:09 AM IST
ಚೆನ್ನೈ: ಇತ್ತೀಚೆಗೆ ತೆರೆಕಂಡ ಕಾರ್ತಿಕ್ ಸುಬ್ಬರಾಜ್ ಅವರ ʼಜಿಗರ್ತಾಂಡ ಡಬಲ್ ಎಕ್ಸ್ʼ ಸಿನಿಮಾಕ್ಕೆ ಎಲ್ಲೆಡೆ ಪಾಸಿಟಿವ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಸಿನಿಮಾವನ್ನು ಶ್ಲಾಘಿಸಿದ್ದಾರೆ.
ರಾಘವ ಲಾರೆನ್ಸ್ ಮತ್ತು ಎಸ್‌ಜೆ ಸೂರ್ಯ ಪ್ರಧಾನ ಪಾತ್ರದಲ್ಲಿರುವ ʼ ಜಿಗರ್ತಾಂಡ ಡಬಲ್ ಎಕ್ಸ್ʼ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಕಥೆಯನ್ನೊಳಗೊಂಡಿದೆ. ಚಿತ್ರವನ್ನು ನೋಡಿದ ʼತಲೈವಾʼ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರಿಗೆ ಪತ್ರ ಬರೆದು ಅಭಿನಂದಿಸಿದ್ದಾರೆ.
“ಕಾರ್ತಿಕ್ ಸುಬ್ಬರಾಜ್ ಅವರದು ಅದ್ಭುತ ಕೆಲಸ, ವಿಭಿನ್ನ ಕಥೆ ಮತ್ತು ಕಥಾವಸ್ತು. ಈ ಚಿತ್ರದಲ್ಲಿನ ಹೊಸ ರೀತಿಯ ದೃಶ್ಯಗಳನ್ನು ಸಿನಿಮಾ ಅಭಿಮಾನಿಗಳು ಹಿಂದೆಂದೂ ನೋಡಿಲ್ಲ” ಎಂದು ನಿರ್ದೇಕರ ಕೆಲಸವನ್ನು ಶ್ಲಾಘಿಸಿದ್ದಾರೆ.
ಇನ್ನು ನಟನೆ ಬಗ್ಗೆ ಹೇಳಿರುವ ಅವರು, ರಾಘವ್ ಯಾವಾಗಲೂ ಹೀಗೆಯೇ ನಟಿಸುತ್ತಾರೆ. ವಿಲನ್ ಆಗಿರಲಿ, ಕಾಮಿಡಿ ಪಾತ್ರವೇ ಆಗಿರಲಿ, ಯಾವುದೇ ಪಾತ್ರವೇ ಆಗಿರಲಿ ಎಸ್ ಜೆ ಸೂರ್ಯ ಯಾವಾಗಲೂ ಅದನ್ನು ಅದ್ಭುತವಾಗಿ ನಿಭಾಯಿಸುತ್ತಾರೆ” ಎಂದಿದ್ದಾರೆ.
“ಸಂತೋಷ್ ನಾರಾಯಣನ್ ವಿಭಿನ್ನ ಚಿತ್ರಗಳಿಗೆ ವಿಭಿನ್ನ ಸಂಗೀತ ಸಂಯೋಜಿಸಿದ ರಾಜ. ತಮ್ಮ ಸಂಗೀತದಿಂದ ಚಿತ್ರಕ್ಕೆ ಜೀವ ತುಂಬಿರುವ ಅವರು, ಈ ಚಿತ್ರದಲ್ಲಿ ತಾವು ನಿಜವಾಗಿಯೂ ಮಾಸ್ಟರ್ ಸಂಗೀತ ಸಂಯೋಜಕ ಎಂಬುದನ್ನು ಸಾಬೀತುಪಡಿಸಿದ್ದಾರೆ” ಎಂದಿದ್ದಾರೆ.
ಚಿತ್ರದಲ್ಲಿ ಬಳಸಲಾದ ಆನೆ ಬಗ್ಗೆ ಹೇಳಿರುವ ಅವರು, ಆನೆ ನಟರೊಂದಿಗೆ ಪೈಪೋಟಿಯಾಗಿ ನಟಿಸಿದೆ ಎಂದಿದ್ದಾರೆ.
ಕಾರ್ತಿಕ್ ಸುಬ್ಬರಾಜ್ ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಪತ್ರವನ್ನು ಕಾರ್ತಿಕ್ ಸುಬ್ಬರಾಜ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
When Thalaivar said….
“For my boys” ❤️#JigarthandaDoubleX
Love you Thalaivaaa ❤️❤️ pic.twitter.com/bkNtkedlyU
— karthik subbaraj (@karthiksubbaraj) November 14, 2023
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.