Jailer: ರಜಿನಿಕಾಂತ್ ʼಜೈಲರ್ʼಗೂ ಪ್ರಭಾಸ್ ʼಸಲಾರ್ʼಗೂ ಇದೆ ಒಂದು ಕನೆಕ್ಷನ್: ಏನದು?
Team Udayavani, Aug 17, 2023, 4:17 PM IST
ಚೆನ್ನೈ: ಸದ್ಯ ದಕ್ಷಿಣ ಭಾರತದಲ್ಲಿ ದೊಡ್ಡಮಟ್ಟದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ʼಜೈಲರ್ʼ ಸಿನಿಮಾ ಸದ್ದು ಮಾಡುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಜೊತೆಗೆ ಸಿನಿಮಾ ಥಿಯೇಟರ್ ನಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಅಧಿಕೃತವಾಗಿ ಸಿನಿಮಾ ವರ್ಲ್ಡ್ ವೈಡ್ 375 ಕೋಟಿ ರೂಪಾಯಿಯ ಗಳಿಕೆಯನ್ನು ಕಂಡಿದೆ. ಒಂದೇ ವಾರದಲ್ಲಿ ಸಿನಿಮಾ ಹಲವು ದಾಖಲೆಗಳನ್ನು ಪುಡಿಗಟ್ಟಿದೆ. ಯುಎಸ್ಎ, ಯುಎಇ, ಸಿಂಗಾಪುರ್ ಮತ್ತು ಮಲೇಷ್ಯಾದಲ್ಲೂ ‘ಜೈಲರ್’ ಹವಾ ಜೋರಾಗಿದೆ. ಬುಧವಾರ (ಆ.16 ರಂದು) ಸಿನಿಮಾ ಭಾರತದಲ್ಲಿ 15 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ʼಜೈಲರ್ ʼ ಏಳು ದಿನಗಳಲ್ಲಿ ಕಮಲ್ ಹಾಸನ್ ಅವರ ‘ವಿಕ್ರಮ್’ಸಿನಿಮಾದ ಲೈಫ್ ಟೈಮ್ ಕಲೆಕ್ಷನ್ ನ್ನು ಮೀರಿಸಿದೆ ಎಂದು ವರದಿಯಾಗಿದೆ.
ಆಗಸ್ಟ್ 10 ರಂದು ತೆರೆಕಂಡ ಜೈಲರ್, ವರ್ಲ್ಡ್ ವೈಡ್ ಬೇರೆ ಬೇರೆ ಭಾಷೆಗಳಲ್ಲಿ ತೆರೆಕಂಡಿದೆ. 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಜೈಲರ್ ಭಾರತದಲ್ಲಿ 225.65 ಕೋಟಿ ಕಲೆಕ್ಷನ್ ಮಾಡಿದೆ.
ಈ ನಡುವೆ ʼಜೈಲರ್ʼ ಸಿನಿಮಾಕ್ಕೂ ಪ್ರಭಾಸ್ ಅವರ ʼಸಲಾರ್ʼ ಸಿನಿಮಾಕ್ಕೂ ಒಂದು ಕನೆಕ್ಷನ್ ಇದೆ ಎನ್ನುವ ಬಗೆಗಿನ ಚರ್ಚೆಯನ್ನು ನೆಟ್ಟಿಗರು ಮಾಡುತ್ತಿದ್ದಾರೆ. ‘ಜೈಲರ್’ ಸಿನಿಮಾದ ಒಂದು ದೃಶ್ಯ ʼಸಲಾರ್ʼ ಟೀಸರ್ ನಲ್ಲಿನ ಒಂದು ಡೈಲಾಗ್ಸ್ ಗೆ ಮ್ಯಾಚ್ ಆಗುತ್ತದೆ.
ʼಸಲಾರ್ʼ ಟೀಸರ್ ಅತೀ ಹೆಚ್ಚು ವೀಕ್ಷಣೆ ಕಂಡ ಟೀಸರ್ ಗಳಲ್ಲಿ ಒಂದಾಗಿದೆ. ಆ ಮೂಲಕ ಪ್ರಶಾಂತ್ ನೀಲ್ ಅವರ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.
ʼʼಸಲಾರ್ʼ ಟೀಸರ್ ನಲ್ಲಿ ನಟ ಟಿನ್ನು ಆನಂದ್ ಪ್ರಭಾಸ್ ಅವರನ್ನು ಡೈನೋಸಾರ್ ಗೆ ಹೋಲಿಸಿದ್ದಾರೆ. ಸಿಂಹ, ಹುಲಿ ಮತ್ತು ಚಿರತೆ ಅಪಾಯಕಾರಿ. ಆದರೆ, ಅದು ಜುರಾಸಿಕ್ ಪಾರ್ಕ್‌ನಲ್ಲಿರುವಾಗ ಅಲ್ಲ” ಎನ್ನುವ ಡೈಲಾಗ್ ನ್ನು ಹೇಳುವಾಗ ಪ್ರಭಾಸ್ ಅವರನ್ನು ತೋರಿಸಲಾಗಿದೆ.
ಇದೇ ರೀತಿಯಲ್ಲಿ ʼಜೈಲರ್ʼ ನಲ್ಲಿ ‘ಜೈಲರ್ʼ ನಲ್ಲಿ ಖಳನಾಯಕರೊಬ್ಬರು ರಜಿನಿಕಾಂತ್ ಅವರನ್ನು ಡೈನೋಸಾರ್ ಗೆ ಹೋಲಿಸಿದ್ದಾರೆ. ಅವರು ರಜಿನಿಕಾಂತ್ ಅವರ ಮಗ ವಸಂತ ರವಿಯನ್ನು (ಚಿತ್ರದಲ್ಲಿ) ಮರಿ ಡೈನೋಸಾರ್ ಎಂದು ಕರೆಯುತ್ತಾರೆ.
ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ಇತ್ತೀಚೆಗೆʼ ಡೈನೋಸಾರ್ʼ ಸದ್ಯ ಬಾಕ್ಸ್ ಆಫೀಸ್ ಛಿದ್ರಗೊಳಿಸುವಲ್ಲಿ ನಿರತವಾಗಿದೆ ಎಂದು ಪೋಸ್ಟ್ ಮಾಡಿತ್ತು.
‘ಜೈಲರ್’ ಚಿತ್ರದಲ್ಲಿ ರಜಿನಿಕಾಂತ್, ವಿನಾಯಕನ್, ರಮ್ಯಾ ಕೃಷ್ಣನ್, ವಸಂತ ರವಿ ಮತ್ತು ತಮನ್ನಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದಲ್ಲಿ ಶಿವರಾಜ್ ಕುಮಾರ್, ಮೋಹನ್ ಲಾಲ್ ಮತ್ತು ಜಾಕಿ ಶ್ರಾಫ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸೆಪ್ಟೆಂಬರ್ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.