ರೆಬೆಲ್ ಸ್ಟಾರ್ ಅಭಿಮಾನಿಯ ಕಥೆ ಹೇಳಲಿದ್ದಾರೆ ರಾಕೇಶ್!
Team Udayavani, Mar 13, 2019, 12:01 PM IST
ಕಲಿಯುಗದ ಕರ್ಣ ಅಂತಲೇ ಹೆಸರಾಗಿ ಮರೆಯಾದ ನಂತರವೂ ಜೊತೆಗೇ ಇದ್ದಂತೆ ಭಾಸವಾಗುವ ವ್ಯಕ್ತಿತ್ವ ಹೊಂದಿದ್ದವರು ಅಂಬರೀಶ್. ಅವರು ಬದುಕಿದ್ದಾಗಲೇ ದಂತಕಥೆಯಾಗಿದ್ದವರು. ಇದೀಗ ಪತಿಬೇಕು ಡಾಟ್ ಕಾಮ್ ಚಿತ್ರದ ನಿರ್ದೇಶಕ ತಮ್ಮ ಹೊಸಾ ಚಿತ್ರದಲ್ಲಿ ಅಂಬಿ ಅಭಿಮಾನಿಯೊಬ್ಬನ ರೋಚಕ ಕಥೆ ಹೇಳಲು ತಯಾರಾಗಿದ್ದಾರೆ!
ಪತಿಬೇಕು ಡಾಟ್ ಕಾಮ್ ಚಿತ್ರದ ಮೂಲಕವೇ ರಾಕೇಶ್ ಹೆಸರಾಗಿದ್ದಾರೆ. ಈ ಸಿನಿಮಾ ತೆರೆ ಕಾಣುತ್ತಲೇ ಮುಂದಿನ ಚಿತ್ರಕ್ಕಾಗಿ ತಯಾರಿ ಆರಂಭಿಸಿದ್ದ ರಾಕೇಶ್ ಹೊಸಾ ಚಿತ್ರಕ್ಕೆ ಫ್ಯಾನ್ ಆಫ್ ರೆಬೆಲ್ ಸ್ಟಾರ್ ಎಂಬ ವಿಶಿಷ್ಟವಾದ ಶೀರ್ಷಿಕೆ ಫೈನಲ್ ಮಾಡಿದ್ದಾರೆ.
ಇದು ರೆಬೆಲ್ ಸ್ಟಾರ್ ಅಭಿಮಾನಿಯೊಬ್ಬನ ಕಥೆ. ಮಂಡ್ಯ ಜಿಲ್ಲೆಯ ಗ್ಯಾಮ್ಯ ಶೈಲಿಯಲ್ಲಿ ಇಡೀ ಚಿತ್ರ ಮೂಡಿ ಬರಲಿದೆಯಂತೆ. ಹಾಗಾದ್ರೆ ಇದರ ಹೀರೋ ಯಾರೆಂಬ ಪ್ರಶ್ನೆ ಸಹಜ. ಅದರಲ್ಲಿಯೇ ರಾಕೇಶ್ ಬ್ರಹ್ಮಾಂಡ ಕುತೂಹಲವಿಟ್ಟಿದ್ದಾರೆ. ಅದನ್ನ ಎಲ್ಲರೂ ತಲೆಕೆಡಿಸಿಕೊಳ್ಳುವಂಥಾ ಒಗಟಾಗಿಸಿಬಿಟ್ಟಿದ್ದಾರೆ. ಯಾಕೆಂದರೆ ಈ ಚಿತ್ರದ ಹೀರೋ ರೆಬೆಲ್ ಸ್ಟಾರ್ ಅಂಬರೀಶ್ ಆಪ್ತ ವಲಯದಲ್ಲಿದ್ದವರೇ ಎನ್ನೋದರ ಹೊರತಾಗಿ ಬೇರ್ಯಾವ ಸುಳಿವನ್ನೂ ರಾಕೇಶ್ ಬಿಟ್ಟು ಕೊಟ್ಟಿಲ್ಲ.
ಪ್ರೇಕ್ಷಕರೀಗ ಆ ಹೀರೋ ಯಾರೆಂಬ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಈಗಾಗಲೇ ಟೈಟಲ್ ಕೂಡಾ ರಿಜಿಸ್ಟರ್ ಆಗಿದೆ. ಶೀಘ್ರದಲ್ಲಿಯೇ ಅಂಬರೀಶ್ ಅಂತಿಮ ದರ್ಶನ ನಡೆದಿದ್ದ ಮಂಡ್ಯದ ಮೈದಾನದಲ್ಲಿ ಈ ಚಿತ್ರ ಆರಂಭವಾಗಲಿದೆಯಂತೆ. ಹೀರೋ ಯಾರೆಂದು ಯಾರೂ ಪತ್ತೆ ಹಚ್ಚದಿದ್ದರೆ ಸದ್ಯದಲ್ಲಿಯೇ ರಾಕೇಶ್ ಅದನ್ನು ಬಯಲು ಮಾಡಲಿದ್ದಾರೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
Life threat: ಸಲ್ಮಾನ್ ಮನೆ ಬಾಲ್ಕನಿಗೆ ಬುಲೆಟ್‌ಪ್ರೂಫ್ ಗಾಜು
ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್.. ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.